ಅದು ಮೂರನೇ ಮಹಡಿಯಲ್ಲಿರುವ ಸಿಂಗಲ್ ರೂಮ್, ಬ್ಯಾಚುಲರ್ ಹುಡುಗರಿಗೆ ಅಂತಾನೆ ಕಟ್ಟಿಸಿರುವ ರೂಮು. ಆ ರೂಮಿನಲ್ಲಿ ಇರುವುದು ಅಡುಗೆ ಬೇಯಿಸುವುದಕ್ಕೆ ಅಂತಾ ನಾಲ್ಕು ಅಡಿಗಳ ಮೇಲೆ ಇರುವ ಒಂದು ಕಲ್ಲಿನ ಮೇಜು ಅದು ಬಿಟ್ಟರೆ ಒಂದು ಜೊತೆ ಕಿಟಕಿಗಳು.
ಅಲ್ಲಿರುವ ಎರಡು ಕಬ್ಬಿಣದ ಕುರ್ಚಿಗಳ ಮೇಲೆ ಕುಳಿತಿದ್ದ ಇಬ್ಬರು ಸ್ನೇಹಿತರ ನಡುವೆ ನಡೆಯುತ್ತಿದ್ದ ಮಾತುಕತೆ:
ಒಬ್ಬ: ಏನು ಗುರು, ಹೇಗೆ ನಡಿಯುತ್ತಿದೆ ಜೀವನ ಬೆಂಗಳೂರಿನಲ್ಲಿ ?
ಮತ್ತೊಬ್ಬ: ಏನು ಅಂತ ಹೇಳೋದು ಮಾರಾಯ, ಅವನು ಗಿರಿ ಕೊಡೊ 6000 ರೂಪಾಯಿ ಸಂಬಳ ಸಾಲುತ್ತಾ ಇಲ್ಲ. ಈ ರೂಮಿನ ಬಾಡಿಗೆ ಅಂತ ತಿಮ್ಮಯ್ಯನಿಗೆ 2000 ಕೊಡಬೇಕು, ಮದ್ಯಾಹ್ನದ ಊಟಕ್ಕೆ ಗಣೇಶ್ ಭವನ್ ಹೋಟೆಲ್ನಲ್ಲಿ ಕಾಸ್ಟ್ಲಿ ಅಂತ ಅದರ ಪಕ್ಕ ಇರೋ ಕಾಫಿ ಬಾರ್ನಲ್ಲಿ ಇರುವ ತಂಬಿ ಹೋಟೆಲ್ ನಲ್ಲಿ ಊಟ ಮಾಡ್ತೀನಿ ಅಷ್ಟೇ ಅಂದ. ನಂದಿರಲಿ ನಿನ್ನ ವಿದ್ಯಾಭ್ಯಾಸ ಹೇಗೆ ನಡೀತಾ ಇದೆ ಅಂದ ?
ಒಬ್ಬ: ಅದೇನು ಅಂತ ಹೇಳಲಿ ಗುರು, ಮನೆಯಿಂದ ಕೊಡ್ತಾ ಇರೋ ದುಡ್ಡು ಸಾಕಾಗೊಲ್ಲ.
ಮತ್ತೊಬ್ಬ : ಮತ್ತೆ ಹೇಗೆ ಮ್ಯಾನೇಜ್ ಮಾಡ್ತಾ ಇದ್ದೀಯ ಮಾರಾಯ?
ಒಬ್ಬ: ನಾನು ಮೊನ್ನೆ ಮೊಬೈಲ್ ತೆಗೆದು ಕೊಂಡೆನಲ್ಲ ಅದ್ರಲ್ಲಿ ಫ್ಲೈಟ್ ಮೋಡ್ ನ ಬದಲು ಸೈಕಲ್ ನ ಚಿತ್ರ ಇದೆ. ಯಾಕೆಂದರೆ ಫ್ಲೈಟ್ ದುಬಾರಿ ಅಲ್ವ ಅದಕ್ಕೆ ಅದರ ಬದಲು ಈ ಮೊಬೈಲ್ ತೆಗೆದುಕೊಂಡೆ ಅಂದ.
ಮತ್ತೊಬ್ಬ: ಪರವಾಗಿಲ್ಲ ಗುರು. ನಾನು ಮೊಬೈಲ್ ನ ಉಪಯೋಗಿಸ್ತಾನೆ ಇಲ್ಲ. ಕಚೇರಿಯಲ್ಲಿ ಹೇಗಿದ್ರು ಫೋನ್ ಇದೆ ಅಲ್ಲಿಂದನೇ ಎಲ್ಲರಿಗು ಫೋನ್ ಮಾಡ್ತೀನಿ. ರಜ ಇದ್ದ ದಿನ ರಸ್ತೆಯಲ್ಲಿ ತಿರುಗಾಡುತ್ತಿರುವವರ ಹತ್ತಿರ ಸಾರ್ ಸ್ವಲ್ಪ ಮೊಬೈಲ್ ಕೊಡ್ತೀರಾ ಅರ್ಜೆಂಟ್ ಆಗಿ ಒಂದು ಫೋನ್ ಮಾಡಬೇಕು, ನನ್ನ ಮೊಬೈಲ್ ಕಳೆದು ಹೋಯ್ತು ಅಂತ ಹೇಳ್ತಿನಿ ಅಂದ
ಒಬ್ಬ: ಹಾಗಿದ್ರೆ ಇನ್ಸ್ಟಾಗ್ರಾಮ್ ಮತ್ತು ವಾಟ್ಸಪ್ಪ್ ನಲ್ಲಿ ಮೆಸೇಜ್ ಹೇಗೆ ಮಾಡ್ತಿಯ ?
ಮತ್ತೊಬ್ಬ: ಮೆಸೇಜ್ ಮಾಡಬೇಕು ಅಂದರೆ ಪಾರ್ಕ್ ಹೋಗಿ ಕೂರುತ್ತೀನಿ. ಅಲ್ಲಿರುವ ಯುವ ಜೋಡಿಗಳ ಬಳಿ ಹೋಗಿ ಸ್ವಲ್ಪ ಮೊಬೈಲ್ ಕೊಡ್ತೀರ ನನ್ನ ಫ್ರೆಂಡ್ ಗೆ ಮೆಸೇಜ್ ಮಾಡ್ತೀನಿ ಅಂತ ಕೇಳಿದ್ರೆ ಕೊಡ್ತಾರೆ ಅಂದ .
ಒಬ್ಬ: ಒಳ್ಳೇದು ಗುರು, ನೀನು ತುಂಬಾ ಹಣ ಉಳಿಸ್ತಾ ಇದ್ದೀಯ. ನಾನೇನು ಮಾಡ್ತೀನಿ ಗೊತ್ತಾ? ಮಳೆ ಬಂದಾಗ ಕೊಳೆ ಬಟ್ಟೆಗಲ್ಲನ್ನ ಹೊರಡಗೆ ಇರೋ ತಂತಿಯಲ್ಲಿ ಹಾಕ್ತೇನೆ ಮಳೆಗೆ ಎಲ್ಲಾ ಕ್ಲೀನ್ ಆಗಿರುತ್ತವೆ ಅಂದ.
ಮತ್ತೊಬ್ಬ: ನಾನು ಅಷ್ಟೇ ಮಳೆ ಬಂದಾಗ್ಲೇ ಸ್ನಾನ ಮಾಡೋದು, ನೀರಿನ ಖರ್ಚು ಉಳಿಯುತ್ತೆ ಅಂತ ಅಂದ.
ಒಬ್ಬ: ನಾನು ಈಗ ಒಳ ಉಡುಪು ಅಂದರೆ ಅಂಡರ್ ವೆರ್ ತೆಗೆದುಕೊಳ್ತಾ ಇಲ್ಲ, ಯಾಕೆಂದರೆ ಅಮೆಜಾನ್ ನಲ್ಲಿ ಏಳು ದಿನಕ್ಕೆ ವಾಪಸ್ಸು ಮಾಡಿ ಬೆರೆದು ಆರ್ಡರ್ ಮಾಡ್ತಾ ಇದ್ದೀನಿ.
ಒಬ್ಬ: ಯೋಚ್ನೆ ಮಾಡಬೇಡ. ಎಲ್ಲರು ನನ್ನ ಹಾಗೆ ಇರಲ್ಲ. ನನ್ನ ಪಕ್ಕದ ಮನೆಯವನು ತುಂಬಾ ಉದಾರಿ. ಮೊನ್ನೆ ಅವರ ಸ್ನೇಹಿತರ ಮದುವೆಗೆ ಹೋಗಿದ್ದರಂತೆ ಅಲ್ಲಿ ಏನಾಯ್ತು ಗೊತ್ತಾ?
ಮತ್ತೊಬ್ಬ : ಏನಾಯ್ತೋ?
ಒಬ್ಬ : ಮದುವೆ ಮನೆಯಲ್ಲಿ ವಧುವರರಿಗೆ ಶುಭಾಶಯ ಕೋರುವ ಕ್ಯೂ ತುಂಬಾ ಉದ್ದ ಇತ್ತು. ಹೊಟ್ಟೆ ಬೇರೆ ತುಂಬಾ ಹಸಿತ್ತಿತ್ತು. ಸರಿ ಊಟ ಮಾಡ್ಕೊಂಡು ಆಮೇಲೆ ವಿಶ್ ಮಾಡಿದರಾಯಿತು ಅಂತ ಊಟದ ಹಾಲಿಗೆ ಹೋದರೆ, ಅಲ್ಲಿ ನಿಂತವನೊಬ್ಬ ಸರ್ ಓಟಿಪಿ ಅಂದ. ನಾನು ತಲೆ ಕೆಡಿಸಿಕೊಂಡು ಏನೆಂದು ವಿಚಾರಿಸಿದೆ. ಅದಕ್ಕೆ ಅವನು 'ಇದು ಹೊಸ ಸಿಸ್ಟಮ್ ಸರ್ ನೀವು ವಧುವರರಿಗೆ ಉಡುಗೊರೆ ಕೊಟ್ಟ ಮೇಲೆ ನಿಮ್ಮ ಮೊಬೈಲ್‌ಗೆ ಒಂದು ಒಟಿಪಿ ಬರುತ್ತೆ. ಅದನ್ನು ನೀವು ತೋರಿಸಿ ಕೌಂಟರ್‌ನಿಂದ ಬಾಳೆ ಎಲೆ ಮತ್ತೆ ನೀರನ್ನು ತಗೊಂಡು ಊಟಕ್ಕೆ ಕೂರಬಹುದು' ಎಂದನಂತೆ ಅದಕ್ಕೆ ಅವನು ಎರಡು ಖಾಲಿ ಮುಯ್ಯಿ ಕವರ್ ಅನ್ನು ವಧುವರರಿಗೆ ಕೊಟ್ಟು ಬಿಟ್ಟಿ ಊಟ ಮಾಡಿ ಬಂದನಂತೆ.
ಅಷ್ಟ್ರಲ್ಲಿ ಪೊಲೀಸ್ ತಿಮ್ಮಯ್ಯ ಮೇಲೆ ಬಂದು ಎಲ್ಲಿ ಬಾಡಿಗೆ ಎಂದಾಗ ಸಾರು ಇನ್ನು ಸಂಬಳ ಆಗಿಲ್ಲ ನಾಳೆ ಸಂಜೆ ಕೊಡ್ತೀನಿ ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದರು.
ಕೊನೆಯ ಪಂಚ್ ನಿಮಗೋಸ್ಕರ:
ಮರೆಯಲು ಯತ್ನಿಸಿದರೂ ಮತ್ತೆ ಮತ್ತೆ
ನೆನಪಾಗುವುದು ಕನಸಿನ ಪ್ರೇಯಸಿಯ ಸವಿನುಡಿ
ಚೀಟಿಯಲ್ಲಿ ಬರೆದಿಟ್ಟರೂ ಮರೆತು ಹೋಯಿತು
ಮಡದಿ ತರಲು ಹೇಳಿದ್ದ ಕಾಫಿಪುಡಿ. .!!!
No comments:
Post a Comment