ಅದು ಸರಕಾರಿ ಶಾಲೆಯ ಒಂದನೇ ತರಗತಿ. ಅಲ್ಲಿರುವ ಸುಮಾರು ನಲವತ್ತು ಮಕ್ಕಳು ನೆಲದ ಮೇಲಿದ್ದ ಮರದ ಮಣೆಯ ಮೇಲೆ ಕುಳಿತ್ತಿದ್ದರು. ತರಗತಿಯಲ್ಲಿ ನಿಂತಿದ್ದ ಮೈಲಾರಯ್ಯ ಮೇಷ್ಟ್ರು ನಾನು ನೆನ್ನೆ ಹೇಳಿದ್ದ ಹಾಗೆ ಒಂದು ಕಥೆ ಹೇಳಿ ಎಂದರು, ಮುಂದಿನ ಸಾಲಿನಲ್ಲಿ ಕುಳಿತಿದ್ದ ಒಬ್ಬ ಹುಡುಗನ್ನು ನೀನು ಹೇಳಪ್ಪ ಎಂದರು . ಅವನು ಎದ್ದು ಒಂದು ಊರಿನಲ್ಲಿ ಒಂದು ಕಾಗೆ ಇತ್ತಂತೆ ಅದಕ್ಕೆ ಕರಿ ಕಲ್ಲು ಓಣಿಯ ಹತ್ತಿರ ಇರುವ ಮನೆಯೊಂದರಲ್ಲಿ ಒಂದು ಚೂರು ರೊಟ್ಟಿ ಸಿಕ್ಕಿತಂತೆ .....
............. ... ಮರದ
ಮೇಲೆ
ಕುಳಿತಿದ್ದ
ಕಾಗೆ
'ಹೊಸ
ಬೆಳಕು
ಮೂಡುತಿದೆ
ಎಂದು
ಹಾಡಿದಾಗ
ಅದರ
ಬಾಯಲ್ಲಿದ್ದ
ರೊಟ್ಟಿ
ಜಾರಿ
ಕೆಳಗೆ
ಬಿತ್ತು'
ಎಂದ.
ಅದಕ್ಕೆ
ಅವರು
ನಕ್ಕು
ಸಂಜೆ
ಸಿಕ್ಕಾಗ
ನಿಮ್ಮ
ತಂದೆಗೆ
ಕಥೆ
ಚೆನ್ನಾಗಿದೆ
ಎಂದು
ಹೇಳ್ತಿನಿ
ಎಂದರು.
ಚಿಕ್ಕಂದಿನಲ್ಲಿ
ನನಗೆ
ಹುಷಾರು
ಇಲ್ಲದಿದ್ದರೆ,
ನನ್ನ
ಅಪ್ಪ
ಕನಲಿ
ಹೋಗುತ್ತಿದ್ದ.
ನನಗೆ
ಸರಿಯಾಗಿ
ಹೊಂದುತಿದ್ದ
ಸೂರ್ಯ
ಶೇಖರ್
ಡಾಕ್ಟರನ್ನು
ಸ್ನೇಹಿತರ
ಬಳಿ
ಮೋಟಾರ್
ಬೈಕ್
ಹೊಂದಿಸಿ
ಬಸ್ಸಿನ
ಸೌಲಭ್ಯ
ಇರದಿದ್ದ
ನನ್ನ
ಅಜ್ಜಿ
ಊರಿಗೆ
ಕಳುಹಿಸುತ್ತಿದ್ದರು.
ಡಾಕ್ಟರ್
ಅಲ್ಲಿಗೆ
ಬಂದು
ನನಗೆ
ಚಿಕಿತ್ಸೆ
ಕೊಟ್ಟ
ಮೇಲಷ್ಟೇ
ನಾನು
ಸರಿಯಾಗುತ್ತಿದ್ದು.
ಮಹಾನ್ ಸ್ವಾಭಿಮಾನಿಯಾಗಿದ್ದ ನನ್ನ ಅಪ್ಪ ನನ್ನಗೋಸ್ಕರ ಹಲವು ಬಾರಿ ಸ್ವಾಭಿಮಾನ ಬಿಡಬೇಕಾಗಿ ಬಂದಂದ್ದು ನನ್ನ ಸೋಲಷ್ಟೇ. ಆದರೂ ನಾನು ಹೇಳಿಕೊಳ್ಳದಿದ್ದರೂ, ತೋರಿಸಿಕೊಳ್ಳದಿದ್ದರೂ ನನ್ನ ಮನಸ್ಸನ್ನ ಸುಲಭವಾಗಿ ಅರಿಯುತ್ತಿದ್ದ ಅಪ್ಪ ನನ್ನ ನೋವಿಗೆ ಸ್ಪಂದಿಸಿ ಅದಕ್ಕೆ ಮುಕ್ತಿ ಕೊಡಿಸಿಬಿಡುತ್ತಿದ್ದ.
ಯಾವುದರ ಭಯ ಇರದ ಅವನಿಗೆ ದೆವ್ವ ಭೂತದ ಮಾತುಗಳಿಗೆ ಕ್ಯಾರೇ ಅನ್ನದೆ, ಸಮಯ ನೋಡದೆ ಬರುತ್ತಿದ್ದ ಅವರು, ಯಾರಿಗಾದರೂ ತೊಂದರೆ ಎಂದು ತಿಳಿದರೆ ತನ್ನೆ ಸಹಾಯ ಹಸ್ತ ಚಾಚುತಿದ್ದ. ಹಲವರಿಗೆ ಸಾಲಕ್ಕೆ ಶೂರಿಟಿ ಹಾಕಿ ಪಟ್ಟ ಪ್ರಯಾಸವೆಷ್ಟೋ !
ತನ್ನ ಅಣ್ಣನ ಮಕ್ಕಳೆಲ್ಲರನ್ನು ತನ್ನ ಮಕ್ಕಳು ಎಂದು ಬಾವಿಸಿ, ಕೊನೆಯ ಉಸಿರಿರುವರೆಗೂ ಹಾಗೆ ಅವರನ್ನು ಮದುವೆ ಮಾಡಿ ಒಂದು ದಡ ಸೇರುವಂತೆ ಮಾಡಿದ ಮಹಾನ್ ತ್ಯಾಗಿ. ಬಲಗೈಲಿ ಕೊಟ್ಟಿದ್ದು ಎಡಗೈಗೂ ಕೂಡ ಗೊತ್ತಾಗಬಾರದು ಎಂದು ಎಲ್ಲಿಯೂ ತನ್ನ ಬಗ್ಗೆ ಹೇಳಿ ಕೊಳ್ಳದ ನಿಸ್ವಾರ್ಥಿ.
ತನ್ನ ಎರಡು ಮಕ್ಕಳು ಚೆನ್ನಾಗಿ ಓದಿದ್ದಾರೆ ಇನ್ನೊಬ್ಬ ಮಗ ಸರಿಯಾಗಿ ಓದಲಿಲ್ಲ ಎಂದು ಅವನನ್ನು ಬೆಂಗಳೂರಿನಿಂದ ಕೆಲಸ ಬಿಡಿಸಿ ಊರಿಗೆ ಕರೆದು ಕಂಡು ಬಂದು, ಅವನನ್ನು ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ . ತಾನು ನಿವೃತ್ತಿಯಾಗಿದ್ದರೂ ಮಗನ ಕಾಲೇಜು ಫೀಸ್ ಕಟ್ಟಲು ಕಿರಾಣಿ ಅಂಗಡಿಯಿಟ್ಟ ಹೋರಾಟ ನಡೆಸಿ ಕೊನೆಗೂ ಮಗನನ್ನು ಪದವೀಧರನನ್ನಾಗಿ ಮಾಡಿದ ಶಿಕ್ಷಣ ಬ್ರಹ್ಮ.
ಇಂತಹ ಹುಟ್ಟು ಹೋರಾಟಗಾರ ಅಪ್ಪನಿಗೆ ನಿವೃತ್ತಿಯ ಸ್ವಲ್ಪ ಸಮಯದ ಬೆನ್ನಲ್ಲೇ ಮಂಡಿ ನೋವು ಎಂಬ ಮಾರಿ ಧುತ್ತೆಂದು ಬಂದೆರಗಿತ್ತು. ಆದರೂ ಆತ ಧೃತಿಗೆಡಲಿಲ್ಲ. ಅದ್ಯಾವ ಲೆಕ್ಕ, ಎನ್ನುತ್ತ ಆತ್ಮವಿಶ್ವಾಸದಿಂದ ಬದುಕಿದ. ಯಮಯಾತನೆಯಲ್ಲಿಯೂ ಒಂದು ದಿನ ಕೂಡ ನೋವು ಎಂದು ಕಿರುಚಲಿಲ್ಲ. ಮಗನಿಗೋಸ್ಕರ ಕಿರಾಣಿ ಅಂಗಡಿಯಲ್ಲಿ ಬೆಳಗಿನಿಂದ ಸಂಜೆಯವರ್ಗು ಕೂತು ದುಡಿಮೆ ಮಾಡುತ್ತ ಇದ್ದ. ಎಳೆಯ ಪ್ರಾಯದಿಂದ ರೂಢಿಸಿಕೊಂಡಿದ್ದ ಯೋಗ, ಧ್ಯಾನ, ದೈವಭಕ್ತಿ, ಕಷ್ಟ ಸಹಿಷ್ಣುತೆ ಅವನನ್ನು ಗಟ್ಟಿಗನಾಗಿಸಿದ್ದವು.
ಪ್ರಾಣ ಬಿಡುವ ಕೆಲವೇ ಗಂಟೆಗಳ ಹಿಂದೆ ಕೂಡ ನನ್ನ ಮಗನಿಗೆ ಮನೆ ನೋಡಬೇಕು ಅವನಿಗೆ ನಾನು ಬಿಟ್ಟರೆ ಬೇರೆ ಯಾರಿದ್ದಾರೆ ಎಂದು ಹಠ ಹಿಡಿದು ಕುಳಿತಿದ್ದ. ಆದರೆ ವಿಧಿ ಆಗಲೇ ತಯಾರಾಗಿ ಕುಳಿತಿತ್ತು,
ನನ್ನನ್ನು
ಬೇರೆಡೆಗೆ
ಕಳುಹಿಸಿ
ನನ್ನಪ್ಪನ್ನು
ನನ್ನಿಂದ
ಶಾಶ್ವತವಾಗಿ
ದೂರ
ಮಾಡಿತು
ಇಂತಹ ದೇವನಿಗೆ ಶಿಕ್ಷಕರ ದಿನದಂದು ನನ್ನ ಕಣ್ಣೀರ
ನಮನ.

No comments:
Post a Comment