ನಿಮ್ಮಲ್ಲಿ ಭಾವನೆಗಳಿಲ್ಲ
ಎಂದು ಅರ್ಥವಲ್ಲ
ನನ್ನ ಹಾಗೆ ನಿಮಗೆ
ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.
ನಿಮಗೆ ಸಂತಸವಾಗುವುದಿಲ್ಲ
ಎಂದು ಅರ್ಥವಲ್ಲ
ನನ್ನ ಹಾಗೆ ನಿಮಗೆ
ನಗುವುದು ತಿಳಿದಿಲ್ಲ ಅಷ್ಟೇ...
ನಿಮ್ಮಲ್ಲಿ ಪ್ರೀತಿಯ ಪಸೆ
ಇಲ್ಲ ಎಂದಲ್ಲ
ಜಗಕೆ ತಿಳಿಯಬೇಕಾದ ಹಾಗೆ ನಿಮಗೆ
ವ್ಯಕ್ತಪಡಿಸುವುದು ಗೊತ್ತಿಲ್ಲ ಅಷ್ಟೇ...
ನಿಮಗೆ ನೋವಾಗುವುದಿಲ್ಲ
ಎಂದು ಅರ್ಥವಲ್ಲ
ನನ್ನ ಹಾಗೆ ನಿಮಗೆ
ದುಃಖ ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ...
ನನಗೆ ನಿಮ್ಮ ಭಾವ ಅರ್ಥವಾಗುವುದಿಲ್ಲ
ಎಂದಲ್ಲ ಆದರೆ
ಹೃದಯ ಸೀಳುವ ನಿಮ್ಮ ನಿರ್ಲಿಪ್ತತೆಯ ಸಂದೇಶಗಳಿಗೆ
ನನ್ನಲ್ಲಿ ಉತ್ತರ ಇಲ್ಲ ಅಷ್ಟೇ...