ಅದೊಂದು ದೊಡ್ಡ ಆಸ್ಪತ್ರೆ, ಆ ಆಸ್ಪತ್ರೆಯ ಹೊರಗಡೆ ದೊಡ್ಡ ದೊಡ್ಡ ಐಷಾರಾಮಿ ಕಾರುಗಳು, ಆಂಗ್ಲ ಮತ್ತು ಹಿಂದಿ ಭಾಷೆಯಲ್ಲೇ ಮಾತನಾಡುತ್ತಿರುವ ಜನಗಳು. ಸೂಟು ಬೂಟಿನ ಜನಗಳ ನಡುವೆ ತಾವು ಕಡಿಮೆ ಎಂದು ಮೂಲೆಯಲ್ಲಿ ನಿಂತಿರುವ ಕನ್ನಡದ ಜನಗಳು.


ಅದೊಂದು ದೊಡ್ಡ ಆಸ್ಪತ್ರೆ, ಆ ಆಸ್ಪತ್ರೆಯ ಹೊರಗಡೆ ದೊಡ್ಡ ದೊಡ್ಡ ಐಷಾರಾಮಿ ಕಾರುಗಳು, ಆಂಗ್ಲ ಮತ್ತು ಹಿಂದಿ ಭಾಷೆಯಲ್ಲೇ ಮಾತನಾಡುತ್ತಿರುವ ಜನಗಳು. ಸೂಟು ಬೂಟಿನ ಜನಗಳ ನಡುವೆ ತಾವು ಕಡಿಮೆ ಎಂದು ಮೂಲೆಯಲ್ಲಿ ನಿಂತಿರುವ ಕನ್ನಡದ ಜನಗಳು.


ಜೊತೆಗೆ ಯಾರು ಇರದ ಕಾರಣ ಹತ್ತಿರದ ಬಾರ್ ನಲ್ಲಿ ನಾನು ಒಬ್ಬನೇ ಕುಳಿತು ಕುಡಿಯುತಿದ್ದೆ. ನನ್ನ ಪಕ್ಕದ ಟೇಬಲ್ನಲ್ಲಿ 50 ವರ್ಷ ಮೀರಿದ ನಾಲ್ಕು - ಐದು ಜನ ಅಂಕಲ್ಗಳು ಕುಳಿತ್ತಿದ್ದಾರೆ.ಅವರ ಟೇಬಲ್ನಲ್ಲಿ ಅರ್ಧ ಖಾಲಿಯಾದ ಕರಿ ನಾಯಿ ಮತ್ತು ತುಂಬಿರುವ ಎಂಟು ಗಂಟೆ ಇದೆ. ಅವರ ಮಾತುಕಥೆಯ ಮಧ್ಯದಲ್ಲಿ ಅವರಲ್ಲಿ ಒಬ್ಬರು ಪಕ್ಕದಲ್ಲಿದ್ದ ಇನ್ನೊಬರ ಬೆನ್ನಿಗೆ ಐಸ್ ಕ್ಯೂಬ್ ಅನ್ನು ಹಾಕಿ ಮಜ ತೆಗೆದು ಕೊಳ್ಳುತ್ತಿದ್ದಾರೆ 
.
ನನ್ನ ಅಪ್ಪ ಕಟ್ಟಿ ಕೊಟ್ಟಿದ್ದ ಸುಂದರ ಬದುಕು; ಕೆಲವರ ಸ್ವಾರ್ಥ ಸಾಧನೆಯ ಪ್ರಯತ್ನಕ್ಕೆ ನಾನು ಮಣಿಯದೆ ಇದ್ದಾಗ ಇನ್ನೇನು ಮುಳುಗುವ ಹಂತದಲ್ಲಿತ್ತು. ಮನೆಯಲ್ಲಿ ಎಲ್ಲರೂ ಸಾಮಾನ್ಯವಾಗಿದ್ದರೂ ಒಳಗೆ ಯಾರಿಗೂ ಖುಷಿ ಮತ್ತು ಸಮಾಧಾನವಿರಲಿಲ್ಲ. ಅತ್ತ ನನ್ನ ಗೆಳೆಯ ತನ್ನ ಬದುಕು ಕಟ್ಟಿಕೊಳ್ಳಲು ದೂರದ ದಕ್ಷಿಣ ಆಫ್ರಿಕಾ ದೇಶದಲ್ಲಿ ಹೋರಾಟ ಮಾಡುತ್ತಿದ್ದ. ನನಗೆ ಅವನೊಡನೆ ಸಂಪರ್ಕಿಸಲು ಇದ್ದ ಮಾರ್ಗವೊಂದೆ ಅದು ಗೂಗಲ್ ನ ಚಾಟ್ ಸೇವೆ. ದೂರದ ಬೆಟ್ಟ ನುಣ್ಣಗೆ (ಎಲ್ಲವು ಹಾಗೆ ಅಲ್ಲವೇ?) ಹಾಗೆ ಅಲ್ಲಿನ ಸಂಸ್ಥೆ ಕೇವಲ ಬಾರತೀಯರನ್ನೇ ಅಲ್ಲಿ ನೇಮಕ ಮಾಡಿಕೊಳ್ಳುತಿತ್ತು ಮತ್ತು ಅವರ ಪಾಸ್ಪೋರ್ಟ್ ಮತ್ತು ಅಂಕ ಪಟ್ಟಿಗಳನ್ನು ಎರಡು ವರ್ಷದ ಅವಧಿಗೆ ವಶ ಪಡಿಸಿಕೊಳ್ಳುತಿತ್ತು.
ಗೋವಾಗೆ ಹೋಗೋಣ ಎಂದರೆ ಅಲ್ಲಿನ ಜನ ಜಂಗುಳಿ, ಕುಡುಕ ಮಿತ್ರರ ಹಾವಳಿ, ಪಬ್ ಸಂಸ್ಕೃತಿ ಸಾಕು ಸಾಕು ಅನಿಸಿತು. ಎಲ್ಲಿಗಾದರೂ ದೂರ ಬಹು ದೂರ ಹೋಗುವ ಬಾರ (ಕುವೆಂಪು ರಚಿತ ಬಾವಗೀತೆ) ಎಂದೆನ್ನಿಸಿ ನಿರ್ಜನ ಸಮುದ್ರ ತೀರಗಳ ಬಗ್ಗೆ ಹುಡುಕಿದಾಗ ಸಿಕ್ಕಿದ್ದೇ ಹವಳದ ದ್ವೀಪಗಳು. ಗೂಗಲ್ ನಲ್ಲಿ ಲಕ್ಷದ್ವೀಪಗಳಿಗೆ ಹೋಗುವ ದಾರಿಗಳ ಬಗ್ಗೆ ಮತ್ತು ಪ್ರವಾಸದ ಬಗ್ಗೆ ಎಲ್ಲ ಹುಡುಕಿ ತೆಗೆದು, ಅಳೆದು ಟೂರ್ ಬಗ್ಗೆ ಪಿ. ಹೆಚ್. ಡಿ. ಮಾಡಿದ ನಂತರ ಒಂದು ಮಟ್ಟದ ಅರಿವು ಬಂತು.
ಅವರು ಕೊಟ್ಟ ಟೀ ಬಿಸ್ಕತ್ ಅನ್ನು ಸೇವಿಸಿ ನಮ್ಮ ರೂಮಿನಲ್ಲಿ ವಿಶ್ರಾಂತಿ ಪಡೆದವು. ಸ್ವಲ್ಪ ಹೊತ್ತಿನ ಬಳಿಕ ಹಡಗು ಎರ್ನಾಕುಲಂ ಅನ್ನು ಬಿಟ್ಟು ಹೊರಟಿತು.
ರಾತ್ರಿಯ ಊಟ ಸುಮಾರು ಎಂಟು ಗಂಟೆಗೆ ಊಟದ ಮೊದಲು ಊಟದ ಡಂಗುರ ಸಾರಿಸಿ ಊಟ ತಯಾರಾಗಿದೆ ಎಂದು ಹೇಳಿದ ಬಳಿದ ಊಟ. ಊಟದ ಮೆನುವಿನಲ್ಲಿ ಸಸ್ಯಾಹಾರಿ ಮತ್ತು ಮಾಂಸಹಾರಿ ಗಳಿಗೆ ಪ್ರತ್ಯೇಕ ಕೌಂಟರ್ ಗಳಿದ್ದವು. ನಾವು ಎರಡು ಕೌಂಟರ್ನಲ್ಲಿ ಊಟ ಮಾಡಿ ಬಂದು ತುಂಬಾ ಹೊತ್ತಿನ ತನಕ ಮಾತಾನಾಡಿ ಮಲಗಿದೆವು. ಬೆಳಗ್ಗೆ ಎದ್ದಾಗ ಹಡಗು ಆಗಲೇ ನಿಂತಿತ್ತು. ನೋಡಿದಾಗ ಕನಸಿನಲ್ಲಿ ನೋಡಿದಹಾಗೆ ಇತ್ತು. ತಿಂಡಿ ತಿಂದು ನಮ್ಮನ್ನು ಕರೆದೊಯ್ಯಲು ಬಂದಿದೆ ಸಣ್ಣ ದೋಣಿ ಏರಿ ಕಲ್ಪೆನಿ ದ್ವೀಪಕ್ಕೆ ಹೋದೆವು.
ದ್ವೀಪದ ಹತ್ತಿರ ಆಳ ಸಾಕಾಗದ ಕಾರಣ ಹಡಗನ್ನು ದೂರದಲ್ಲೇ ಲಂಗರು ಹಾಕಿ, ಚಿಕ್ಕ ಚಿಕ್ಕ ಬೋಟ್ಗಳಲ್ಲಿ ದ್ವೀಪಕ್ಕೆ ಕರೆದೊಯ್ದು ಮತ್ತು ವಾಪಾಸ್ ಕರೆತರುತ್ತಾರೆ. ಅಂದಿನ ಹಗಲೆಲ್ಲವನ್ನು ದ್ವೀಪದಲ್ಲೆ ಕಳೆದು ಸಂಜೆಯ ವೇಳೆಗೆ ಮತ್ತೆ ಹಡಗಿಗೆ ವಾಪಾಸ್ ಬಂದೆವು. ಮದ್ಯಾನ್ನ ದ ಊಟದಲ್ಲಿ ಮೀನು ಮತ್ತು ಕೋಳಿ ಇದ್ದವು. ಊಟ ಮತ್ತು ಆಟಗಳು ಸೊಗಸಾಗಿದ್ದವು. ಸಂಜೆ ಹಡಗಿಗೆ ಬಂದ ನಂತರ ನಾವು ರೂಮಿಗೆ ಹೋಗದೆ ಹಡಗಿನ ಡೆಕ್ ನಲ್ಲಿ ಕುಳಿತು ಹಳೆಯ ಕನ್ನಡ ಹಾಡುಗಳನ್ನು ಕೇಳುತ್ತ ಮತ್ತು ಹರಟೆ ಹೊಡೆಯುತ್ತ ಕುಳಿತಿರುತಿದ್ದೆವು. ಅಲೆಗಳ ಶಬ್ದ ಮತ್ತು ಹಡಗು ನೀರನ್ನು ಸೀಳಿಕೊಂಡು ಹೋಗುವ ಶಬ್ದ ನನ್ನನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದವು. ರಾತ್ರಿ ಊಟದ ಗಂಟೆ ಯಾವಾಗ ಬಾರಿಸುವುದೋ ಎಂದು ಕಾಯ್ದು; ಗಂಟೆ ಬಾರಿಸಿದ ತಕ್ಷಣ ಹೋಗಿ ಚೆನ್ನಾಗಿ ಬ್ಯಾಟಿಂಗ್ ಮಾಡಿ ಬಂದು ಮತ್ತೆ ಡೆಕ್ ನಲ್ಲಿ ಕುಳಿತು ನಂತರ ಮಲಗಲು ರೂಮಿಗೆ ಹೋಗುತಿದ್ದೆವು.
ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ. ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...