ಪಂಜಾಬಿ ಹುಡುಗ ಅಮನ್ ಸಿಂಗ್ ತನ್ನ ಮಹಿಂದ್ರಾ ಥಾರ್ ಅನ್ನು ತನ್ನ ಗ್ಯಾರೇಜ್ ನಿಂದ ಹೊರ ತೆಗೆದು ಅದನ್ನು ಫಳ ಫಳ ಅನ್ನುವಂತೆ ಒರೆಸಿ. ಅದಕ್ಕೆ ಗುಲಾಬಿ ಹೂವು ಮುಡಿಸಿ. ತನ್ನ ಏವಿಯೇಟರ್ ತಂಪು ಕನ್ನಡಕವನ್ನು ಧರಿಸಿ ತನ್ನ ಕೆಲಸಕ್ಕೆ ಬೆಂಗಳೂರಿಗೆ ಹೊರಟನು.
ದಾರಿಯಲ್ಲಿ ಎಳನೀರು ಕುಡಿಯಲು, ನೋಡಿದರೆ ಎಲ್ಲಿಯೂ ಎಳನೀರ ಅಂಗಡಿಗಳೆ ಸಿಗಲಿಲ್ಲ, ದಾವಾರಿದವನು ಹಾಗೆ ಮುಂದೆ ಸಾಗಿದಾಗ ಎಳನೀರ ಅಂಗಡಿ ಅವನಿಗೆ ಕಾಣಿಸಿತು, ಅದರ ಮುಂದೆ ದೊಡ್ಡ ಸರಕಾರಿ ಆಸ್ಪ್ರತ್ರೆ. ಎಳನೀರು ಕುಡಿದು ಅಂಗಡಿಯವನಿಗೆ ಐನೂರರ ನೋಟು ಕೊಟ್ಟ, ಅಂಗಡಿಯವನು ಯೋ ಚಿಲ್ಲರೆ ಕೊಡು ಎಲ್ಲಐನೂರ ರೂಪಾಯಿ ನೋಟು ಕೊಟ್ಟರೆ ಚಿಲ್ಲರೆ ಎಲ್ಲಿಂದ ತರಲಿ ಅಂದ.
ಅದಕ್ಕೆ ಅಮನ್, ಅಂಗಡಿಯವನಿಗೆ ಫೋನ್ ಪೇ ಇದೆಯ ಅಂತ ಕೇಳಿದ, ಅಂಗಡಿಯವನು ಇದು ಬೆಂಗಳೂರು ಅಲ್ಲ ನಮ್ಮ ಮಂಡ್ಯ. ಸುಮ್ಮನೆ ಚಿಲ್ಲರೆ ಕೊಟ್ಟು ಹೋಗು ಅಂದ. ಅಲ್ಲೇ ಎಳನೀರು ಕುಡಿಯುತ್ತಿದ್ದ ಬಿಳಿಯ ಕೋಟು ಧರಿಸಿದ ಹುಡುಗಿಯೊಂದು ಅಂಗಡಿಯವನಿಗೆ ಅಮನ್ ನ ದುಡ್ಡು ಕೊಟ್ಟಿತು.
ಅಮನ್ ಆ ಹುಡುಗಿಗೆ ಹಿಂದಿಯಲ್ಲಿ ಧನ್ಯವಾದ ಎಂದ. ನಿಮ್ಮಿಂದ ತುಂಬಾ ಸಹಾಯವಾಯಿತು ಎಂದ. ಆಪ್ ಕ ನಂಬರ್ ದೀಜಿಯೇ ಮೈ ಆಪ್ಕೋ ಫೋನೆಪೆ ಕರುಂಗ (ನಿಮ್ಮ ಮೊಬೈಲ್ ನಂಬರ್ ಹೇಳಿ ನಾನು ನಿಮಗೆ ದುಡ್ಡನ್ನುಕಳುಹಿಸುತ್ತೇನೆ ) ಅಂತ ಹಿಂದಿಯಲ್ಲಿ ಹೇಳಿದ. ಆ ಹುಡುಗಿ ಪರವಾಗಿಲ್ಲ ಅಂತ ಹೇಳಿದಳು, ಆದರೂ ಅಮನ್ ಪಟ್ಟು ಬಿಡದೆ ಅವಳಿಗೆ ದುಡ್ಡು ಕಳಿಸಿದ.
ಇಂತಹ ಗುಣವಂತೆ ಅವನ ಮನಸ್ಸಿಗೆ ಬಹಳ ಹತ್ತಿರವಾದಳು, ಅವನು ಕನ್ನಡದ ಹುಡುಗಿಯನ್ನು ಪ್ರೀತಿಸಲು ಅವನಿಗೆ ಗೊತ್ತಿಲದೇ ಶುರು ಮಾಡಿದ. ಕನ್ನಡ ಬಹಳ ಸುಂದರವಾದ ಭಾಷೆ ಅವಳಿಗೋಸ್ಕರ ತಾನು ಕನ್ನಡ ಕಲಿಯಲೇ ಬೇಕು ಎಂದು ಹಠ ಹಿಡಿದು ಆರು ತಿಂಗಳ ಕಠಿಣ ಪರಿಶ್ರಮದಿಂದ ಕನ್ನಡ ಓದಲು ಬರೆಯಲು ಕಲಿತ.
ಕೊನೆಗೂ ಒಂದು ಸುಂದರವಾದ ಪ್ರೇಮಪತ್ರ ಬರೆದು ಹುಡುಗಿಗೆ ಕೊಟ್ಟ, ಹುಡುಗಿ ಪ್ರೇಮ ಪತ್ರ ಓದುತ್ತ ಓದುತ್ತಾ ಅವಳಿಗೆ ಕಣ್ಣಿನಲ್ಲಿ ನೀರು ಬಂತು. ಎಷ್ಟು ಚೆಂದವಾಗಿ ಬರೆದಿದ್ದಾನೆ ಎಂದು ಆಕೆ ಇನ್ನೇನು ಪಂಜಾಬಿ ಹುಡುಗನ ಪ್ರೇಮ ಒಪ್ಪಿಬಿಡಬೇಕು ಅಷ್ಟರಲ್ಲಿ ಆ ಕೊನೆಯ ಸಾಲು ಆಕೆಯ ಕಣ್ಣಿಗೆ ಬಿತ್ತು. ಪತ್ರ ಹರಿದು ಬಿಸಾಕಿ, ಅವನ ಮುಖಕ್ಕೆ ಎರಡೇಟು ಕೊಟ್ಟು ಹೋದಳು 💔.
ಆ ಪತ್ರದಲ್ಲಿ ಅಂತದ್ದೇನಿತ್ತು??
ಕೊನೆಯಲ್ಲಿ " ನಿನ್ನ ಅಮನ್" ಅಂತ ಬರೆದಿದ್ದ !
ಅವನ ಥಾರ್ ನಲ್ಲಿ
ನಟ್ಟ ನಡುವೆ, ಬಿಟ್ಟು ಹೊರಟೆ ಬಡಪಾಯಿ ಜೀವವನು.
ಹೀಗೆ ದೂರ ಹೋಗುವ ಮುನ್ನ ಹೇಳಿ ಹೋಗು ಕಾರಣ। ಹೇಳಿ ಹೋಗು ಕಾರಣ ಶ್ರೇಯ ಘೋಶಾಲ್ ನ ಹಾಡು ಬರುತಿತ್ತು

No comments:
Post a Comment