Friday, February 11, 2022

ಜೀನೋಮ್ ನ ಜೀವನ್ಮುಕ್ತಿ

 


     ಟೆಂಪೋ ಟ್ರಾವೆಲ್ಲರ್ ಗೆ ನಾನು ಹತ್ತಿ ಕುಳಿತಾಗ ರಾತ್ರಿ 12. ನನ್ನ ಜೊತೆಗೆ ಗೆಳೆಯ ಆಯರಹಳ್ಳಿ ಗಿರೀಶ ಮತ್ತು ಮಂಜಣ್ಣ ಇದ್ದರು. ಮನೆಯಲ್ಲೇ ಊಟ ವಾಗಿದ್ದರಿಂದ ಊಟದ ಗೋಜಲು ಇರಲಿಲ್ಲ. ಮುಂದಿನ ಸೀಟ್ನಲ್ಲಿ ವಸಂತ ಮತ್ತು ಯತೀಶ ಇದ್ದರು. 

ಯತೀಶ ನಾವು ಓದುತಿದ್ದ ಕಂಪ್ಯೂಟರ್ ಸೆಂಟರಿನ  ಆಫೀಸ್ ಬಾಯ್ ಕೆಲಸ ಮಾಡುತಿದ್ದ, ಒಳ್ಳೆಯ ಹುಡುಗ. ಎಲ್ಲರಿಗು ಕಿಚಾಯಿಸುತ್ತಾ ಖುಷಿಯಾಗಿ ಇರುತ್ತಿದ್ದ. ಅದೇ ರೀತಿ ನಮ್ಮಪಕ್ಕದ ಸೀಟ್ ನಲ್ಲಿ ನನ್ನ ಸೀನಿಯರ್ ಆದ ಹಬೀಬಾ  ಮತ್ತು ಸುಧೀರ್ ಇದ್ದರು ಅವರ ಮುಂದಿನ ಸೀಟ್ನಲ್ಲಿ ಖಾಲಿ ಲತಾ ಮತ್ತು ಶ್ರೀಲೇಖ ಇದ್ದರು. ನೆಲದ ಮೇಲೆ ಕಿಟ್ಟಿ ಮತ್ತು ಮಂಜು ಮಲಗಿದ್ದರು. ವಾಹನ ಹೊರಟ ನಂತರ ಎಲ್ಲರಿಗೂ ನಿದ್ದೆ ಆವರಿಸಿತು ಬೆಳಗ್ಗೆ ಕಣ್ಣು ಬಿಟ್ಟಾಗ ನಮ್ಮ ವಾಹನ ಮಡಿಕೇರಿಯ ರಾಜಾ ಸೀಟಿನಲ್ಲಿ ನಿಂತಿತ್ತು. 

ಅಲ್ಲಿಯೇ ಇದ್ದ ತಣ್ಣೀರ ಟ್ಯಾಂಕಿನಲ್ಲಿ ಹಲ್ಲುಜ್ಜಿ , ಮುಖ ತೊಳೆದು, ಶೌಚಕ್ಕೇ KSRTC ಬಸ್ ನಿಲ್ದಾಣಕ್ಕೆ ಹೋಗಿದ್ದಾಯ್ತು. ನಂತರ ಇಡ್ಲಿ ತಿಂದು, ಅಬ್ಬೆ ಫಾಲ್ಸ್ ಗೆ ಹೋಗಿ ಮತ್ತೆ ಬರುವಾಗ ಕಾವೇರಿ ನಿಸರ್ಗಧಾಮಕ್ಕೆ ಹೋಗಿ ಅಲ್ಲೇ ಊಟ ಮಾಡಿ ಹರಟೆ ಹೊಡೆದು ಬಂದಿದ್ದಾಯ್ತು. ಬರುವಾಗ ಶ್ರೀಲೇಖ ಲತಾಳ ತೊಡೆಯ ಮೇಲೆ ಮಲಗಿ ಅಳುತಿದ್ದಳು; ಅವಳಿಗೆ ಲತಾ ಸಮಾಧಾನ ಮಾಡುತ್ತ ಇದ್ದಳು. ಇತ್ತ ಕಿಟ್ಟಿಯು ಕೂಡ ಬೇಸರಿಸಿ ಮೂಲೆಯ ಸೀಟ್ನಲ್ಲಿ ಕುಳಿತ್ತಿದ್ದ ಹೋಗುವಾಗ ಇದ್ದ ಉತ್ಸಾಹ ಬರುವಾಗ ಇರಲಿಲ್ಲ. ಕೊನೆಗೆ ಚನ್ನರಾಯಪಟ್ಟಣ ತಲುಪಿ ಎಲ್ಲರಿಗು ಬೈ ಬೈ ಹೇಳಿ ಊರಿಗೆ ಬಂದೆನು.

ಈ ಪ್ರವಾಸ ಮುಗಿಸಿ ಹೆಚ್ಚೆಂದರೆ 7 ದಿನವಾಗಿರಬಹುದು ಅಷ್ಟೇ, ಕಂಪ್ಯೂಟರ್ ಸೆಂಟರ್ ಗೆ ಬಂದಾಗ ಬಾಗಿಲು ಅರ್ಧ ಮುಚ್ಚಿತ್ತು ಕೇಳಿದಾಗ ಯತೀಶ ಹೇಳಿದ್ದು ಇಷ್ಟು: ಶ್ರೀಲೇಖ ಮತ್ತು ಕಿಟ್ಟಿ ನೆನ್ನೆ ಸಂಜೆ ಹೇಮಾವತಿ ನಾಳೆಯ ಬಳಿ ಇರುವ ಸುರಗಿ ಅರಣ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು. ಕೋಕ-ಕೋಲಾ ಜ್ಯೂಸ್ ಗೆ ವಿಷ ಬೆರೆಸಿ ಕುಡಿದಿದ್ದಾರೆ. 

ಕಳೆದ ವಾರವಷ್ಟೇ ಮಡಿಕೇರಿಗೆ ಹೋಗಿ ಬಂದವರು ಇಂದು ನಮ್ಮ ಜೊತೆ ಇಲ್ಲ ಎಂಬ ವಿಷಯ ಒಪ್ಪಲ್ಲು ಆಗಲೇ ಇಲ್ಲ; ಕುರುಡು ಪ್ರೇಮಕೊಸ್ಕರ ಜೀವ ಬಲಿ ಕೊಡುವುದು ಎಂತಹಾ ಮೂರ್ಖತನ ಎನ್ನುವುದೋ? ಅಥವಾ ನೀನೆ ಇಲ್ಲದ ಲೋಕ ನಮಗೇಕೆ  ಎನ್ನುವ ಉತ್ಕಟತೆಯೋ? ಒಟ್ಟಿನಲ್ಲಿ ಎರಡು ದೇಹಗಳು ಈ ಲೋಕಕ್ಕೆ ಅಂಜಿ ನಿರ್ಜಿವವಾದವು. 

ಆದರೂ ಪ್ರತಿಸಾರಿ ಮಡಿಕೇರಿಗೆ ಹೋದಾಗಲು ಶ್ರೀಲೇಖ ಮತ್ತು ಕಿಟ್ಟಿಯ ನೆನಪು ಕಾಡದೆ ಇರದು ; ಜೀವ ಹೋಗುವಾಗ ಎಷ್ಟು ಸಂಕಟವಾಗಿರಬಹುದು ಎಂದು ನನ್ನ ಊಹೆಗೆ ನಿಲುಕದು. 

ಬಹುಷ: ಮಾನವನ ದೇಹದಲ್ಲಿ ರಾಸಾಯನಿಕ ಗಳು ಆಡದ ಆಟವಿಲ್ಲ ಅನಿಸುತ್ತೆ. ಮೊದಲು ಮಿದುಳುನಿಂದ ಡೋಪಮೈನ್ ನಂತರ  ಸೆರೋಟೋನಿನ್ ಜಾಸ್ತಿಯಾಗಿ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ ಇದನ್ನೇ ಖುಷಿಯ ಹಾರ್ಮೋನ್ ಎನ್ನುವುದು 
ನಂತರ ಆತ್ಮಹತ್ಯೆ ಮಾಡಿಕೊಳ್ಳಲು ಕೂಡ  ಕಾರ್ಟಿಕೊಟ್ರೊಪಿನ್(Corticotropin)  ಎನ್ನುವ ಹಾರ್ಮೋನ್ ಕಾರಣ. 

ಪ್ರೇಮಕ್ಕೆ ಪ್ರಾಣತ್ಯಾಗ ಮಾಡಿದ ಆತ್ಮಗಳಿಗೆ, ಪ್ರೇಮಿಗಳ ದಿನದ ಹೊಸ್ತಿಲಲ್ಲಿ ನನ್ನ ಕಂಬನಿ. 

ಇದೆ ನೆನಪಿನಲ್ಲಿ ಕೆಲವು ವಾಸ್ತವಗಳು ಕೆಳಗಿವೆ. 

ಲೇಖನ ಅದ್ಭುತವಾಗಿತ್ತು, ಇಷ್ಟೊಂದು ಪ್ರೀತಿಸುವ ಜೀವ ನನ್ನ ಜೀವನದಲ್ಲೂ ಇದ್ದಿದ್ದರೇ  ನನ್ನ ಬಗ್ಗೆಯೂ ಲೇಖನ ಬರೆಯುತ್ತಿದ್ದನೋ ಏನೋ ಎಂದು ಅವಳು ಹಂಬಲಿಸಿದಳು . ಆದರೆ ಆ ಲೇಖನವನ್ನು ಆತ ತನಗಾಗಿಯೇ  ಬರೆದಿದ್ದು ಎಂಬುದು ಅವಳಿಗೆ ಅರ್ಥವಾಗಲೇ ಇಲ್ಲ.
 
                             💔💔💔💔💔💔💔💔💔

 ಐ ಲವ್ ಯು ಎಂದು ಆತ ಯಾವತ್ತ್ತು ಹೇಳಲೇ ಇಲ್ಲ, ಆದರೆ ಪ್ರತಿ ಮುಂಜಾನೆ ಅವಳಿಗೆ ಮೆಸೇಜ್ ಮಾಡಲು ಆತ ಕಾತರಿಸುತ್ತಿದ್ದ, ಅವನ ಮೆಸೇಜ್ ಗೆ ಒಂದು ಸಾಲಿನ ಉತ್ತರ ಬಂದಾಗ ಚಡಪಡಿಸುತ್ತಿದ್ದ, ಆತ ಅವಳ ಬಗ್ಗೆ ಮುತುವರ್ಜಿ ವಹಿಸುತ್ತಿದ್ದ. ಅವಳು ಹೇಳಿದನ್ನು ದೈವವಾಣಿ ಎಂಬಂತೆ ಪಾಲಿಸುತ್ತಿದ್ದ. ಆದರೆ ನೀನೆಂದರೆ ನನಗಿಷ್ಟ ಎಂದು ಹೇಳುವ ಧೈರ್ಯವನ್ನು ಆತ ಮಾಡಲಿಲ್ಲ
                              
                            💫💫💫💫💫💫💫💫💫

ನೀನೆ ನನ್ನ ಜಗತ್ತು ಎಂದು ಅವನು ಹೇಳಿದಾಗ, ನನ್ನ ಕನಸಿನ ಜಗತ್ತು ಬೇರೆಯೇ 
ಇದೆ ಎಂದಳವಳು. ಹಾಗಾದರೆ ನಿನ್ನ ಜಗತ್ತಿನಲ್ಲಿ ಸುಖವಾಗಿ ಬದುಕು ಎಂದು ಅವಳಿಗೆ ಹೇಳಿ ಕಳಿಸಿದ. ಆದರೆ, ಅವನೇ ನನ್ನ ಜಗತ್ತು ಎಂದು ಅವಳಿಗೆ ಅರ್ಥವಾಗುವ ಹೊತ್ತಿಗೆ ಕಾಲ ಮಿಂಚಿತ್ತು. 




ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...