ಬೆಳ -ಬೆಳಗ್ಗೆ ಮನೆ ಮುಂದಿನ ರಸ್ತೆಯಲ್ಲಿ ಗುಲಾಬಿ ಹೂವು ಗುಲಾಬಿ ಹೂವು ಎಂದು ಒಬ್ಬರು ಟಿವಿಎಸ್ ಮೊಪೆಡ್ ನಲ್ಲಿ ಕೂಗಿ ಹೋಗುತಿದ್ದರು. ಅಂದು ಭಾನುವಾರವಾದ್ದರಿಂದ ಬೇಗ ಎದ್ದು ಮಾಡುವುದಕ್ಕೆ ಏನು ಕೆಲಸವಿರಲಿಲ್ಲ. ನಿಮ್ಮಂತ ಓದುಗರಿಗೇನೋ ಅಂದು ಬೇಗ ಹೇಳಲು ಕಾರಣವಿರುತ್ತದೆ !. ಎಂದೂ ಸ್ನಾನ ಮಾಡದಿದ್ದ ಹುಡುಗರು ಸಹ ಅಂದು ಬೇಗ ಎದ್ದು ಎಲ್ಲವನ್ನು ತೊಳೆದುಕೊಂಡು ಮೈಗೆ ಡಿಯೋಡರೆಂಟು ( ದುರ್ಗಂಧ ನಾಶಕ) ವನ್ನು ಸಿಂಪಡಸಿಕೊಂಡು ತಮಗೆ ಬೇಕಾದವರನ್ನು ಭೇಟಿ ಮಾಡಲು ಜೊತೆಗೆ ಉಡುಗೊರೆ ಕೊಡಲು ಕಾರಣವಿರುತ್ತದೆ.
ಮನೆ ಮುಂದೆ ಬಂದು ನಿಂತ ಹೂವಿನವನು " ಯೋ ನಿಮ್ಮ ಬೀದಿಯ ಹುಡುಗರೆಲ್ಲಾ ನನ್ನ ಬಳಿ ವ್ಯಾಪಾರ ಮಾಡಿದ್ದಾರೆ ನೀನು ಒಬ್ಬನೇ ಮಾಡಿಲ್ಲ. ಬಾ ಬೇಗ ಹೊರಗೆ. ಬಂದು ಬಂದು ಹಳದಿ ಗುಲಾಬಿನೋ, ಕೆಂಪು ಗುಲಾಬಿನಾದ್ರು ತಗೋ ಅಂದ .
ನಾನು ಹೊರಗಡೆ ಬಂದು ನನಗೆ ಗುಲಾಬಿ ಬೇಡ ಅಣ್ಣ, ನಾವು ದೇವರಿಗೆ ಗುಲಾಬಿ ಮುಡಿಸುವುದಿಲ್ಲ ಅಂದೇ ಅದಕ್ಕೆ ಅವನು ಅಯ್ಯೋ ಗೂಬೆ ಮುಂಡೇದೆ ಇವತ್ತು ಅದೇನೋ ಅಂತಾರಲ್ಲ ವಾಲೆ ಟಿನ್ ಡೇ ಅಂತ ಅದು ಅದಕೋಸ್ಕರ ಎಲ್ಲಾ ಗುಲಾಬಿ ತೆಗೆದುಕೊಳ್ಳುತ್ತಿದ್ದಾರೆ. ನೀನು ತಗೋ ಅಂದ ಅದಕ್ಕೆ ನಾನು ನಮಗ್ಯಾರು ಬೀಳ್ತಾರೆ ಗುರು. ನಾವು ಏನಿದ್ದರೂ ಸೈಡ್ ರೋಲ್ ಅಷ್ಟೇ ಅಂದೇ ಅದಕ್ಕೆ ಅವನು ಬೇಜಾರಾಗಿ ಹೋಗ್ಲಿ ತಗೋ ಈ ಗುಲಾಬಿನ ಫ್ರೀ ಆಗಿ ಇಟ್ಕೋ ಯಾರೂ ಸಿಗಲಿಲ್ಲ ಅಂದ್ರೆ ಕಿವಿ ಮೇಲೆ ಇಟ್ಕೋ ಅಂತ ಹೇಳಿ ಒಂದು ನೇರಳೆ ಗುಲಾಬಿ ಕೊಟ್ಟ.
ಲೈಫ್ ಇಷ್ಟೇನೆ ಅಂದುಕೊಂಡು ಹಲ್ಲುಜ್ಜದೆ ತಿಂಡಿ ತಿಂದೆ, ಬಾಯಲ್ಲಿರುವ ಬ್ಯಾಕ್ಟೀರಿಯಗಳು ಹೊಟ್ಟೆಗೆ ಸೇರಿ ಬೇಗ ಜೀವ ಹೋಗಲಿ ಎಂದು. ನಂತರ ಮೊಬೈಲ್ ನೋಡಿದರೆ ಒಬ್ಬರಿಂದ ಹಲವು ಮೆಸೇಜ್ಗಳು. ತೆಗೆದು ನೋಡಿದರೆ ನಿಮ್ಮ ವ್ಯಾಲೆಂಟೈನ್ಡೇ ಅನ್ನು ವಿಶೇಷವಾಗಿಸಿ ಇದರ ನೆನಪಿನಲ್ಲಿ ಒಂದು ಫ್ಲಾಟ್ ಬುಕ್ ಮಾಡಿ ಮತ್ತು ಪಡೆಯಿರಿ ರೂ 5000/- ಡಿಸ್ಕೌಂಟ್. ಇವನ ಅಜ್ಜಿ ಸುಮ್ನೆ ಮೂರು ಅಡಿ ಮತ್ತು ಆರು ಅಡಿ ಫ್ಲಾಟ್ ಕೊಡ್ರುಲಾ ಅಂತ ಅಂದುಕೊಂಡು ಮೆಸೇಜ್ ಡಿಲೀಟ್ ಮಾಡಿದೆ.
ಆಗ ನೆನಪಿಗೆ ಬಂದಿದ್ದು ಕೆಳಗಿನ ಜೋಕು ಗಳು, ನೀವು ನಕ್ಕು ನಲಿಯಲಿ ಎಂದು ಕೆಳಗೆ ಕಾಪಿ + ಪೇಸ್ಟ್ ಮಾಡಿದ್ದೇನೆ.
👉ತಿಮ್ಮ : ಆಂಟಿ ನಿಮ್ಮ ಮಗ ಗುಂಡ ಯಾವುದೋ ಹುಡುಗಿಗೆ TeddyBear Gift ಕೊಟ್ಟ
ಗುಂಡ ನ ಅಮ್ಮ : ಅಯ್ಯೊ ಹೋಗೋ ಮುಠ್ಠಾಳ ಅವನಿಗೆ ಚಡ್ಡಿ ಹಾಕೋಕೆ ದುಡ್ಡಿಲ್ಲ ಇನ್ನು ಟೆಡ್ಡಿಬಿಯರ್ ಎಲ್ಲಿಂದ ಕೊಡ್ತಾನೆ... 😝😝
💭💭💭💭💭💭💭💭
👉ಇವತ್ತು ಫೆಬ್ರವರಿ 14 ಬಂದೇ ಬಿಡ್ತಲ್ಲಾ ..
ನಮಗೆ ಯಾರು ಬೀಳ್ತಾರೆ ..🤔
ನಮಗೆ ಯಾರೂ ಬಿದ್ದಿಲ್ಲ ... 😔
ಇನ್ನೂ ಯಾರೂ ಬಿದ್ದಿಲ್ಲ ಅಂತ ಫೀಲ್ ಮಾಡ್ಕೋಬೇಡಿ 😎
ಮೊದಲು ಹುಡುಗಿ ಸಿಲೆಕ್ಟ್ ಮಾಡಿಕೊಳ್ಳಿ ಅವಳು ಬರೋ ದಾರಿಲಿ #ಬಾಳೆಹಣ್ಣಿನ ಸಿಪ್ಪೆ ಎಸೆಯಿರಿ ...🍌
ಪಕ್ಕಾ ಬಿದ್ದೇ ಬೀಳ್ತಾಳೆ ... 😍😍😍
✂✂✂✂✂✂✂✂✂✂✂✂✂✂✂✂✂✂✂✂✂✂✂✂✂✂✂
✌ಪಾರ್ಕಲ್ಲಿ ಲವ್ವರ್ಸ್ ಹುಡುಗಿ ತಂದೆ ಕೈಯಲ್ಲಿ ಸಿಕಾಕೊಂಡ್ರು
ಹುಡುಗಿ ತಂದೆ : ಎಷ್ಟು ಇಂಕಮ್ ಇದೆ ನಿನಗೆ ತಿಂಗಳಿಗೆ ..🤔
ಹುಡುಗ : 12000
ಹುಡುಗಿ ತಂದೆ : ನಾನು ನನ್ನ ಮಗಳಿಗೆ ಪಾಕೆಟ್ ಮನಿ ಅಂತ 10000 ಕೊಡ್ತೀನಿ
ಬರೇ 12000 ಅಷ್ಟೇನಾ ಜಾಸ್ತಿ ಇಲ್ವಾ ?
ಹುಡುಗ : ನಾನು ಆ ಪಾಕೆಟ್ ಮನಿ ಸೇರಿಸೇ ಹೇಳಿದ್ದು ಸರ್ 🙊
✔✔✔✔✔✔✔✔✔✔✔✔
ಕಾಲೇಜಲ್ಲಿದ್ದಾಗ ಒಬ್ಬಳ ಹತ್ರ ಮೊಬೈಲ್ no ಕೇಳಿದ್ದೆ..! ಅವಳು ಕೊಡಲಿಲ್ಲ..!!
ಈಗ ನೋಡಿದ್ರೆ ಅವಳ Phone no ಮನೆ ಹೊರಗಡೆ ಹಾಕಿದ್ದಾರೆ “ ಇಲ್ಲಿ ಸೀರೆಗಳಿಗೆ ಜಿಗ್ ಜಾಗ್ ಫಾಲ್ಸ್ ಹಾಕಲಾಗುವುದು ಸಂಪರ್ಕಿಸಿ ” ಅಂತ😆😆🤦🏻♂️
ಈಗ ನೋಡಿದ್ರೆ ಅವಳ Phone no ಮನೆ ಹೊರಗಡೆ ಹಾಕಿದ್ದಾರೆ “ ಇಲ್ಲಿ ಸೀರೆಗಳಿಗೆ ಜಿಗ್ ಜಾಗ್ ಫಾಲ್ಸ್ ಹಾಕಲಾಗುವುದು ಸಂಪರ್ಕಿಸಿ ” ಅಂತ😆😆🤦🏻♂️
💜💜💜💜💜💜💜💜💜💜💜💜💜💜💜💜💜💜💜💜
ಇವತ್ತು ಯಾರಿಗಾದರೂ ಗುಲಾಬಿ ಕೊಡುವ ಮುನ್ನ ಕೆಳಗಿನ ಜೋಕನ್ನು ಗಂಭೀರವಾಗಿ ಓದಿ ನಂತರ ಗುಲಾಬಿ ಕೊಡಬೇಕೋ? ಅಥವಾ ತಮ್ಮ ಕಿವಿಯ ಮೇಲೆ ಇಟ್ಟುಕೊಳ್ಳುವುದೋ ನಿರ್ಧರಿಸಿ.
ಹೆಂಡತಿ : ನಿಮಗೆ ಯಾವಾಗಲೂ ನಾನೇ ಅಡುಗೆ ಮಾಡಿ ಹಾಕಬೇಕಾ? ಏನಾದರೂ ಕಾನೂನಿದ್ಯಾ??
ಗಂಡ : ಇದು ಜಗದ ನಿಯಮ. ಖೈದಿಗಳಿಗೆ ಊಟವನ್ನು ಸರ್ಕಾರವೇ ಕೊಡಬೇಕು ☺️