Monday, September 21, 2015

ರಕ್ತ ಕಣ್ಣೀರು :(
'ಯೇ ಮೇರೇ ವತನ್ ಕೆ ಲೋಗೋ , ಜರ ಆಖ್ ಮೇ ಬರಲೋ ಪಾನಿ '  
ಎಂದು ಲತಾ ಮಂಗೇಶ್ಕರ್ ಹಾಡುತ್ತಿದ್ದರೆ ನೆಹರೂರವರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತಂತೆ.  ಲತಾಜಿಯವರ ಗಾಯನಕ್ಕೆ ಬಹುಶ ಯುದ್ದದಲ್ಲಿ ಮಡಿದ ಯೋಧರ ಮನೆಗಳಲ್ಲಿ ಕಣ್ಣೀರ ಜೊತೆ ರಕ್ತವು ಹರಿದಿರಬಹುದು. ಯುದ್ದಗಳಲ್ಲಿ ತಮ್ಮ ಮಗ, ಪತಿಯನ್ನು ಕಳೆದುಕೊಂಡವರ ಗೋಳು ಶಮನವಾಗಲು ಕಣ್ಣೀರು ಒಂದೇ ಸಾಲದು. 


ಜನವರಿ 26, ಆಗಸ್ಟ್ 15 ರಂದು ಪ್ಲಾಸ್ಟಿಕ್ ದ್ವಜವನ್ನು ಕಾರಿನ ಡ್ಯಾಶ್ ಬೋರ್ಡ್ಗೆ ಅಂಟಿಸಿ,  ಮೈಸೂರು , ಮಡಿಕೇರಿ, ಧರ್ಮಸ್ಥಳ , ತಿರುಪತಿಗೆ ಪರಿವಾರ ಸಮೇತ ಪ್ರವಾಸ ಹಾಕಿದರೆ ಅಂದಿನ ರಜೆ ಮುಕ್ತಾಯ. ಲಾಂಗ್  ವೀಕೆಂಡ್ ಬಂದರಂತೂ ಮುಗಿದೇ ಹೋಯಿತು, ಪ್ರವಾಸ ಹೋಗದಿದ್ದವನೆ ಪಾಪಿ. 

ದೇಶ ಸೇವೆಗೆ ಎಂದು ಸೈನ್ಯಕ್ಕೆ ಸೇರುವವರು ಯಾರು ಎಂದು ತಮಗೆ ಗೊತ್ತೇ? ವೀರ ಸೇನಾನಿಗಳ ವಂಶದವರು ಮತ್ತು ಪದವಿ ಮುಗಿಸಿದ ಕೆಲಸ ಸಿಗದ ಕೇವಲ ಬಡ ನಿರುದ್ಯೋಗಿಗಳು, ಹೊಟ್ಟೆಪಾಡಿಗಾಗಿ ಸೈನ್ಯ ಸೇರುತ್ತಾರೆ.  ಅವರು ರಾಜಕೀಯ ವಶೀಲಿ ಬಾಜಿಯಿಲ್ಲದ ಯುವಕರು, ಸೈನಿಕರ ನೇಮಕಾತಿ ರ‍್ಯಾಲಿ ನಡೆಯುವ ಸ್ಥಳವನ್ನು ರೈಲಿನಲ್ಲೋ, ಬಸ್ಸಿನಲ್ಲೋ ತಲುಪಿ, ರಸ್ತೆ ಬದಿಯಲ್ಲಿ ಅಥವಾ ಕ್ರೀಡಾಂಗಣದ ಬಯಲಲ್ಲೇ ಮಲಗಿಮಲಗಿ ರಾತ್ರಿ ಕಳೆ ಯುತ್ತಾರೆಸಮರ್ಪಕ ಶೌಚಾಲಯ, ಕುಡಿಯುವ ನೀರು, ಸ್ನಾನದ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ಶೌಚಾಲಯಗಳ ಮುಂದೆ ಸರದಿ ಸಾಲು ನಿಲ್ಲಬೇಕಾದ ಅನಿವಾರ್ಯತೆ.ಶೌಚಕ್ಕೆ ಅರ್ಧ ದಿನ ಕಾಯಬೇಕಾದ ಕರ್ಮ, ಹಲವರು ಬೆಳಗಿನ ಬಾಧೆ ತಾಳದೆ ಬಯಲಲ್ಲೇ ಮಾಡಿರುವ ಉದಾಹರಣೆಗಳು ಬೇಕಾದಷ್ಟಿವೆ.ಬೆಳಗ್ಗೆ ಮೈಲುದ್ದ ಸಾಲಿನಲ್ಲಿ ನಿಂತು ತಮ್ಮ ಸರದಿಗೋಸ್ಕರ ಬಿಸಿಲಿನಲ್ಲಿ ಕಾಯುವ ದೃಶ್ಯ ಮನ ಕಲಕುತ್ತದೆ. 

ಹೊಟ್ಟೆಪಾಡಿಗೋಸ್ಕರ ತನ್ನ ಕುಟುಂಬ ಬಿಟ್ಟು, ದೇಶದ ಯಾವುದೊ ಮೂಲೆಯಲ್ಲಿ ಸೇವೆ ಸಲ್ಲಿಸುವ ಜೀವಗಳು ಹುತಾತ್ಮರಾದಾಗ  ಅವರನ್ನೇ ನಂಬಿದ ವಯಸ್ಸಾದ ತಂದೆ-ತಾಯಿಯ ಗತಿ ಏನಾಗಬೇಡ? ಆ ವಯಸಲ್ಲಿ ಕೂಲಿ-ನಾಲಿ ಮಾಡಿ ಬದುಕಲು ಸಾಧ್ಯವೇ? ಸಾಯುವ ತನಕ ಹೊಟ್ಟೆ- ಬಟ್ಟೆಗೆ ಗತಿ ..  ನಿಮಗೆ ಊಹಿಸಲು ಸಹ ಸಾದ್ಯವಿಲ್ಲ. 
ಇವೆಲ್ಲವೂ ನೆನಪಾದದ್ದು ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ. ಪಕ್ಕದ ಸೀಟ್ನಲ್ಲಿದ್ದ ಇಬ್ಬರು ಪ್ರಯಾಣಿಕರು ಆಡುತ್ತಿದ್ದ ಮಾತುಗಳ ಸಾರಾಂಶ ಹೀಗಿತ್ತು: ಅವರ ಅಕ್ಕ ಮತ್ತು ಭಾವ ತಮಗಿದ್ದ ಮಗನನ್ನು ಹೊಟ್ಟೆ ಬಟ್ಟೆ ಕಟ್ಟಿ ಓದಿಸಿ ದೊಡ್ಡ ಮನುಷ್ಯನನ್ನಾಗಿ ಮಾಡಿ ಅವರು ಅವನು ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಮಾಡಿದರು, ಮಗ- ಸೊಸೆ ಜೊತೆ ನೆಮ್ಮದಿಯಾಗಿ ಉಳಿದ ಜೀವನ ಕಳೆಯಬಹುದು ಎಂದು. 
ಆದರೆ ನಂತರ ನಡೆದದ್ದೇ ಬೇರೆ, ಮುದ್ದಿನ ಮಗನಿಗೆ ತನ್ನ ಮಡದಿಯ ಮಾತು ವೇದ -ವಾಕ್ಯವಾಯಿತು, ಅವಳ ಮೋಹದಲ್ಲಿ ತನ್ನ ತಂದೆ-ತಾಯಿಯನ್ನು ಮಾತನ್ನು ನಿರ್ಲಕ್ಷಿಸಲು ಶುರುಮಾಡಿದ. ತನ್ನ ಮಗನಿಗೋಸ್ಕರ ಎಲ್ಲವನ್ನು ತ್ಯಾಗ ಮಾಡಿದ  ಆ ದಂಪತಿಗಳ ಸ್ಥಿತಿ ಯುದ್ದದಲ್ಲಿ ತನ್ನ ಮಗನನ್ನು ಕಳೆದುಕೊಂಡ ತಂದೆ-ತಾಯಿಗಿಂತ ಬೇರೆಯಿರಲಿಲ್ಲ" ಆ ಸೈನಿಕ ವೀರ ಯೋಧನಾದರೆ ಇವನು ಬೇರೆ !
ಬ್ಲಾಗ್ ನ  ಹಲವು ಓದುಗರು ಇದಕ್ಕೆ ಆಕ್ಷೇಪಣೆ ಎತ್ತಿದರಿಂದ ಆ ' ' ಅಸಂಸದೀಯ ಪದವನ್ನು ಕೈ ಬಿಡಲಾಗಿದೆ . 
ಈ ಲೇಖನ ಯಾರ ಕುರಿತು ಅಲ್ಲ ಹಾಗೇನಾದರೂ ಸಮೀಕರಣವಿದ್ದರೆ ಅದು ನಮ್ಮ -ನಿಮ್ಮ ದೌರ್ಬಾಗ್ಯ . 
















Monday, September 14, 2015


ಬಿರಿಯಾನಿ ಪ್ಯಾರಡೈಸ್ 
ಗೆಳೆಯ ನವೀನನ ಜೊತೆ ಬೈಕ್ನಲ್ಲಿ ಮಂಡ್ಯ ಸುತ್ತುತ್ತಿದ್ದಾಗ, ಬನ್ನೂರು ರಸ್ತೆಯಲ್ಲಿ ಇರುವ ಹೋಟೆಲ್ ನಲ್ಲಿ ಬಿರಿಯಾನಿ ವಾಸನೆ ಘಮ್ ಎಂದು ಬರುತಿತ್ತು. ಊಟದ ಸಮಯವಾಗಿರದ ಕಾರಣ ಅದನ್ನು ತಿನ್ನುವ ಯೋಗ ಕೂಡಿಬರಲಿಲ್ಲ. ಇದಕಿಂತ ದುಖ್ಹಕರವಾದ ವಿಷಯ ನಮಗೆ ಬೇರೇನೂ ಇರಲಿಲ್ಲ. ಈಗ ಕೂಡ ಇಲ್ಲ 


                          (ಹಿಗಿದ್ದಿರಬಹುದೇ ಬಿರಿಯಾನಿ ಆ ಹೋಟೆಲ್ನಲ್ಲಿ ?)

ಜವಾಹರ್ ನವೋದಯ ವಿದ್ಯಾಲಯದಲ್ಲಿ ಓದುತ್ತಿದ್ದಾಗ, ನಮಗೆಲ್ಲಾ ಎನ್ಕೌಂಟರ್ ಸ್ಪೆಷಲಿಸ್ಟ್ ಆದ ಶ್ಯಾಮಲಾ ಮೇಡಂದೇ ಹೆದರಿಕೆ, ಎಲ್ಲಿ ಗಲಾಟೆ ಮಾಡುತಿದ್ದ ನಮ್ಮನ್ನು ಎತ್ತಾಕೊಂಡು ಹೋಗಿ ಚೇಂಬರ್ ನಲ್ಲಿ ಎನ್ಕೌಂಟರ್ ಮಾಡಿ ಬಿಡುತ್ತಾರೋ ಎಂಬ ಭಯವಿತ್ತು . ಕೈ ಬೆರಳನ್ನು ತಿರುಗಿಸಿ, ಕಪಾಳ ಮೋಕ್ಷ ಮಾಡುತಿದ್ದ ಪರಿಗೆ ನಮ್ಮ ಶಾಲೆಯಲ್ಲಿದ್ದ ಎಲ್ಲಾ ರೌಡಿಟೈಪಿನ ವಿದ್ಯಾರ್ಥಿಗಳು ತಮ್ಮ ಕಸುಬು ಬಿಟ್ಟು ಓದಿನ ಕಡೆಗೆ ಗಮನ ನೀಡುತ್ತಿದ್ದರು. ಊಟದ ಸಮಯದಲ್ಲಿ ಓಂ ಸಹನಾ ಭವತ್ತು ಪ್ರಾರ್ಥನೆ ಮಾಡದೆ ಊಟ ಮಾಡುವಂತಿರಲಿಲ್ಲ. ಊಟದ ಸಮಯದಲ್ಲಿ "ಬದುಕುವುದಿಕ್ಕೆ ತಿನ್ನಬೇಕು ; ತಿನ್ನುವುದಕೊಸ್ಕರ ಬದುಕುವುದಲ್ಲ " ಎಂಬ ನುಡಿಮುತ್ತುಗಳು ನಮ್ಮ ಕಿವಿಗೆ ಅಪ್ಪಳಿಸುತ್ತಿದ್ದವು. ಅಲ್ಲ ಮೇಡಂ ತಿನುವುದನ್ನು ಬಿಟ್ಟು ಈ  ಜೀವನದಲ್ಲಿ ಮಾಡುವುದಕ್ಕೆ ಏನಿದೆ? ಎಂದು ಕೇಳಬೇಕು ಎಂದೆನಿಸಿದರೂ ಎನ್ಕೌಂಟರ್ ಮಾಡಿಸಿಕೊಳ್ಳಲು ದೈರ್ಯವಿಲ್ಲದೆ ಸುಮ್ಮನಿರಬೇಕಾಗಿತ್ತು. 

ತಿನ್ನುವುದಕೊಸ್ಕರ ತಾನೇ ನಾವು ಓದುವುದು, ಇಂದಿನ ರಾಜಕಾರಣಿಗಳು ದುಡ್ಡು ಮಾಡುವುದು ಏಕಾಗಿ! ತನ್ನ ಮಕ್ಕಳು ಮೊಮ್ಮಕಳು ಕೂತು ತಿಂದರೂ ಮುಗಿಯದಿರಲಿ ಎಂದಲ್ಲವೇ :( ಹಲವು ದಿನಗಳ ಬಳಿಕ ತಮ್ಮ ಸ್ನೇಹಿತ ಮಂಡಳಿ ಸಿಕ್ಕರೆ ತಾವು ಪಾರ್ಟಿ ಮಾಡುವಿರೋ ಇಲ್ಲ ತಾವು ಇಲ್ಲಿವರೆಗೆ ದುಡಿದ ಹಣ ಎಣಿಸುವಿರೋ ?  ಮನುಷ್ಯನ ನಾಲಿಗೆ ಚಪಲಕ್ಕೆ ಬಲಿಯಾಗದಿರುವ ಪ್ರಾಣಿ ಯಾವುದುದದಾರು ಇರಬಹುದೇ . 

ನಮ್ಮ ಕಡೆ ಮದುವೆಗೆ ಅಲ್ಲದಿದ್ದರೂ ಬೀಗರ ಔತಣಕೂಟದಲ್ಲಿ ಬ್ಯಾಟಿಂಗ್ ಮಾಡುವುದು ಮೆಚ್ಚಿನ ಸಂಗತಿ. ಅಷ್ಟೇಕೆ ನಿಮ್ಮ ಮನೆಯಲ್ಲಿ ವಿಶೇಷ ತರಕಾರಿ ತಂದರೆ ಚೂಟಿಯಾಗುವ ಸೊಸೆ-ಮಕ್ಕಳನ್ನು ನೋಡಿಲ್ಲವೇನು? ಇದೆ ಅಲ್ಲವೇ ತಿನ್ನುವ ಮಹಿಮೆ, ಬೇಡದ ನೆಂಟರನ್ನು ಓಡಿಸಲು ಇದೆ ಅಡಿಗೆ ತಾನೇ ಉಪಯೋಗ ಬರುವುದು.  ನನ್ನ ತಮ್ಮನಿಗೆ ಚುರುಕು ಮುಟ್ಟಿಸಲು ಉಪ್ಪಿಟಿಗಿಂತ ಬೇರೆ ತಿಂಡಿಯಿಲ್ಲ . 

ಅರ್ಧ ಗಂಟೆಯಲ್ಲಿ ದಿಡೀರ್ ಬಿರಿಯಾನಿ ಮಾಡುವೆ ಎಂದು ಜಂಬ ಕೊಚ್ಚಿಕೊಂಡು ಬಿರಿಯಾನಿ ಮಾಡಲು ಹೋಗಿ ಖಿಚಡಿ ಮಾಡಿದ ತಂಗಿಗೆ ಏನಾದರು ಹೇಳಲಾದಿತೆ?

                             ವಾತಾಪಿ ಜೀರ್ಣೋಭವ !!!















Sunday, September 13, 2015

ಹಳಿ ತಪ್ಪಿದ್ರೆ ರೈಲು ಬೋಗಿ ಸಿಗುವುದೇ ?

                                         

ದಡ್ದಕನೆ ಉರುಳಿ ಬಿದ್ದ ರೈಲು, ಎಂದೋ ಮರೆಯಾಗಲು ಹೋಗಿ ಬಿದ್ದ ನನ್ನ ಸಂಬಂಧಿ  ಸಹೋದರಿಯನ್ನೇ ಹೋಲುತ್ತಿತ್ತು . 

ಬದುಕು ಎಂದರೆ ನವಿರು ಭಾವನೆಗಳ ಹುಚ್ಚು ಪ್ರವಾಹ, ಮಧುರವಾದ ಒಂದು ಪಯಣ ಎಂದು ತಿಳಿದಿದ್ದವನಿಗೆ, ಸರಿಯಾಗಿ ಗೂಸ ಕೊಟ್ಟ ಘಟನೆ ಇದು .  ರೋಮಿಯೋ ಜೂಲಿಯೆಟ್ , ಜೂಲಿಯಸ್ ಸಿಜರ್ ,ಮತ್ತು ಲೈಲಾ ಮಜ್ನುಗಳ ಮೇಲೆ ತೆಗೆದ ಬಾಲಿವುಡ್ ಚಲನಚಿತ್ರಗಳನ್ನೂ ಹೆಚ್ಚಾಗಿ ನೋಡಿದ ಪರಿಣಾಮ ಎಲ್ಲವು ನಯ ನಯವಾಗಿ ಕಾಣುತ್ತಿದ್ದವು.

ಬದುಕು, ಮದುವೆ ಎಲ್ಲವೂ ಸಿನೆಮಾದಂತೆ ಮಜವಾಗಿರುತ್ತದೆ ಎಂದು ತಿಳಿದಿದ್ದವನಿಗೆ, ಸಂಬಧಿಯ ಈಗಿನ ಪರಿಸ್ತಿತಿ ಎಲ್ಲವು ಬಣ್ಣದ ಬದುಕಲ್ಲ ಅನಿಸಿತು. ಮಿನುಗುವ ತಾರೆ ಕೂಡ ಮಿನುಗಲಿಲ್ಲ !

ಎಲ್ಲವು  ಕಲಸು ಮೇಲೋಗರವಾಗಿ, ಬದುಕು  ದುರ್ಭರವಾಗಿ ಎಲ್ಲರ ಮನೆ-ಮನ ಗಳಿಂದ ದೂರಾಗಿದ್ದ ಸಂಬಧಿಯ ಮೊಬೈಲ್ ಕರೆ, ಎಲ್ಲ ಪರಿವಾರದವರಿಗೂ ಒಂದು ಆಘಾತವಾಗಿತ್ತು. ಏಕೆಂದರೆ ಎಲ್ಲರೂ ಆಗಲೇ ತಮ್ಮ ತಮ್ಮ ಬದುಕು ಕಟ್ಟಿಕೊಂಡು ಹೆಂಡತಿ ಮಕ್ಕಳೇ ಸರ್ವಸ್ವ , ಅವರ ಖುಶಿಯೆ ತಮ್ಮ ಜೀವನದ ಗುರಿ ಎಂದು, ಪ್ರತಿ ತಿಂಗಳು ಸಾಲದ ಮಾಸಿಕ ಕಂತು (E.M.I) ಕಟ್ಟುತ್ತ ಹಾಯಗಿದ್ದವರಿಗೆ ಇನ್ನೆನಾಗಬಹುದು ?



  
ಮಗನ ಮದುವೆಗಿಂತ ಮೊದಲು ಮಗಳ ಮದುವೆ ಎನ್ನುವ ಲೋಕಾರುಡಿ ಇದೆ ಕಾರಣಕ್ಕೆ ಹಿರಿಯರು ಪಾಲಿಸುತ್ತಿದ್ದರೆ ! ಖಂಡಿತ ಹೌದು ಎನ್ನುವುದು ನನ್ನ  ನಿಲುವು. 

ಕುಡುಕ ಗಂಡನ ಕಾಟದಿಂದ ಬೇಸತ್ತು (ಕ್ಷಮಿಸಿ ಕುಡಿಯುವುದು ಈಗಿನ ಫ್ಯಾಷನ್/passion ) ತನ್ನ ಬಗ್ಗೆ ಸಹಾನುಭುತಿ ತೋರಿದ ಮನುಜನ ಜೊತೆ ಬೇರೆ ಊರಿನಲ್ಲಿ ವಾಸ ಮಾಡಲು ಹೋಗಿದ್ದೆ ಅವಳು ಮಾಡಿದ್ದ ಅಪರಾಧವಾಗಿತ್ತು ಇವರಿಗೆ, ತಮ್ಮ ಮನೆಯ ಮರ್ಯಾದೆ (?)ಯನ್ನು ಹಾಳು ಮಾಡಿದಳು ಎನ್ನುವ ಒಂದೇ ಕಾರಣಕ್ಕೆ ಅವಳನ್ನು ಎಲ್ಲರು ಮರೆತುಬಿಟ್ಟಿದ್ದರು. 

ಎಲ್ಲರ ಮನದಲ್ಲಿ ಈಗ ಮುಂದೇನು ಅನ್ನುವುದೇ ಯೋಚನೆ, ಅವಳನ್ನು ಕರೆತಂದರೆ ಎಲ್ಲಿ ತಮ್ಮ ಗೌರವ ಮುಕ್ಕಾಗುವುದೋ ಎಂಬ ಭಯ, ತಮ್ಮ ಮಕ್ಕಳ ಮದುವೆ -ಮುಂಜಿಗೆ ಎಲ್ಲಿ ತೊಡಕಾಗುವಳೊ ಎಂಬ ಅವ್ಯಕ್ತ ಹೆದರಿಕೆಯಲ್ಲಿ ಯಾರೂ ಅವಳಿಗೆ ತಿರುಗಿ ಕರೆ ಮಾಡಲೇ ಇಲ್ಲ. 

ಅತ್ತ ಕೆಲವು ದಶಕದಿಂದ ತನ್ನನ್ನು ಸಲಹಿದ ತನ್ನ ಸ್ನೇಹಿತನ ಮರಣದಿಂದ ನೊಂದ ಸಹೋದರಿ, ತನಗೆ ಇಗಲಾದರು ಹೆತ್ತ ಮನೆಯವರು ದಿಕ್ಕಾದರೆ ಎಂದು ಕಾಯುತ್ತ ಕುಳಿತಿದ್ದಾಳೆ .   

ಎರಡು ಕಡೆಯವರಿಗೆ ಏನನ್ನು ಹೇಳಲಾಗದೆ ಇನ್ನೊಂದು ಜೀವ ಚಡಪಡಿಸುತ್ತಿದೆ. 
"ನಗಲಾರದೆ ಅಳಲಾರದೆ ತೊಳಲಾಡಿದೆ ಜೀವ।।
ಬರಿ ಮಾತಲ್ಲಿ ಹೇಳಲಾಗದೆ ಮನದಾಳದ ನೋವ " ( ಅಣ್ಣಾವ್ರ ಚಿತ್ರ 'ಶ್ರುತಿ ಸೇರಿದಾಗ') 









Sunday, September 6, 2015




ಕಲಿಯುಗದಲ್ಲೂ ಇಚ್ಛಾ ಮರಣಿಗಳು ಇದ್ದಾರೆಯೇ ?

ಮಗೆ ಕೆಲವು ವರ್ಷಗಳ ಹಿಂದೆ  ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ  ವಾಯು ಮಾಲಿನ್ಯ ಮಂಡಳಿಯ ಪ್ರಕಟಣೆ ನೆನಪಿರಬಹುದು   "ವಾಯುಮಾಲಿನ್ಯದಿಂದ ನೀವು ಇಂಚಿಂಚಾಗಿ ಮರಣ ಹೊಂದುವಿರಿ" ಎಂಬುದೇ ಅದು . 

ಇಚ್ಛಾ ಮರಣಿ ಭೀಷ್ಮರ ಹಾಗೆ, ಈ ಕಾಲದಲ್ಲೂ ಇಚ್ಛಾ ಮರಣ ಸಾದ್ಯವೇ? ಸದ್ಯ ಚರ್ಚೆಯಲ್ಲಿರುವ ಸಲ್ಲೆಖನ ವ್ರತ ಕೂಡ ಇಚ್ಛಾ ಮರಣದ ಒಂದು ಮಾದರಿ, ಬೇಡದ ಜೀವನ ಮತ್ತು ದೇಹವನ್ನು ತ್ಯಜಿಸುವ ಒಂದು ಕಠಿಣ ಮಾರ್ಗ.  
ಹಾಗಿದ್ದರೆ ಆತ್ಮಹತ್ಯೆ ಕೂಡ ಅಪರಾಧವಾಗುವುದಿಲ್ಲವೇ? ಆತ್ಮಹತ್ಯೆ ಈಗ ಕೂಡ ಅಪರಾಧ. ಆದರೇ ??

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಅಪ್ಪಿ-ತಪ್ಪಿ ಬದುಕಿದರೆ ಅವನಿಗೆ ಬದುಕುವ ಶಿಕ್ಷೆಯ ಜೊತೆ ನ್ಯಾಯಾಲಯದ ಶಿಕ್ಷೆ, ಸತ್ತರೆ ಅವನ ನಂಬಿದವರಿಗೆ ಶಿಕ್ಷೆ. ಏನೇ ಆದರೂ ಶಿಕ್ಷೆಯಂತು ತಪ್ಪದು . ಒಂದು ಅಫರಾದಕ್ಕೆ ಎರಡು ಶಿಕ್ಷೆ ಭಾರತದ ಸಂವಿದಾನದಲ್ಲಿ ಇಲ್ಲ, ಆದರೆ ಬದುಕುವುದೇ ದುಸ್ತರವಾದಾಗ ಅದು ಶಿಕ್ಷೆಯಲ್ಲವೇ? ಮತ್ತೆ ಇನ್ನೊಂದು  ಶಿಕ್ಷೆ ಬೇಕೇ ? ಉತ್ತರ ತಿಳಿದಿಲ್ಲ .

 ಮಾನ್ಯ ನ್ಯಾಯಾಲಯವು ಸಲ್ಲೆಖನ ವ್ರತ ಆಚರಿಸಲು ಬೇಕಾಗಿರುವ ಅನುಮತಿಯ ಮಾನದಂಡಗಳನ್ನು ಪರಿಶೀಲಿಸಿ, ನಮ್ಮ ಸಂವಿಧಾನದಲ್ಲಿ ಅವನ್ನು ಕೆಲವನ್ನು ಅಳವಡಿಸಲು ಅನುಮತಿ ನೀಡಿದರೆ ದಶಕಗಳ ಜೀವ ಹೋರಾಟ ನಡೆಸಿ, ಕೆಲವು ದಿನಗಳ ಹಿಂದೆ ಜಯಶಾಲಿಯಾದ ಸಹೋದರಿ ಅರುಣಾ ಶಾನಬಾಗ ರೀತಿ ನೊಂದ ದೇಹಗಳಿಗೆ ಮುಕ್ತಿ ದೊರೆಯಬಹುದು.

ಮತ್ತೆ ಕೆಲವರಿದ್ದಾರೆ, ಅವರು ಇಚ್ಛಾ ಮರಣಿಗಳು, ಮದುಮೆಹವಿದ್ದರೂ ಸಕ್ಕರೆರಹಿತ ಕಾಫಿ ಕುಡಿಯದ, ಕೆಟ್ಟ ಕೊಬ್ಬಿನ ಅಂಶ ರಕ್ತದಲ್ಲಿ ವಿಪರೀತವಿದ್ದರೂ ಊರಿನ ಕಡೆಯ ನಾಟಿ ಮರಿಯ ಮಾಂಸವೇ ವಿಶೇಷ ಅಡುಗೆಗೆ ಬೇಕು ಎನ್ನುವವರು ಕೂಡ ಮೇಲಿನ ಗುಂಪಿಗೆ ಸೇರುವುದಿಲ್ಲವೇ?


ಮೊನ್ನೆ ನನ್ನ ಪರಿಚಯದೊಬ್ಬರ ಜೊತೆ ಮಾತುಕಥೆಯಾಡುವಾಗ, ತಮ್ಮ ಉದರ ಶೂಲೆಯ ಬಗ್ಗೆ ಹೇಳುತ್ತಿದರು, ಸ್ವಲ್ಪ ಖಾರ ವಾಗಿರುವ ಊಟ ತಿಂದರೆ ವಾಯು ಪ್ರಕೋಪ ಜಾಸ್ತಿಯಾಗುತ್ತೆ ಎಂದು, ದೇಹ ದಂಡಿಸದ ಎಲ್ಲರಿಗೂ ಕೆಲವೊಮ್ಮೆ ಹಾಗಾಗುವುದು ಸಹಜ ತಾನೇ, ! ಅವರಿಗೆ ವ್ಯಾಯಾಮ ಮಾಡಲು ಹೇಳುವ ಮನಸ್ಸಿತ್ತಾದರು ನೀವು ವ್ಯಾಯಾಮ ಮಾಡುತ್ತಿರ ಎಂದು ಕೇಳಿದರೆ ಎಲ್ಲಿ ನನ್ನ ಮಾನ ಹೋಗುವುದೋ ಎಂದುಕೊಂಡು ಸುಮ್ಮನಾದೆ . ಮಾತು ಮುಂದುವರೆಯುತ್ತಾ ಉಭಯ ಕುಶಲೋಪರಿಗಳ ನಡುವೆ ನಿಮ್ಮ ಮನೆಯಲ್ಲಿ ತಿಂಡಿ ಏನು ಎಂದು ಕೇಳಿದೆ? ಅವರು ಇಂದು ನಮ್ಮ ಮನೆಯಲ್ಲಿ ಆಲೂ ಪರೋಟ ಎಂದರು, ಈಗ ಹೇಳಿ ಮೇಲಿನ ನನ್ನ ಸ್ನೇಹಿತ ಇಚ್ಛಾ ಮರಣಿಯೇ ಅಥವಾ ಅಲ್ಲವೇ ಎಂದು . ಉದರ ಶೂಲೆಯ ಬಗ್ಗೆ ಬೆಂಗಳೂರಿನ ಪ್ರಸಿದ್ದ ಆಸ್ಪತ್ರೆಗೆ ಹೋಗಿ ಎಲ್ಲ ಪರೀಕ್ಷೆಗೆ ಸಾವಿರಾರು ರೂಪಾಯಿಗಳನ್ನು ಸುರಿದ ಬಳಿಕ, ತಜ್ಞರು ಹೇಳಿದ್ದು " Cut down spicy food from your diet" ಅಲ್ಲ ಸ್ವಾಮಿ ಆಲುಗೆಡ್ದೆ ವಾಯು ಅಂತ ಹಿರಿಯರು ಹೇಳಿದ್ದು ಸುಳ್ಳೇ? ಇವರು ಇಚ್ಛೆ ಪಟ್ಟು ಪಟ್ಟು ಮರಣಿಗಳಾಗುತಿಲ್ಲವೆ ? ವಾರಕೊಮ್ಮೆ KFC, McD  ಕೂಡ ಗುಂಪಿಗೆ ಸೇರುತ್ತದೆಯಲ್ಲವೋ!!!






ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...