Thursday, September 22, 2022

ಇಂಪೀರಿಯಲ್ ಬ್ಲೂ


 ಅದೊಂದು ದೊಡ್ಡ ಆಸ್ಪತ್ರೆ, ಆ ಆಸ್ಪತ್ರೆಯ ಹೊರಗಡೆ ದೊಡ್ಡ ದೊಡ್ಡ ಐಷಾರಾಮಿ ಕಾರುಗಳು, ಆಂಗ್ಲ ಮತ್ತು ಹಿಂದಿ ಭಾಷೆಯಲ್ಲೇ ಮಾತನಾಡುತ್ತಿರುವ ಜನಗಳು. ಸೂಟು ಬೂಟಿನ ಜನಗಳ ನಡುವೆ ತಾವು ಕಡಿಮೆ ಎಂದು ಮೂಲೆಯಲ್ಲಿ ನಿಂತಿರುವ ಕನ್ನಡದ ಜನಗಳು. 


ಅಲ್ಲಿನ ಮೂರನೇ ಅಂತಸ್ತಿನಲ್ಲಿರುವ ತುರ್ತು ನಿಗಾ ಘಟಕ ದಲ್ಲಿ, ಪತ್ನಿಯೊಬ್ಬಳು ತನ್ನ ಪತಿ ಗೆ ಹೇಳುತ್ತಿದ್ದಾಳೆ. 

ಪತ್ನಿ: ನಾನು ಏನಾದರು ಸತ್ತರೆ ಏನು ಮಾಡ್ತೀರಿ?

ಪತಿ : ಸುಮ್ನಿರು, ಹಾಗೆಲ್ಲ ಮಾತಾಡ್ಬಾರ್ದು. ನೀನು ಬೇಗ ಹುಷಾರಾಗ್ತೀಯ !

ಪತ್ನಿ: ಇಲ್ಲ, ನನಗೆ ಹಾಗೆ ಅನಿಸ್ತಾ ಇಲ್ಲ. ನಿಜವಾಗ್ಲೂ ನಾನು ಸತ್ತರೆ ನೀವು ಇನ್ನೊಂದು ಮದುವೆ ಆಗ್ತೀರ?

ಪತಿ: ಖಂಡಿತವಾಗಿ ಇಲ್ಲ; ನನಗೆ ಅಷ್ಟೊಂದು ಅದೃಷ್ಟ ಇಲ್ಲ😑

ಪತ್ನಿ: ನೀವು ನನ್ನ ಮೇಲೆ ಆಣೆ ಮಾಡಿ, ಮಾಡುವೆ ಆಗ್ತೀನಿ ಅಂತ. 

ಪತಿ: ಆಯಿತು  ನಿನ್ನ ಮೇಲೆ ಆಣೆ, ನಿನಗೋಸ್ಕರ ಒಂದು ಮದುವೆ ಆಗ್ತೀನಿ. 

ಪತ್ನಿ: ಒಳ್ಳೆಯದು, ಆಗಿದ್ರೆ ಅವಳು ಅವಳಿಗೆ ನನ್ನ ಬಟ್ಟೆ ಕೊಡ್ತೀರ ?

ಪತಿ: ಇಲ್ಲ. ನಿನ್ನ ಬಟ್ಟೆಗೆ ನೀನೆ ಮಾಲಕಿ, ಅವಳಿಗೆ ಕೊಡೋದಿಲ್ಲ ಅವಳಿಗೆ ಬೇಕಾದ್ರೆ ಯಾವುದಾದರು ಶೋರೂಮ್ ನಿಂದ ಕೊಡಿಸ್ತೀನಿ ಬಿಡು. 

ಪತ್ನಿ: ಅವಳು ನನ್ನ ಕಾರ್ ನ ಉಪಯೋಗಿಸ್ತಾಳ ?

ಪತಿ: ಇಲ್ಲ, ನಿನ್ನಕಾರ್ ಅನ್ನು ನಿನ್ನ ನೆನಪಿಗೋಸ್ಕರ ಆಗೇ ಇಡುತ್ತೇನೆ, ಅದು ತುಕ್ಕು ಇಡಿಯಲು ಶುರುವಾದರೆ ಗುಜರಿ ಸಾಬರಿಗೆ ಕೊಡುತ್ತೇನೆ. ಅವಳಿಗೆ ಬೇಕಾದ್ರೆ ಹೊಸ ಕಾರು ತೆಗೆದು  ಆಯಿತು. 

ಪತ್ನಿ: ಅವಳು ನನ್ನ ಚಪ್ಪಲಿಗಳನ್ನು ಉಪಯೋಗಿಸ್ತಾಳ ?

ಪತಿ: ಇಲ್ಲ ನಿನ್ನ ಸೈಜ್ ಅವಳಿಗೆ ಆಗೋದಿಲ್ಲ,ಅವಳು ಎತ್ತರದ (ಹೈ ಹೀಲ್ಡ್ ) ಚಪ್ಪಲಿ ಗಳನ್ನು ಉಪಯೋಗಿಸಲ್ಲ, ಅದು ಅಲ್ಲದೆ ಅವಳ ಚಪ್ಪಲಿ ಸೈಜ್ 5 ಅದು ನಿನಗಿಂತ ಚಿಕ್ಕದು ಅಂದ

Pyar ki raho mein chalna sikh   😜 

👏     👏     👏     👏     👏     👏       👏        👏     👏      👏

ಪತಿ - ಪತ್ನಿ ಪಾರ್ಕ್ನಲ್ಲಿ ವಾಕಿಂಗ್ ಮಾಡುತಿದ್ದರು; ಅಷ್ಟ್ರಲ್ಲಿ ಗಂಡ ಕುಸಿದು ಬಿದ್ದ. 

 ಗಂಡ: ನನಗೆ ಪಕ್ಕೆ ನೋವ್ತಾ ಇದೆ, ಬೇಗ ಡಾಕ್ಟರ್ ಕರಿ ಅಂದ. 

ಹೆಂಡತಿ: ಆಯಿತು, ಗಾಬರಿಯಾಗ ಬೇಡಿ, ನಿಮ್ಮ ಮೊಬೈಲ್ನ ಪಾಸ್ವರ್ಡ್ ಹೇಳಿ; ಅದನ್ನು ಓಪನ್ ಮಾಡಿ ಕರೆಯುವೆ ಎಂದಳು. 

ಗಂಡ :  ಅಬ್ಬಾ . ಈಗ ಸ್ವಲ್ಪ ಪರವಾಗಿಲ್ಲ. ನಡಿ ಮನೆಗೆ ಹೋಗೋಣ ಅಂದ . 


🔦      🔦     🔦    🔦    🔦    🔦     🔦    🔦         🔦     🔦      


ಪತಿ: ಏನೇ, ಪೇಪರ್ ನಲ್ಲಿ ಜನಮೇಜಯ ಅಂತ ಇದೆ. ಆಗಂದ್ರೆ ಏನು ಗೊತ್ತಾ ನಿನಗೆ ?

ಪತ್ನಿ: ಮೊಬೈಲ್ ನೋಡುತ್ತಾ " ಮೇ ತಿಂಗಳ ಚುನಾವಣೆಯಲ್ಲಿ ಗೆದ್ದ ಬಂದ ಜನ ಅಂತ " ಅಷ್ಟು ಗೊತ್ತಾಗಲ್ವಾ ನಿಮಗೆ ಅಂದಳು. 

ಇವಳಿಗಿಂತ ನನ್ನ ಶಾಲೆಯ ಮಕ್ಕಳೇ ವಾಸಿ ಅಂತ ಎದ್ದು ಶಾಲೆಗೇ ಬಂದನು. ಶಾಲಾ ತರಗತಿಯಲ್ಲಿ ಮಕ್ಕಳನ್ನು ಪ್ರಶ್ನೆ ಕೇಳಿದನು. 

ಶಿಕ್ಷಕ: ದಾನಗಳಲೆಲ್ಲ ದೊಡ್ಡ ದಾನ ಯಾವುದೋ ಗುಂಡ?

ಗುಂಡ: ಸಾ! ಅದು ಮೈದಾನ ಸರ್ !

ಶಿಕ್ಷಕ : ಲೋ ಕಿಟ್ಟಿ ಹಾಸ್ಪಿಟಾಲಿಟಿ ಅಂದರೇನು?

ಕಿಟ್ಟಿ: ಆಸ್ಪತ್ರೆಯಲ್ಲಿ ಕೊಡುವ ಟೀ! ಸಾರ್ 

🕵                           🕵                          🕵                                  🕵
 

No comments:

Post a Comment

ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...