ಕೆಲವು ವರ್ಷಗಳ ಹಿಂದೆ ಮೇಲಿನ ಒಂದು ವಾಕ್ಯವು ಒಂದು ಸರಕಾರವನ್ನು ಅಧಿಕಾರಕ್ಕೆ ಬರದಂತೆ ಮಾಡಿತ್ತು ಎಂಬುದು ರಾಜಕೀಯ ಪಂಡಿತರ ಅಂಬೋಣ. ಮೇಲಿನ ವಾಕ್ಯವನ್ನು ಓದಿದ ಪ್ರಜೆಗಳು ಭ್ರಮನಿರಸನಗೊಂಡು ಆ ಪಕ್ಷಕ್ಕೆ ವೋಟು ಹಾಕಲಿಲ್ಲ ಎಂಬುದು ಬೇರೆ ಮಾತು.
ಮೇಲೆ ಕುಳಿತವರಿಗೆ ಬಹುಶ: ಯಾವಾಗಲೂ ಹೀಗೆ ಅನ್ನಿಸುತ್ತೇನೋ?, ಮೇಲಿ ಇರುವ ಯಾರನ್ನಾದರೂ ಕೇಳೀ, ಅವರು ತಮ್ಮ ಆಡಳಿತದಲ್ಲಿ ಪ್ರಜೆಗಳು ಸುಖವಾಗಿದ್ದಾರೆ ಎಂದೇ ಭಾವಿಸಿರುತ್ತಾರೆ. ತಮ್ಮ ಆಡಳಿತದಲ್ಲಿ ಕುಂದು ಕೊರತೆಗಳಿಲ್ಲ "ಆಲ್ ಇಸ್ ವೆಲ್" ಅಂತ ತಮ್ಮ ರಾಜ್ಯಭಾರ ಮುಗಿಸುತ್ತಾರೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ವಿಮಾನ ಏರುವಾಗ ಮತ್ತು ಇಳಿಯುವಾಗ, ಮನೆ, ರಸ್ತೆಗಳು ಎಂತ ಚಂದ ಎಂದು ಕಾಣಿಸುವ ಹಾಗೆ, ಕೆಲವು ವರ್ಷಗಳ ಹಿಂದೆ ಮುಂಬೈನಿಂದ ನಮ್ಮ ಬೆಂಗಳೂರಿಗೆ ವರ್ಗಾವಣೆಗೊಂಡು ಬರುವ ತನಕ ಎಲ್ಲವು ಚೆಂದಾಗಿಯೇ ಕಾಣುತಿತ್ತು, ಏಕೆಂದರೆ ಮುಂಬೈ ನನ್ನ ಸಿಟಿಯಾಗಿರಲಿಲ್ಲ ಅಲ್ಲಿ ನಾನು ಅತಿಥಿಯಷ್ಟೇ .
ಮದುವೆಯಾಗಿ ಆರು ತಿಂಗಳು ಕಳೆಯುವಷ್ಟರಲ್ಲಿ ಪತಿ -ಪತ್ನಿಯ ಸಂಬಂದ ತಿಳಿಯುವ ಹಾಗೆ ( ತುಳಿಯುವುದಲ್ಲ :) , ಹಾಗೆ ಪ್ರತಿಬಾ ಪಲಾಯನ ಏಕೆ ನಮಲ್ಲೇ ಹೆಚ್ಚು ಎಂದು ಯೋಚನೆಗಳು ಬೆನ್ನು ಹಿಡಿದವು .
ಇರುವ ಕಂಪನಿಯನ್ನು ಬಿಟ್ಟು ಇನ್ನು ಒಳ್ಳೆಯ ಸಂಬಳ , ಸೌಕರ್ಯ ಕೊಡುವ ಕಂಪನಿಗಳನ್ನು ಕೂಡಿಕೊಳ್ಳುವ (ನಾನೂ ಸೇರಿ ) ಹಾಗೆ ಒಳ್ಳೆಯ ದೇಶವನ್ನೇಕೆ ಸೇರಬಾರದು ?
ಭಾರತ ನನ್ನ ದೇಶ, ನಮ್ಮ ತಾಯಿ ಬಾರತಿ ಎಂದು ಹೇಳಿಕೊಟ್ಟ ಗುರುಗಳು ಈಗ ಬದುಕಿಲ್ಲ ಹಾಗೆಯೇ ಭಾರತ ತಾನಾಗಿ ಉಳಿದಿಲ್ಲ, ಕೇವಲ ರಾಜಕಾರಣಿಗಳ ಭಾರತವಾಗಿದೆ.
kab aayega mera number ??