Monday, September 21, 2015

ರಕ್ತ ಕಣ್ಣೀರು :(
'ಯೇ ಮೇರೇ ವತನ್ ಕೆ ಲೋಗೋ , ಜರ ಆಖ್ ಮೇ ಬರಲೋ ಪಾನಿ '  
ಎಂದು ಲತಾ ಮಂಗೇಶ್ಕರ್ ಹಾಡುತ್ತಿದ್ದರೆ ನೆಹರೂರವರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತಂತೆ.  ಲತಾಜಿಯವರ ಗಾಯನಕ್ಕೆ ಬಹುಶ ಯುದ್ದದಲ್ಲಿ ಮಡಿದ ಯೋಧರ ಮನೆಗಳಲ್ಲಿ ಕಣ್ಣೀರ ಜೊತೆ ರಕ್ತವು ಹರಿದಿರಬಹುದು. ಯುದ್ದಗಳಲ್ಲಿ ತಮ್ಮ ಮಗ, ಪತಿಯನ್ನು ಕಳೆದುಕೊಂಡವರ ಗೋಳು ಶಮನವಾಗಲು ಕಣ್ಣೀರು ಒಂದೇ ಸಾಲದು. 


ಜನವರಿ 26, ಆಗಸ್ಟ್ 15 ರಂದು ಪ್ಲಾಸ್ಟಿಕ್ ದ್ವಜವನ್ನು ಕಾರಿನ ಡ್ಯಾಶ್ ಬೋರ್ಡ್ಗೆ ಅಂಟಿಸಿ,  ಮೈಸೂರು , ಮಡಿಕೇರಿ, ಧರ್ಮಸ್ಥಳ , ತಿರುಪತಿಗೆ ಪರಿವಾರ ಸಮೇತ ಪ್ರವಾಸ ಹಾಕಿದರೆ ಅಂದಿನ ರಜೆ ಮುಕ್ತಾಯ. ಲಾಂಗ್  ವೀಕೆಂಡ್ ಬಂದರಂತೂ ಮುಗಿದೇ ಹೋಯಿತು, ಪ್ರವಾಸ ಹೋಗದಿದ್ದವನೆ ಪಾಪಿ. 

ದೇಶ ಸೇವೆಗೆ ಎಂದು ಸೈನ್ಯಕ್ಕೆ ಸೇರುವವರು ಯಾರು ಎಂದು ತಮಗೆ ಗೊತ್ತೇ? ವೀರ ಸೇನಾನಿಗಳ ವಂಶದವರು ಮತ್ತು ಪದವಿ ಮುಗಿಸಿದ ಕೆಲಸ ಸಿಗದ ಕೇವಲ ಬಡ ನಿರುದ್ಯೋಗಿಗಳು, ಹೊಟ್ಟೆಪಾಡಿಗಾಗಿ ಸೈನ್ಯ ಸೇರುತ್ತಾರೆ.  ಅವರು ರಾಜಕೀಯ ವಶೀಲಿ ಬಾಜಿಯಿಲ್ಲದ ಯುವಕರು, ಸೈನಿಕರ ನೇಮಕಾತಿ ರ‍್ಯಾಲಿ ನಡೆಯುವ ಸ್ಥಳವನ್ನು ರೈಲಿನಲ್ಲೋ, ಬಸ್ಸಿನಲ್ಲೋ ತಲುಪಿ, ರಸ್ತೆ ಬದಿಯಲ್ಲಿ ಅಥವಾ ಕ್ರೀಡಾಂಗಣದ ಬಯಲಲ್ಲೇ ಮಲಗಿಮಲಗಿ ರಾತ್ರಿ ಕಳೆ ಯುತ್ತಾರೆಸಮರ್ಪಕ ಶೌಚಾಲಯ, ಕುಡಿಯುವ ನೀರು, ಸ್ನಾನದ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ಶೌಚಾಲಯಗಳ ಮುಂದೆ ಸರದಿ ಸಾಲು ನಿಲ್ಲಬೇಕಾದ ಅನಿವಾರ್ಯತೆ.ಶೌಚಕ್ಕೆ ಅರ್ಧ ದಿನ ಕಾಯಬೇಕಾದ ಕರ್ಮ, ಹಲವರು ಬೆಳಗಿನ ಬಾಧೆ ತಾಳದೆ ಬಯಲಲ್ಲೇ ಮಾಡಿರುವ ಉದಾಹರಣೆಗಳು ಬೇಕಾದಷ್ಟಿವೆ.ಬೆಳಗ್ಗೆ ಮೈಲುದ್ದ ಸಾಲಿನಲ್ಲಿ ನಿಂತು ತಮ್ಮ ಸರದಿಗೋಸ್ಕರ ಬಿಸಿಲಿನಲ್ಲಿ ಕಾಯುವ ದೃಶ್ಯ ಮನ ಕಲಕುತ್ತದೆ. 

ಹೊಟ್ಟೆಪಾಡಿಗೋಸ್ಕರ ತನ್ನ ಕುಟುಂಬ ಬಿಟ್ಟು, ದೇಶದ ಯಾವುದೊ ಮೂಲೆಯಲ್ಲಿ ಸೇವೆ ಸಲ್ಲಿಸುವ ಜೀವಗಳು ಹುತಾತ್ಮರಾದಾಗ  ಅವರನ್ನೇ ನಂಬಿದ ವಯಸ್ಸಾದ ತಂದೆ-ತಾಯಿಯ ಗತಿ ಏನಾಗಬೇಡ? ಆ ವಯಸಲ್ಲಿ ಕೂಲಿ-ನಾಲಿ ಮಾಡಿ ಬದುಕಲು ಸಾಧ್ಯವೇ? ಸಾಯುವ ತನಕ ಹೊಟ್ಟೆ- ಬಟ್ಟೆಗೆ ಗತಿ ..  ನಿಮಗೆ ಊಹಿಸಲು ಸಹ ಸಾದ್ಯವಿಲ್ಲ. 
ಇವೆಲ್ಲವೂ ನೆನಪಾದದ್ದು ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ. ಪಕ್ಕದ ಸೀಟ್ನಲ್ಲಿದ್ದ ಇಬ್ಬರು ಪ್ರಯಾಣಿಕರು ಆಡುತ್ತಿದ್ದ ಮಾತುಗಳ ಸಾರಾಂಶ ಹೀಗಿತ್ತು: ಅವರ ಅಕ್ಕ ಮತ್ತು ಭಾವ ತಮಗಿದ್ದ ಮಗನನ್ನು ಹೊಟ್ಟೆ ಬಟ್ಟೆ ಕಟ್ಟಿ ಓದಿಸಿ ದೊಡ್ಡ ಮನುಷ್ಯನನ್ನಾಗಿ ಮಾಡಿ ಅವರು ಅವನು ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಮಾಡಿದರು, ಮಗ- ಸೊಸೆ ಜೊತೆ ನೆಮ್ಮದಿಯಾಗಿ ಉಳಿದ ಜೀವನ ಕಳೆಯಬಹುದು ಎಂದು. 
ಆದರೆ ನಂತರ ನಡೆದದ್ದೇ ಬೇರೆ, ಮುದ್ದಿನ ಮಗನಿಗೆ ತನ್ನ ಮಡದಿಯ ಮಾತು ವೇದ -ವಾಕ್ಯವಾಯಿತು, ಅವಳ ಮೋಹದಲ್ಲಿ ತನ್ನ ತಂದೆ-ತಾಯಿಯನ್ನು ಮಾತನ್ನು ನಿರ್ಲಕ್ಷಿಸಲು ಶುರುಮಾಡಿದ. ತನ್ನ ಮಗನಿಗೋಸ್ಕರ ಎಲ್ಲವನ್ನು ತ್ಯಾಗ ಮಾಡಿದ  ಆ ದಂಪತಿಗಳ ಸ್ಥಿತಿ ಯುದ್ದದಲ್ಲಿ ತನ್ನ ಮಗನನ್ನು ಕಳೆದುಕೊಂಡ ತಂದೆ-ತಾಯಿಗಿಂತ ಬೇರೆಯಿರಲಿಲ್ಲ" ಆ ಸೈನಿಕ ವೀರ ಯೋಧನಾದರೆ ಇವನು ಬೇರೆ !
ಬ್ಲಾಗ್ ನ  ಹಲವು ಓದುಗರು ಇದಕ್ಕೆ ಆಕ್ಷೇಪಣೆ ಎತ್ತಿದರಿಂದ ಆ ' ' ಅಸಂಸದೀಯ ಪದವನ್ನು ಕೈ ಬಿಡಲಾಗಿದೆ . 
ಈ ಲೇಖನ ಯಾರ ಕುರಿತು ಅಲ್ಲ ಹಾಗೇನಾದರೂ ಸಮೀಕರಣವಿದ್ದರೆ ಅದು ನಮ್ಮ -ನಿಮ್ಮ ದೌರ್ಬಾಗ್ಯ . 
















No comments:

Post a Comment

ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...