Sunday, September 13, 2015

ಹಳಿ ತಪ್ಪಿದ್ರೆ ರೈಲು ಬೋಗಿ ಸಿಗುವುದೇ ?

                                         

ದಡ್ದಕನೆ ಉರುಳಿ ಬಿದ್ದ ರೈಲು, ಎಂದೋ ಮರೆಯಾಗಲು ಹೋಗಿ ಬಿದ್ದ ನನ್ನ ಸಂಬಂಧಿ  ಸಹೋದರಿಯನ್ನೇ ಹೋಲುತ್ತಿತ್ತು . 

ಬದುಕು ಎಂದರೆ ನವಿರು ಭಾವನೆಗಳ ಹುಚ್ಚು ಪ್ರವಾಹ, ಮಧುರವಾದ ಒಂದು ಪಯಣ ಎಂದು ತಿಳಿದಿದ್ದವನಿಗೆ, ಸರಿಯಾಗಿ ಗೂಸ ಕೊಟ್ಟ ಘಟನೆ ಇದು .  ರೋಮಿಯೋ ಜೂಲಿಯೆಟ್ , ಜೂಲಿಯಸ್ ಸಿಜರ್ ,ಮತ್ತು ಲೈಲಾ ಮಜ್ನುಗಳ ಮೇಲೆ ತೆಗೆದ ಬಾಲಿವುಡ್ ಚಲನಚಿತ್ರಗಳನ್ನೂ ಹೆಚ್ಚಾಗಿ ನೋಡಿದ ಪರಿಣಾಮ ಎಲ್ಲವು ನಯ ನಯವಾಗಿ ಕಾಣುತ್ತಿದ್ದವು.

ಬದುಕು, ಮದುವೆ ಎಲ್ಲವೂ ಸಿನೆಮಾದಂತೆ ಮಜವಾಗಿರುತ್ತದೆ ಎಂದು ತಿಳಿದಿದ್ದವನಿಗೆ, ಸಂಬಧಿಯ ಈಗಿನ ಪರಿಸ್ತಿತಿ ಎಲ್ಲವು ಬಣ್ಣದ ಬದುಕಲ್ಲ ಅನಿಸಿತು. ಮಿನುಗುವ ತಾರೆ ಕೂಡ ಮಿನುಗಲಿಲ್ಲ !

ಎಲ್ಲವು  ಕಲಸು ಮೇಲೋಗರವಾಗಿ, ಬದುಕು  ದುರ್ಭರವಾಗಿ ಎಲ್ಲರ ಮನೆ-ಮನ ಗಳಿಂದ ದೂರಾಗಿದ್ದ ಸಂಬಧಿಯ ಮೊಬೈಲ್ ಕರೆ, ಎಲ್ಲ ಪರಿವಾರದವರಿಗೂ ಒಂದು ಆಘಾತವಾಗಿತ್ತು. ಏಕೆಂದರೆ ಎಲ್ಲರೂ ಆಗಲೇ ತಮ್ಮ ತಮ್ಮ ಬದುಕು ಕಟ್ಟಿಕೊಂಡು ಹೆಂಡತಿ ಮಕ್ಕಳೇ ಸರ್ವಸ್ವ , ಅವರ ಖುಶಿಯೆ ತಮ್ಮ ಜೀವನದ ಗುರಿ ಎಂದು, ಪ್ರತಿ ತಿಂಗಳು ಸಾಲದ ಮಾಸಿಕ ಕಂತು (E.M.I) ಕಟ್ಟುತ್ತ ಹಾಯಗಿದ್ದವರಿಗೆ ಇನ್ನೆನಾಗಬಹುದು ?



  
ಮಗನ ಮದುವೆಗಿಂತ ಮೊದಲು ಮಗಳ ಮದುವೆ ಎನ್ನುವ ಲೋಕಾರುಡಿ ಇದೆ ಕಾರಣಕ್ಕೆ ಹಿರಿಯರು ಪಾಲಿಸುತ್ತಿದ್ದರೆ ! ಖಂಡಿತ ಹೌದು ಎನ್ನುವುದು ನನ್ನ  ನಿಲುವು. 

ಕುಡುಕ ಗಂಡನ ಕಾಟದಿಂದ ಬೇಸತ್ತು (ಕ್ಷಮಿಸಿ ಕುಡಿಯುವುದು ಈಗಿನ ಫ್ಯಾಷನ್/passion ) ತನ್ನ ಬಗ್ಗೆ ಸಹಾನುಭುತಿ ತೋರಿದ ಮನುಜನ ಜೊತೆ ಬೇರೆ ಊರಿನಲ್ಲಿ ವಾಸ ಮಾಡಲು ಹೋಗಿದ್ದೆ ಅವಳು ಮಾಡಿದ್ದ ಅಪರಾಧವಾಗಿತ್ತು ಇವರಿಗೆ, ತಮ್ಮ ಮನೆಯ ಮರ್ಯಾದೆ (?)ಯನ್ನು ಹಾಳು ಮಾಡಿದಳು ಎನ್ನುವ ಒಂದೇ ಕಾರಣಕ್ಕೆ ಅವಳನ್ನು ಎಲ್ಲರು ಮರೆತುಬಿಟ್ಟಿದ್ದರು. 

ಎಲ್ಲರ ಮನದಲ್ಲಿ ಈಗ ಮುಂದೇನು ಅನ್ನುವುದೇ ಯೋಚನೆ, ಅವಳನ್ನು ಕರೆತಂದರೆ ಎಲ್ಲಿ ತಮ್ಮ ಗೌರವ ಮುಕ್ಕಾಗುವುದೋ ಎಂಬ ಭಯ, ತಮ್ಮ ಮಕ್ಕಳ ಮದುವೆ -ಮುಂಜಿಗೆ ಎಲ್ಲಿ ತೊಡಕಾಗುವಳೊ ಎಂಬ ಅವ್ಯಕ್ತ ಹೆದರಿಕೆಯಲ್ಲಿ ಯಾರೂ ಅವಳಿಗೆ ತಿರುಗಿ ಕರೆ ಮಾಡಲೇ ಇಲ್ಲ. 

ಅತ್ತ ಕೆಲವು ದಶಕದಿಂದ ತನ್ನನ್ನು ಸಲಹಿದ ತನ್ನ ಸ್ನೇಹಿತನ ಮರಣದಿಂದ ನೊಂದ ಸಹೋದರಿ, ತನಗೆ ಇಗಲಾದರು ಹೆತ್ತ ಮನೆಯವರು ದಿಕ್ಕಾದರೆ ಎಂದು ಕಾಯುತ್ತ ಕುಳಿತಿದ್ದಾಳೆ .   

ಎರಡು ಕಡೆಯವರಿಗೆ ಏನನ್ನು ಹೇಳಲಾಗದೆ ಇನ್ನೊಂದು ಜೀವ ಚಡಪಡಿಸುತ್ತಿದೆ. 
"ನಗಲಾರದೆ ಅಳಲಾರದೆ ತೊಳಲಾಡಿದೆ ಜೀವ।।
ಬರಿ ಮಾತಲ್ಲಿ ಹೇಳಲಾಗದೆ ಮನದಾಳದ ನೋವ " ( ಅಣ್ಣಾವ್ರ ಚಿತ್ರ 'ಶ್ರುತಿ ಸೇರಿದಾಗ') 









No comments:

Post a Comment

ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...