Thursday, October 27, 2022

ಥಾರ್ ಮತ್ತೆ ಫಿರ್ ಏಕ್ ಬಾರ್ 

 

ಪಂಜಾಬಿ ಹುಡುಗ ಅಮನ್ ಸಿಂಗ್ ತನ್ನ ಮಹಿಂದ್ರಾ ಥಾರ್ ಅನ್ನು ತನ್ನ ಗ್ಯಾರೇಜ್ ನಿಂದ ಹೊರ ತೆಗೆದು ಅದನ್ನು ಫಳ ಫಳ ಅನ್ನುವಂತೆ ಒರೆಸಿ. ಅದಕ್ಕೆ ಗುಲಾಬಿ ಹೂವು ಮುಡಿಸಿ. ತನ್ನ ಏವಿಯೇಟರ್ ತಂಪು ಕನ್ನಡಕವನ್ನು ಧರಿಸಿ ತನ್ನ ಕೆಲಸಕ್ಕೆ  ಬೆಂಗಳೂರಿಗೆ ಹೊರಟನು.


ದಾರಿಯಲ್ಲಿ ಎಳನೀರು ಕುಡಿಯಲು, ನೋಡಿದರೆ ಎಲ್ಲಿಯೂ ಎಳನೀರ ಅಂಗಡಿಗಳೆ ಸಿಗಲಿಲ್ಲ, ದಾವಾರಿದವನು ಹಾಗೆ ಮುಂದೆ ಸಾಗಿದಾಗ ಎಳನೀರ ಅಂಗಡಿ ಅವನಿಗೆ ಕಾಣಿಸಿತು, ಅದರ ಮುಂದೆ ದೊಡ್ಡ ಸರಕಾರಿ ಆಸ್ಪ್ರತ್ರೆ.  ಎಳನೀರು ಕುಡಿದು ಅಂಗಡಿಯವನಿಗೆ ಐನೂರರ ನೋಟು ಕೊಟ್ಟ, ಅಂಗಡಿಯವನು ಯೋ ಚಿಲ್ಲರೆ ಕೊಡು ಎಲ್ಲಐನೂರ ರೂಪಾಯಿ ನೋಟು ಕೊಟ್ಟರೆ ಚಿಲ್ಲರೆ ಎಲ್ಲಿಂದ ತರಲಿ ಅಂದ.

 ಅದಕ್ಕೆ ಅಮನ್, 
ಅಂಗಡಿಯವನಿಗೆ ಫೋನ್ ಪೇ ಇದೆಯ ಅಂತ ಕೇಳಿದ, ಅಂಗಡಿಯವನು ಇದು ಬೆಂಗಳೂರು ಅಲ್ಲ ನಮ್ಮ ಮಂಡ್ಯ. ಸುಮ್ಮನೆ ಚಿಲ್ಲರೆ ಕೊಟ್ಟು ಹೋಗು ಅಂದ.  ಅಲ್ಲೇ ಎಳನೀರು ಕುಡಿಯುತ್ತಿದ್ದ ಬಿಳಿಯ ಕೋಟು ಧರಿಸಿದ ಹುಡುಗಿಯೊಂದು ಅಂಗಡಿಯವನಿಗೆ ಅಮನ್ ನ ದುಡ್ಡು ಕೊಟ್ಟಿತು.

ಅಮನ್  ಆ ಹುಡುಗಿಗೆ ಹಿಂದಿಯಲ್ಲಿ ಧನ್ಯವಾದ ಎಂದ. ನಿಮ್ಮಿಂದ ತುಂಬಾ ಸಹಾಯವಾಯಿತು ಎಂದ. ಆಪ್ ಕ ನಂಬರ್ ದೀಜಿಯೇ ಮೈ ಆಪ್ಕೋ ಫೋನೆಪೆ ಕರುಂಗ (ನಿಮ್ಮ ಮೊಬೈಲ್ ನಂಬರ್ ಹೇಳಿ ನಾನು ನಿಮಗೆ ದುಡ್ಡನ್ನುಕಳುಹಿಸುತ್ತೇನೆ ) ಅಂತ ಹಿಂದಿಯಲ್ಲಿ  ಹೇಳಿದ. ಆ ಹುಡುಗಿ ಪರವಾಗಿಲ್ಲ ಅಂತ ಹೇಳಿದಳು, ಆದರೂ ಅಮನ್ ಪಟ್ಟು ಬಿಡದೆ ಅವಳಿಗೆ ದುಡ್ಡು ಕಳಿಸಿದ. 

ಇಂತಹ ಗುಣವಂತೆ ಅವನ ಮನಸ್ಸಿಗೆ ಬಹಳ ಹತ್ತಿರವಾದಳು, ಅವನು ಕನ್ನಡದ ಹುಡುಗಿಯನ್ನು ಪ್ರೀತಿಸಲು ಅವನಿಗೆ ಗೊತ್ತಿಲದೇ ಶುರು ಮಾಡಿದ. ಕನ್ನಡ ಬಹಳ ಸುಂದರವಾದ ಭಾಷೆ ಅವಳಿಗೋಸ್ಕರ ತಾನು ಕನ್ನಡ ಕಲಿಯಲೇ ಬೇಕು ಎಂದು ಹಠ ಹಿಡಿದು ಆರು ತಿಂಗಳ ಕಠಿಣ ಪರಿಶ್ರಮದಿಂದ ಕನ್ನಡ ಓದಲು ಬರೆಯಲು ಕಲಿತ. 

ಕೊನೆಗೂ ಒಂದು ಸುಂದರವಾದ ಪ್ರೇಮಪತ್ರ ಬರೆದು ಹುಡುಗಿಗೆ ಕೊಟ್ಟ, ಹುಡುಗಿ ಪ್ರೇಮ ಪತ್ರ ಓದುತ್ತ ಓದುತ್ತಾ ಅವಳಿಗೆ ಕಣ್ಣಿನಲ್ಲಿ ನೀರು ಬಂತು. ಎಷ್ಟು ಚೆಂದವಾಗಿ ಬರೆದಿದ್ದಾನೆ ಎಂದು ಆಕೆ ಇನ್ನೇನು ಪಂಜಾಬಿ ಹುಡುಗನ ಪ್ರೇಮ ಒಪ್ಪಿಬಿಡಬೇಕು ಅಷ್ಟರಲ್ಲಿ ಆ ಕೊನೆಯ ಸಾಲು ಆಕೆಯ ಕಣ್ಣಿಗೆ ಬಿತ್ತು. ಪತ್ರ ಹರಿದು ಬಿಸಾಕಿ, ಅವನ ಮುಖಕ್ಕೆ ಎರಡೇಟು ಕೊಟ್ಟು ಹೋದಳು 💔.

ಆ ಪತ್ರದಲ್ಲಿ ಅಂತದ್ದೇನಿತ್ತು??


ಕೊನೆಯಲ್ಲಿ " ನಿನ್ನ ಅಮನ್" ಅಂತ ಬರೆದಿದ್ದ !

ಅವನ ಥಾರ್ ನಲ್ಲಿ 

ನಟ್ಟ ನಡುವೆ, ಬಿಟ್ಟು ಹೊರಟೆ ಬಡಪಾಯಿ ಜೀವವನು. 
ಹೀಗೆ ದೂರ ಹೋಗುವ ಮುನ್ನ ಹೇಳಿ ಹೋಗು ಕಾರಣ। ಹೇಳಿ ಹೋಗು ಕಾರಣ ಶ್ರೇಯ ಘೋಶಾಲ್ ನ ಹಾಡು ಬರುತಿತ್ತು 
















Sunday, October 16, 2022

ರೊಪಣ


 
ಅದು ಮೂರನೇ ಮಹಡಿಯಲ್ಲಿರುವ ಸಿಂಗಲ್ ರೂಮ್, ಬ್ಯಾಚುಲರ್ ಹುಡುಗರಿಗೆ ಅಂತಾನೆ ಕಟ್ಟಿಸಿರುವ ರೂಮು. ರೂಮಿನಲ್ಲಿ ಇರುವುದು ಅಡುಗೆ ಬೇಯಿಸುವುದಕ್ಕೆ ಅಂತಾ ನಾಲ್ಕು ಅಡಿಗಳ ಮೇಲೆ ಇರುವ ಒಂದು ಕಲ್ಲಿನ ಮೇಜು ಅದು ಬಿಟ್ಟರೆ ಒಂದು ಜೊತೆ ಕಿಟಕಿಗಳು. 

 

ಅಲ್ಲಿರುವ ಎರಡು ಕಬ್ಬಿಣದ ಕುರ್ಚಿಗಳ ಮೇಲೆ ಕುಳಿತಿದ್ದ ಇಬ್ಬರು ಸ್ನೇಹಿತರ  ನಡುವೆ ನಡೆಯುತ್ತಿದ್ದ ಮಾತುಕತೆ: 

ಒಬ್ಬ: ಏನು ಗುರು, ಹೇಗೆ ನಡಿಯುತ್ತಿದೆ ಜೀವನ ಬೆಂಗಳೂರಿನಲ್ಲಿ ?

 ಮತ್ತೊಬ್ಬ: ಏನು ಅಂತ ಹೇಳೋದು ಮಾರಾಯ, ಅವನು ಗಿರಿ ಕೊಡೊ 6000 ರೂಪಾಯಿ ಸಂಬಳ ಸಾಲುತ್ತಾ ಇಲ್ಲ.  ರೂಮಿನ ಬಾಡಿಗೆ ಅಂತ ತಿಮ್ಮಯ್ಯನಿಗೆ 2000 ಕೊಡಬೇಕು, ಮದ್ಯಾಹ್ನದ ಊಟಕ್ಕೆ ಗಣೇಶ್ ಭವನ್ ಹೋಟೆಲ್ನಲ್ಲಿ ಕಾಸ್ಟ್ಲಿ ಅಂತ ಅದರ ಪಕ್ಕ ಇರೋ ಕಾಫಿ ಬಾರ್ನಲ್ಲಿ ಇರುವ ತಂಬಿ ಹೋಟೆಲ್ ನಲ್ಲಿ ಊಟ ಮಾಡ್ತೀನಿ ಅಷ್ಟೇ ಅಂದ. ನಂದಿರಲಿ ನಿನ್ನ ವಿದ್ಯಾಭ್ಯಾಸ ಹೇಗೆ ನಡೀತಾ ಇದೆ ಅಂದ ?

 ಒಬ್ಬ: ಅದೇನು ಅಂತ ಹೇಳಲಿ ಗುರು,  ಮನೆಯಿಂದ ಕೊಡ್ತಾ ಇರೋ ದುಡ್ಡು ಸಾಕಾಗೊಲ್ಲ. 

 ಮತ್ತೊಬ್ಬ : ಮತ್ತೆ ಹೇಗೆ ಮ್ಯಾನೇಜ್ ಮಾಡ್ತಾ ಇದ್ದೀಯ ಮಾರಾಯ?

 ಒಬ್ಬ: ನಾನು ಮೊನ್ನೆ ಮೊಬೈಲ್ ತೆಗೆದು ಕೊಂಡೆನಲ್ಲ ಅದ್ರಲ್ಲಿ ಫ್ಲೈಟ್ ಮೋಡ್ ಬದಲು ಸೈಕಲ್ ಚಿತ್ರ ಇದೆ. ಯಾಕೆಂದರೆ ಫ್ಲೈಟ್ ದುಬಾರಿ ಅಲ್ವ ಅದಕ್ಕೆ ಅದರ ಬದಲು ಮೊಬೈಲ್ ತೆಗೆದುಕೊಂಡೆ ಅಂದ. 

 ಮತ್ತೊಬ್ಬ: ಪರವಾಗಿಲ್ಲ ಗುರು. ನಾನು ಮೊಬೈಲ್ ಉಪಯೋಗಿಸ್ತಾನೆ ಇಲ್ಲ.  ಕಚೇರಿಯಲ್ಲಿ ಹೇಗಿದ್ರು ಫೋನ್ ಇದೆ ಅಲ್ಲಿಂದನೇ ಎಲ್ಲರಿಗು ಫೋನ್ ಮಾಡ್ತೀನಿ. ರಜ ಇದ್ದ ದಿನ ರಸ್ತೆಯಲ್ಲಿ ತಿರುಗಾಡುತ್ತಿರುವವರ ಹತ್ತಿರ ಸಾರ್ ಸ್ವಲ್ಪ ಮೊಬೈಲ್ ಕೊಡ್ತೀರಾ ಅರ್ಜೆಂಟ್ ಆಗಿ ಒಂದು ಫೋನ್ ಮಾಡಬೇಕು, ನನ್ನ ಮೊಬೈಲ್ ಕಳೆದು ಹೋಯ್ತು ಅಂತ ಹೇಳ್ತಿನಿ ಅಂದ 

 ಒಬ್ಬ: ಹಾಗಿದ್ರೆ ಇನ್ಸ್ಟಾಗ್ರಾಮ್ ಮತ್ತು ವಾಟ್ಸಪ್ಪ್ ನಲ್ಲಿ ಮೆಸೇಜ್ ಹೇಗೆ ಮಾಡ್ತಿಯ ?

 ಮತ್ತೊಬ್ಬ: ಮೆಸೇಜ್ ಮಾಡಬೇಕು ಅಂದರೆ ಪಾರ್ಕ್ ಹೋಗಿ ಕೂರುತ್ತೀನಿ. ಅಲ್ಲಿರುವ  ಯುವ ಜೋಡಿಗಳ ಬಳಿ ಹೋಗಿ ಸ್ವಲ್ಪ ಮೊಬೈಲ್ ಕೊಡ್ತೀರ ನನ್ನ ಫ್ರೆಂಡ್ ಗೆ ಮೆಸೇಜ್ ಮಾಡ್ತೀನಿ ಅಂತ ಕೇಳಿದ್ರೆ ಕೊಡ್ತಾರೆ ಅಂದ . 

 ಒಬ್ಬ: ಒಳ್ಳೇದು ಗುರು, ನೀನು ತುಂಬಾ ಹಣ ಉಳಿಸ್ತಾ ಇದ್ದೀಯ. ನಾನೇನು ಮಾಡ್ತೀನಿ ಗೊತ್ತಾ? ಮಳೆ ಬಂದಾಗ ಕೊಳೆ ಬಟ್ಟೆಗಲ್ಲನ್ನ ಹೊರಡಗೆ ಇರೋ ತಂತಿಯಲ್ಲಿ ಹಾಕ್ತೇನೆ ಮಳೆಗೆ ಎಲ್ಲಾ ಕ್ಲೀನ್ ಆಗಿರುತ್ತವೆ ಅಂದ. 

 ಮತ್ತೊಬ್ಬ: ನಾನು ಅಷ್ಟೇ ಮಳೆ ಬಂದಾಗ್ಲೇ ಸ್ನಾನ ಮಾಡೋದು, ನೀರಿನ ಖರ್ಚು ಉಳಿಯುತ್ತೆ ಅಂತ ಅಂದ. 

 ಒಬ್ಬ: ನಾನು ಈಗ ಒಳ ಉಡುಪು ಅಂದರೆ ಅಂಡರ್ ವೆರ್ ತೆಗೆದುಕೊಳ್ತಾ ಇಲ್ಲ, ಯಾಕೆಂದರೆ ಅಮೆಜಾನ್ ನಲ್ಲಿ ಏಳು ದಿನಕ್ಕೆ ವಾಪಸ್ಸು ಮಾಡಿ ಬೆರೆದು ಆರ್ಡರ್ ಮಾಡ್ತಾ ಇದ್ದೀನಿ. 

 ಒಬ್ಬಯೋಚ್ನೆ ಮಾಡಬೇಡಎಲ್ಲರು ನನ್ನ ಹಾಗೆ ಇರಲ್ಲನನ್ನ ಪಕ್ಕದ ಮನೆಯವನು ತುಂಬಾ ಉದಾರಿಮೊನ್ನೆ ಅವರ ಸ್ನೇಹಿತರ ಮದುವೆಗೆ ಹೋಗಿದ್ದರಂತೆ ಅಲ್ಲಿ ಏನಾಯ್ತು ಗೊತ್ತಾ?

ಮತ್ತೊಬ್ಬ : ಏನಾಯ್ತೋ?

ಒಬ್ಬ : ಮದುವೆ ಮನೆಯಲ್ಲಿ ವಧುವರರಿಗೆ ಶುಭಾಶಯ ಕೋರುವ ಕ್ಯೂ ತುಂಬಾ ಉದ್ದ ಇತ್ತುಹೊಟ್ಟೆ ಬೇರೆ ತುಂಬಾ ಹಸಿತ್ತಿತ್ತುಸರಿ ಊಟ ಮಾಡ್ಕೊಂಡು ಆಮೇಲೆ ವಿಶ್‌ ಮಾಡಿದರಾಯಿತು ಅಂತ ಊಟದ ಹಾಲಿಗೆ ಹೋದರೆಅಲ್ಲಿ ನಿಂತವನೊಬ್ಬ ಸರ್‌ ಓಟಿಪಿ ಅಂದನಾನು ತಲೆ ಕೆಡಿಸಿಕೊಂಡು ಏನೆಂದು ವಿಚಾರಿಸಿದೆಅದಕ್ಕೆ ಅವನು 'ಇದು ಹೊಸ ಸಿಸ್ಟಮ್‌ ಸರ್‌ ನೀವು ವಧುವರರಿಗೆ ಉಡುಗೊರೆ ಕೊಟ್ಟ ಮೇಲೆ ನಿಮ್ಮ ಮೊಬೈಲ್‌ಗೆ ಒಂದು ಒಟಿಪಿ ಬರುತ್ತೆಅದನ್ನು ನೀವು ತೋರಿಸಿ ಕೌಂಟರ್‌ನಿಂದ ಬಾಳೆ ಎಲೆ ಮತ್ತೆ ನೀರನ್ನು ತಗೊಂಡು ಊಟಕ್ಕೆ ಕೂರಬಹುದುಎಂದನಂತೆ ಅದಕ್ಕೆ ಅವನು ಎರಡು ಖಾಲಿ ಮುಯ್ಯಿ ಕವರ್ ಅನ್ನು ವಧುವರರಿಗೆ ಕೊಟ್ಟು ಬಿಟ್ಟಿ ಊಟ ಮಾಡಿ ಬಂದನಂತೆ

ಅಷ್ಟ್ರಲ್ಲಿ ಪೊಲೀಸ್ ತಿಮ್ಮಯ್ಯ ಮೇಲೆ ಬಂದು ಎಲ್ಲಿ ಬಾಡಿಗೆ ಎಂದಾಗ ಸಾರು ಇನ್ನು ಸಂಬಳ ಆಗಿಲ್ಲ ನಾಳೆ ಸಂಜೆ ಕೊಡ್ತೀನಿ ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದರು

 

ಕೊನೆಯ ಪಂಚ್ ನಿಮಗೋಸ್ಕರ

 

ಮರೆಯಲು ಯತ್ನಿಸಿದರೂ ಮತ್ತೆ ಮತ್ತೆ
ನೆನಪಾಗುವುದು ಕನಸಿನ ಪ್ರೇಯಸಿಯ ಸವಿನುಡಿ


ಚೀಟಿಯಲ್ಲಿ ಬರೆದಿಟ್ಟರೂ ಮರೆತು ಹೋಯಿತು
ಮಡದಿ ತರಲು ಹೇಳಿದ್ದ ಕಾಫಿಪುಡಿ. .!!!

 


ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...