ನನ್ನ ಸ್ನೇಹಿತನೊಬ್ಬ ನಿನ್ನ ನಂತರ ಕುಟುಂಬಕ್ಕೆ ನಿನ್ನ ಬಗ್ಗೆ ಏನು ತಿಳಿಯಬೇಕು ಎಂದು ಕೇಳಿದ ಪ್ರಶ್ನೆಗೆ ನನ್ನ ಉತ್ತರ:
1. ನನ್ನ ಬಳಿ ಅಜೀವ ಪರ್ಯಂತ ಸದ್ಯಸ್ಯತ್ವ ಇರುವ ಅಮೆಜಾನ್ ಪ್ರೈಮ್ ಖಾತೆ ಇದೆ. ನೀವು ಅದನ್ನು ನನ್ನ ಲ್ಯಾಪ್ಟಾಪ್ ನಲ್ಲಿ ವೀಕ್ಷಿಸಬಹುದು.
2. ನನ್ನ ಪುಸ್ತಕಗಳು ಇಡುವ ಜಾಗದಲ್ಲಿ, ಒಂದು ಕಪ್ಪು ಬಣ್ಣದ ಫೈಲ್ ಇದೆ.
ಅದರ ಕೊನೆಯ ಪುಟದ ಒಳಗಡೆ ಅಂದರೆ ಹೊದಿಕೆಯ ಒಳಗಡೆ ಒಂದು ಫೋಟೋ ಇದೆ. ಸಾದ್ಯವಾದರೆ ಅದನ್ನು ಹಿಂದಿರುಗಿಸಿ.
ಅದರ ಕೊನೆಯ ಪುಟದ ಒಳಗಡೆ ಅಂದರೆ ಹೊದಿಕೆಯ ಒಳಗಡೆ ಒಂದು ಫೋಟೋ ಇದೆ. ಸಾದ್ಯವಾದರೆ ಅದನ್ನು ಹಿಂದಿರುಗಿಸಿ.
3. ನನ್ನ ಮೊಬೈಲ್ ಅನ್ನು ಉಪಯೋಗಿಸಲು 1801 ಪಿನ್ ಅನ್ನು ಉಪಯೋಗಿಸಿ ಯಾಕೆಂದರೇ ನಾನು ಅದನ್ನು ಉಪಯೋಗಿಸಲು ಶುರು ಮಾಡಿದ್ದು 18 ಜನವರಿ ಯಿಂದ
4. ನನ್ನ ಮೊಬೈಲ್ನಲ್ಲಿ ಎರಡು ಕ್ಯಾಲ್ಕುಲೇಟರ್ ಆಪ್ಗಳಿವೆ, ಒಂದು ಮೊಬೈಲ್ ಸಾಫ್ಟ್ವೇರ್ ಜೊತೆಗೆ ಬಂದಿರುವುದು, ಇನ್ನೊಂದು ಪ್ಲೇ ಸ್ಟೋರ್ ನಿಂದ ಹಾಕಿಕೊಂಡಿರುವುದು. ಪ್ಲೇ ಸ್ಟೋರಿನಿಂದ ಹಾಕಿರುವ ಕ್ಯಾಲ್ಕುಲೇಟರ್ ಗೆ 1801 ಸಂಖ್ಯೆಯನ್ನು ಒತ್ತಿ ಮತ್ತು '=' ಒತ್ತಿದಾಗ ನಿಮಗೆ ಒಂದು ಪಿಡಿಎಫ್ ಫೈಲ್ ಸಿಗುತ್ತದೆ, ಆ ಪಿಡಿಎಫ್ ಹಾಳೆಯಲ್ಲಿ ಆ ಫೋಟೋದಲ್ಲಿರುವ ಹುಡುಗಿಯ ಹೆಸರು ಮತ್ತು ವಿಳಾಸ ಇದೆ. ಅದನ್ನು ಅವಳಿಗೆ ಕೊರಿಯರ್ ಮಾಡಿ. ಅವಳಿಗೆ ಪ್ರತಿದಿನ ಶುಭರಾತ್ರಿ ಸಂದೇಶ ಕಳಿಹಿಸಲು ಆಗುವುದಿಲ್ಲ ಎಂದು ವೇದನೆಯಷ್ಟೆ
5. ನನ್ನ ಎರಡನೇ ಕಪಾಟಿನಲ್ಲಿ, ನನ್ನ ಎಲ್ ಎಲ್ ಬಿ ಯ ಪುಸ್ತಕಗಳಿವೆ, ಜೊತೆಗೆ ಗ್ರಂಥಾಲಯದ ಒಟ್ಟು ನಾಲ್ಕು ಪುಸ್ತಕಗಳಿವೆ, ಅದನ್ನು ಕಾಲೇಜಿಗೆ ಹಿಂತಿರುಗಿಸಿ. ಕಾಲೇಜಿನ ಆಡಳಿತ ಮಂಡಳಿಯವರಿಗೆ ನನಗೆ ಮರಣೋತ್ತರವಾಗಿ ಪದವಿ ನೀಡಲು ಸಾಧ್ಯವೇ ಎಂದು ಕೇಳಿ ? ಯಾಕೆಂದರೇ ನನ್ನ ಪದವಿಯ ಬಗ್ಗೆ ಅಪ್ಪನಿಗೆ ಬಾರಿ ನೀರಿಕ್ಷೆ ಇತ್ತು. ಅದನ್ನು ಹೀಗಾದರೂ ತೀರಿಸಬಹುದೇ
6. ನನ್ನ ಸ್ನೇಹಿತರಿಗೆ ಲೇಹ್ - ಲಡಾಖ್ ಪ್ರವಾಸ ಹೋಗುವ ಬಗ್ಗೆ ಹುಚ್ಚು ಹತ್ತಿಸಿದ್ದೆ, ಅವರಿಗೆ ನನ್ನ ಕೊನೆಯ ಕ್ಷಮೆಯನ್ನು ತಿಳಿಸಿಬಿಡಿ. ಮುಂದಿನ ಬುಲೆಟ್ ಬೈಕ್ ರೈಡ್ ಪ್ರವಾಸದಲ್ಲಿ ಬಿಯರ್ ಅನ್ನು ಅವರ ಜೊತೆ ಪ್ರಯತ್ನಿಸುತ್ತೆನೆ ಎಂದು ಹೇಳಿ.
7. ನನ್ನ ಆಫೀಸ್ ನ ಲ್ಯಾಪ್ಟಾಪ್ ಅನ್ನು ಮುಂಬೈನ ವಿಳಾಸಕ್ಕೆ ಕಳುಹಿಸಿ ಕೊಡಿ, ನನ್ನ ಬೆನ್ನ ಹಿಂದೆ ಬಿದಿದ್ದ ಕುನಾಲ್ ಗೆ ನನ್ನ ಸ್ಥಾನ ಸಿಗಬಹುದು, ನಾಯಕನ ಕುರ್ಚಿ ಪೈಲ್ಸ್ ನ ಹಾಗೆ ಎಂದು ಅವನಿಗೂ ತಿಳಿಯಲಿ.
8. ನನ್ನ ಬ್ಯಾಂಕ್ ಅಕೌಂಟ್ ಗಳು ಮತ್ತು ವಿಮೆಯ ಬಗ್ಗೆ ಅನಿಯನಿಗೆ ತಿಳಿದಿದೆ. ನನ್ನ ಕೆಲವು ತಡವಾದ ನಿರ್ಧಾರಗಳಿಗೆ ಅವನು ಬಲಿಪಶುವಾಗಿದ್ದಾನೆ. ನನ್ನ ಗ್ರಾಚುಟಿ ಮೊತ್ತ ಅವನಿಗೆ ಸೇರಲಿ.
9. ನನ್ನ ಬುಲೆಟ್ ಬೈಕ್ ಅನ್ನು ಕೃಷ್ಣರಾಜನಿಗೆ ಕೊಟ್ಟು ಬಿಡಿ, ಅವನಿಗೆ ಬುಲೆಟ್ ಬಗ್ಗೆ ವಿಪರೀತ ಮೋಹ ಇದೆ ಹಾಗು ಅವನ ಮದುವೆಗೆ ಹಾಜರಾಗದಕ್ಕೆ ಕ್ಷಮೆಯಿರಲಿ.
ನನ್ನ ಎಲ್ಲ ವಸ್ತುಗಳ್ಳನ್ನು ನಿಮಗೆ ಹೇಗೆ ಬೇಕೋ ಆ ತರಹ ವಿಲೇವಾರಿ ಮಾಡಿ. ಆದರೆ ಲೆದರ್ ಬ್ಯಾಗಿನಲ್ಲಿ ಇರುವ ಕೆಂಪು ಪಟ್ಟಿ ಇರುವ ಬಿಳಿ ಲಕೋಟೆಯನ್ನು ಬೆಂಕಿಯಲ್ಲಿ ಸುಟ್ಟು ಬಿಡಿ , ಯಾಕೆಂದರೆ ಇನ್ನೊಬ್ಬರ ಪ್ರೇಮ ಪತ್ರ ಓದುವುದು ತಪ್ಪು.
ಮುಂದಿನ ಜನ್ಮದಲ್ಲಿ ಮತ್ತೆ ನಿಮ್ಮೆಲ್ಲರ ನಡುವೆಯೇ ಹುಟ್ಟಿ ಬರುವ ಆಸೆ 🙏💓
ಆ ಪ್ರೇಮ ಪತ್ರ ಸಿಗಾಬೇಕಾದಾರಿಗೆ ಅದಷ್ಟು ಬೇಗ ಸಿಗಲಿ.. ಈ ಕವಿ ಹೃದಯ ನೋವಿಗೆ ಶಾಂತಿ ಸಿಗಲಿ..
ReplyDelete- MS
ಮಹಾದೇವನ ಕೃಪೆ ನಿಮ್ಮ ಮೇಲೂ ಇರಲಿ
Delete