ಡಾಕ್ಟರ್ ಮಾಲತಿಯ ಎದುರಿಗೆ ಕುಳಿತಿದ್ದ ದೀಪಾಳ ಮುಖದಲ್ಲಿ ದುಗುಡವಿತ್ತು, ಕೇಳಲೋ ಬೇಡವೋ ಎಂಬಂತೆ ನಿರ್ಧರಿಸಿ ಡಾಕ್ಟರ್ ನನ್ನ ಗಂಡ "ಯಾವಾಗ ನಡೆಯಲು ಮತ್ತು ಮಾತನಾಡುತ್ತಾರೆ?" ಎಂದು ಕೇಳಿದಳು. ಅವಳ ಕೈಯನ್ನು 7 ವರ್ಷದ ಚತುರ್ಥಿ ಮತ್ತು 4 ವರ್ಷದ ಕ್ಷಮತ ಹಿಡಿಕೊಂಡಿದ್ದರು. ದೀಪಾಳು ತನ್ನ ಗಂಡ ಶಶಾಂಕ್ ನನ್ನು ಮೆದುಳಿನ ರಕ್ತಸ್ರಾವ ಆಪರೇಷನ್ ನ ನಂತರದ ತಿಂಗಳ ಆರೋಗ್ಯ ತಪಾಸಣೆಗೆ ಕರೆದುಕೊಂಡು ಬಂದಿದ್ದಳು.
ಶಶಾಂಕ್ ನ ದೇಹದ ಬಲ ಬಾಗ ಸಂಪೂರ್ಣವಾಗಿ ಪಾರ್ಶ್ವವಾಯುಗೆ (ಲಕ್ವ) ತುತ್ತಾಗಿತ್ತು. ಇದರಿಂದ 37 ವರ್ಷದ ಶಶಾಂಕ್ಗೆ ನಡೆಯಲು, ಮಾತನಾಡಲು ಆಗುತ್ತಿರಲಿಲ್ಲ. ಶಶಾಂಕ್ ನನ್ನು ನಾನು ಮೊದಲು ನೋಡಿದ್ದು ಮೂರು ವರ್ಷದ ಮುಂಚೆ ಇದೆ ಹಾಸ್ಪಿಟಲ್ ನಲ್ಲಿ, ತಲೆನೋವು ಎಂದು ಶಶಾಂಕ್ ಮಾಲತಿಯವರ ಬಳಿ ಬಂದಿದ್ದ; ಪರೀಕ್ಷೆ ಮಾಡಿದಾಗ ಅವನ ರಕ್ತದೊತ್ತಡ 160/110 mmHg ಇತ್ತು.
ಕೇಳಿದಾಗ ತಿಳಿದಿದ್ದು ಇಷ್ಟು;
ಶಶಾಂಕ್ ದಿನಕ್ಕೆ ಕನಿಷ್ಠ 13 -14 ತಾಸು ಕೆಲಸ ಮಾಡುತ್ತಾ ಇದ್ದ ಮತ್ತು ದಿನಕ್ಕೆ ಸುಮಾರು ನಾಲ್ಕರಿಂದ ಐದು ಗಂಟೆ ನಿದ್ದೆ ಮಾಡ್ತಾ ಇದ್ದ. ತಿಂಗಳಿನಲ್ಲಿ ಸುಮಾರು 12 ರಿಂದ 15 ದಿನ ಕೆಲಸದ ನಿಮಿತ್ತ ದೇಶಿಯ ಮತ್ತು ಅಂತರ್ದೇಶೀಯ ಪ್ರಯಾಣ ಮಾಡ್ತಾ ಇದ್ದ.
ಶಶಾಂಕ್ನ ಪ್ರಕಾರ " ನಾನು ಬೆಳಗ್ಗೆ ತಿಂಡಿ ಬೆಂಗಳೂರಿನಲ್ಲಿ ತಿಂದರೆ , ಮಧ್ಯಾಹ್ನದ ಊಟ ಮುಂಬೈನಲ್ಲಿ ಮತ್ತು ರಾತ್ರಿಯ ಊಟ ಸಿಂಗಾಪುರ್ ನಲ್ಲಿ. ನಾನು ಒಂದೇ ಊರಿನಲ್ಲಿ ದಿನದ ಮೂರು ಹೊತ್ತು ಊಟ ಮಾಡೋದು ಬಲು ಅಪರೂಪ, ನಾನು ಕೆಲಸ ಮಾಡುವ ಕಂಪನಿಗೆ ನಾನು ದೊಡ್ಡ ಆಸ್ತಿ. ನನ್ನ ಕೆಳಗಡೆ ಸುಮಾರು 300 ಜನ ನನ್ನ ನಾಯಕತ್ವದಲ್ಲಿ ಕೆಲಸ ಮಾಡ್ತಾ ಇದ್ದಾರೆ. ಅಷ್ಟೊಂದು ಪ್ರತಿಭಾವಂತರನ್ನ ಸರಿಯಾಗಿ ಕೆಲಸಕ್ಕೆ ನಿಯೋಜಿಸಿ, ಎಲ್ಲ ಪ್ರಾಜೆಕ್ಟ್ಗಳು ಸರಿಯಾಗಿ ನಡೆಯಲು ನನ್ನ ಶ್ರಮ ತುಂಬಾ ಇದೆ ಮತ್ತು ಒಳ್ಳೆಯ ಸಂಬಳ ತೆಗೆದುಕೊಳ್ಳುತ್ತಿರುವ ಯಶಸ್ವಿ ಲೀಡರ್ ನಾನು ಅಂದ"
ಡಾ।। ಮಾಲತಿಯವರು ಶಶಾಂಕ್ ಗೆ " ದಿನಾ ಕನಿಷ್ಠ 7 ಗಂಟೆ ನಿದ್ರೆ ಮಾಡಿ, ಕೆಲಸದ ಅವಧಿ ಯನ್ನು ಕಡಿಮೆ ಮಾಡಿ, ಆರೋಗ್ಯಕರವಾದ ಆಹಾರ ತಿನ್ನಿ, ಜಂಕ್ ಆಹಾರವನ್ನು ಆದಷ್ಟು ಕಡಿಮೆ ಮಾಡಿ ಮತ್ತು ರಕ್ತದೊತ್ತಡಕ್ಕೆ ಗುಳಿಗೆ ತೆಗೆದುಕೊಳ್ಳ ಬೇಕಾಗುತ್ತೆ ಎಂದು ಹೇಳಿದರು ಅದಕ್ಕೆ ಶಶಾಂಕ್ ಹೇಳಿದ್ದು ಡಾ।। ನಾನು ಪ್ರತಿ ದಿನ ಎಲ್ಲೇ ಇದ್ದರು ಮುಕ್ಕಾಲು ಗಂಟೆ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತೆನೆ ಮತ್ತು ನನ್ನ ತೂಕ ನಾರ್ಮಲ್ ಆಗಿದೆ ಮತ್ತು ಮನೆಯಲ್ಲಿ ನನ್ನ ರಕ್ತದೊತ್ತಡ ಕಡಿಮೆ ಆಗುತ್ತದೆ ಆದ್ದರಿಂದ ನನಗೆ ಮಾತ್ರೆಯ ಅವಶ್ಯಕತೆ ಇಲ್ಲ ಮತ್ತು ಮಾತ್ರೆಗಳು ಅಂದರೆ ನನಗೆ ಆಗಲ್ಲ, ಅದು ಏನಿದ್ದರೂ ವಯಸ್ಸಾದ ಮತ್ತು ಕೈಲಾಗದವರು ತೆಗೆದುಕೊಳ್ಳುವುದು ಎಂದ.
ಅಂದು ಬಹಳ ರೋಗಿಗಳು ತುಂಬಿದ್ದ ದಿನ, ಒಂದು ಫೋನ್ ಕರೆ ಬಂತು "ಶಶಾಂಕ್ ಗೆ ತುಂಬಾ ತಲೆನೋವು ಮತ್ತು ವಾಂತಿಯಾಗ್ತಾ ಇದೆ, ಮಾತನಾಡುವುದಕ್ಕೂ ಆಗ್ತಾ ಇಲ್ಲ. ಅವನ ಬಲಗೈ ಮತ್ತು ಬಲಗಾಲು ಅಲುಗಾಡಿಸಲು ಸಹ ಆಗ್ತಾ ಇಲ್ಲ ಎಂದು"
ಶಶಾಂಕ್ ನನ್ನು ತುರ್ತು ಚಿಕಿತ್ಸಾಘಟಕಕ್ಕೆ ಕರೆದುಕೊಂಡು ಬರಲು ಹೇಳಿದೆ, ಅಲ್ಲಿ ಅವನನ್ನು ನೋಡಿದ ಬಳಿಕ ಶಶಾಂಕ್ ನೆ ಎಂದು ಖಾತ್ರಿಯಾಯಿತು. ಅವನನ್ನು ನಾನು ನೋಡಿದ್ದು ಮೂರು ವರ್ಷದ ಹಿಂದೆ.
ಕಂಪ್ಯೂಟೆಡ್ ಟೊಮೊಗ್ರಫಿ ಸ್ಕ್ಯಾನ್ (ಸಿ ಟಿ ಸ್ಕ್ಯಾನ್)ನಲ್ಲಿ ಅವನ ಮೆದುಳಿನ ಎಡ ಬಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಮತ್ತು ಅವನ ರಕ್ತದೊತ್ತಡ 220/140 mmHg.
ರಕ್ತಸ್ರಾವ ಹೆಚ್ಚಿದ್ದ ಕಾರಣ ಅವನ್ನು ತುರ್ತು ಆಪರೇಷನ್ ನ ಅವಶ್ಯಕತೆ ಇದ್ದಿದ್ದರಿಂದ ಅವನನ್ನು ಆಪರೇಷನ್ ಥೀಯೇಟರ್ ಗೆ ಶಿಫ್ಟ್ ಮಾಡಿ ಅವನಿಗೆ ಆಪರೇಷನ್ ಮಾಡಲಾಯ್ತು. ಅಂದೇ ಅವನ ನ್ನು ವೆಂಟಿಲೇಟರ್ ಇರುವ ICU ಶಿಫ್ಟ್ ಮಾಡಲಾಯ್ತು ಅಂದು ಅವನ ಬಾಸ್ ಬಂದು " ಶಶಾಂಕ್ ಗೆ ಒಳ್ಳೆಯ ಚಿಕಿತ್ಸೆ ಕೊಡಿ ಏಕೆಂದರೆ ಅವನು ನಮ್ಮ ನಕ್ಷತ್ರ ಅಂದರು.
ಎರಡನೆಯ ದಿನ ಶಶಾಂಕ್ ನನ್ನು ನೋಡಲು ಅವನ ಬಹಳಷ್ಟು ಸಹದ್ಯೋಗಿಗಳು ಮತ್ತು ಮ್ಯಾನೇಜ್ಮೆಂಟ್ ನ ಹಿರಿಯ ಸಹದ್ಯೋಗಿಗಳು ಬಂದರು, ಅವರೆಲ್ಲರೂ ಆರ್ಥಿಕ ಸಹಾಯ ಮಾಡಿದರು, ಮಾರನೆಯ ದಿನ ಕೂಡ ಅವನನ್ನು ನೋಡಲು ತುಂಬಾ ಜನ ಬಂದರು. ಅವನ ರೂಮಿನಲ್ಲಿ ಹೂವಿನ ಬೊಕ್ಕೆಗಳು ತುಂಬಿ ಹೋಗಿತ್ತು. ನಾಲ್ಕನೆಯ ದಿನ ಅವನ ತುಂಬಾ ಹತ್ತಿರದ ಸ್ನೇಹಿತರು ಬಂದು ಕೈಲಾದ ಸಹಾಯ ಮಾಡಿದರು.
ಐದನೆಯ ದಿನ ಅವನನ್ನು ನೋಡಲು ಅವನ ಕಂಪನಿಯಿಂದ ಯಾರೂ ಬರಲಿಲ್ಲ, ಅವನ ಸ್ನೇಹಿತರೂ ಯಾರೂ ಕೂಡ ಬರಲಿಲ್ಲ.
ಶಶಾಂಕ್ ನು ನಿಧಾನಕ್ಕೆ ಚೇತರಿಸಿಕೊಳ್ಳುತ್ತ ಇದ್ದ, ಅವನನ್ನು 10 ದಿನಗಳ ಬಳಿಕ ಬಿಡುಗಡೆ ಮಾಡಲಾಯ್ತು. ಬಿಡುಗಡೆಯ ಸಮಯದಲ್ಲಿ ಅವನಿಗೆ ಮಾತನಾಡಲು, ನಿಂತುಕೊಳ್ಳಲು, ನಡೆದಾಡಲು ಆಗ್ತಾ ಇರಲಿಲ್ಲ. ಮಾತು ಸಹ ಬರುತ್ತಿರಲಿಲ್ಲ. ಅವನ ಬಲಗೈ ಮತ್ತು ಬಲಗಾಲು ಇನ್ನು ಸ್ವಾಧೀನಕ್ಕೆ ಬಂದಿರಲಿಲ್ಲ. ಅವನಿಗೆ ತನ್ನ ಕಾರ್ಯಕ್ಕೆ ತನ್ನ ಪತ್ನಿಯ ಸಹಾಯ ಬೇಕಿತ್ತು. ಅವರಿಗೆ ಒಂದು ತಿಂಗಳ ಬಳಿಕ ರಿವ್ಯೂ ಗೆ ಬರಲು ಹೇಳಿದೆ.
ಒಂದು ತಿಂಗಳ ಬಳಿಕ ಅವರು ನನ್ನನ್ನು ಹೊರ ರೋಗಿ ಚಿಕಿತ್ಸಾ ಕೇಂದ್ರದಲ್ಲಿ ಭೇಟಿಯಾದರು. ದೀಪ ಹೇಳಿದ್ದು ಶಶಾಂಕ್ ನ ಜಾಗಕ್ಕೆ ಅವನ ಕಂಪನಿ ಬೇರೆಯವರನ್ನು ನೇಮಕ ಮಾಡಿಕೊಂಡಿತ್ತು, ಮತ್ತೆ ಶಶಾಂಕ್ನನ್ನ ಅವನ ಕಂಪನಿ ಅವನು ಹುಷಾರಾದ ಬಳಿಕ ವಾಪಾಸ್ ತೆಗೆದುಕೊಳ್ಳುವುದು ಕೂಡ ಕಷ್ಟ ಎಂದು ತೋರುತ್ತ ಇತ್ತು ಯಾಕೆಂದರೆ ಅವನ ಪರಿಸ್ಥಿತಿ ಈಗ ( ನರಮಂಡಲದ ಸ್ಥಿತಿ) ಭಿನ್ನವಾಗಿತ್ತು. ಆಗಲೇ ಶಶಾಂಕ್ ನ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು.
ಶಶಾಂಕ್ನ ಚೇತರಿಕೆಯ ಹಾದಿಯಲ್ಲಿದಾಗಲೇ, ದೀಪಾ ತನ್ನ ಸಂಸಾರಕೊಸ್ಕರ ಕೆಲಸಕ್ಕೆ ಸೇರಿಕೊಳ್ಳುವ ಅನಿವಾರ್ಯತೆ ಇಂದ ಕೆಲಸಕ್ಕೆ ಸೇರಿದ್ದಳು, ಅವಳಿಗೆ ಬರುವ ಸಂಬಳದಲ್ಲಿ ಮನೆಯನ್ನು ನಿಭಾಯಿಸಬಹುದಿತ್ತು ಅಷ್ಟೇ. ಅವಳು ತನ್ನ ಕೆಲಸದ ಮಧ್ಯೆ ಶಶಾಂಕ್ನನ್ನ ಮತ್ತು ಎರಡು ಮಕ್ಕಳನ್ನು ನಿಭಾಯಿಸಬೇಕಿತ್ತು.
ಅವನ ಕಂಪನಿಯ ಹಿತೈಷಿಗಳು ಮತ್ತು ಸ್ನೇಹಿತರು ಮತ್ತೆಲ್ಲೂ ಕಾಣಸಿಗಳೇ ಇಲ್ಲ
ಶಶಾಂಕ್ ನನ್ನು ನೋಡಿ ಕಲಿಯ ಬೇಕಾದ ಪಾಠಗಳು:
೧. ಕೆಲಸ ಮತ್ತು ವೈಯ್ಯಕ್ತಿಕ ಜೀವ ಬೇರೆಯಾಗಿರಲಿ
೨. ಹೆಚ್ಚಿನ ಕೆಲಸ ಮತ್ತು ಕಡಿಮೆ ನಿದ್ರೆ ಮತ್ತು ಒತ್ತಡದ ಬದುಕು ಎಂದಿಗೂ ಅಪಾಯ
೩. ರಕ್ತದೊತ್ತಡಕ್ಕೆ ಚಿಕಿತ್ಸೆ ಅಗತ್ಯ .
೪. ನಿಯಮಿತವಾಗಿ ರಕ್ತದೊತ್ತಡ, ಮಧುಮೇಹ ಮತ್ತು ಕೊಬ್ಬಿನ ಪರೀಕ್ಷೆಗಳು ನೀವು ಜಿಮ್ ಗೆ ಹೋದರು ಕೂಡ ಅವಶ್ಯಕ

No comments:
Post a Comment