Sunday, September 6, 2015




ಕಲಿಯುಗದಲ್ಲೂ ಇಚ್ಛಾ ಮರಣಿಗಳು ಇದ್ದಾರೆಯೇ ?

ಮಗೆ ಕೆಲವು ವರ್ಷಗಳ ಹಿಂದೆ  ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ  ವಾಯು ಮಾಲಿನ್ಯ ಮಂಡಳಿಯ ಪ್ರಕಟಣೆ ನೆನಪಿರಬಹುದು   "ವಾಯುಮಾಲಿನ್ಯದಿಂದ ನೀವು ಇಂಚಿಂಚಾಗಿ ಮರಣ ಹೊಂದುವಿರಿ" ಎಂಬುದೇ ಅದು . 

ಇಚ್ಛಾ ಮರಣಿ ಭೀಷ್ಮರ ಹಾಗೆ, ಈ ಕಾಲದಲ್ಲೂ ಇಚ್ಛಾ ಮರಣ ಸಾದ್ಯವೇ? ಸದ್ಯ ಚರ್ಚೆಯಲ್ಲಿರುವ ಸಲ್ಲೆಖನ ವ್ರತ ಕೂಡ ಇಚ್ಛಾ ಮರಣದ ಒಂದು ಮಾದರಿ, ಬೇಡದ ಜೀವನ ಮತ್ತು ದೇಹವನ್ನು ತ್ಯಜಿಸುವ ಒಂದು ಕಠಿಣ ಮಾರ್ಗ.  
ಹಾಗಿದ್ದರೆ ಆತ್ಮಹತ್ಯೆ ಕೂಡ ಅಪರಾಧವಾಗುವುದಿಲ್ಲವೇ? ಆತ್ಮಹತ್ಯೆ ಈಗ ಕೂಡ ಅಪರಾಧ. ಆದರೇ ??

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಅಪ್ಪಿ-ತಪ್ಪಿ ಬದುಕಿದರೆ ಅವನಿಗೆ ಬದುಕುವ ಶಿಕ್ಷೆಯ ಜೊತೆ ನ್ಯಾಯಾಲಯದ ಶಿಕ್ಷೆ, ಸತ್ತರೆ ಅವನ ನಂಬಿದವರಿಗೆ ಶಿಕ್ಷೆ. ಏನೇ ಆದರೂ ಶಿಕ್ಷೆಯಂತು ತಪ್ಪದು . ಒಂದು ಅಫರಾದಕ್ಕೆ ಎರಡು ಶಿಕ್ಷೆ ಭಾರತದ ಸಂವಿದಾನದಲ್ಲಿ ಇಲ್ಲ, ಆದರೆ ಬದುಕುವುದೇ ದುಸ್ತರವಾದಾಗ ಅದು ಶಿಕ್ಷೆಯಲ್ಲವೇ? ಮತ್ತೆ ಇನ್ನೊಂದು  ಶಿಕ್ಷೆ ಬೇಕೇ ? ಉತ್ತರ ತಿಳಿದಿಲ್ಲ .

 ಮಾನ್ಯ ನ್ಯಾಯಾಲಯವು ಸಲ್ಲೆಖನ ವ್ರತ ಆಚರಿಸಲು ಬೇಕಾಗಿರುವ ಅನುಮತಿಯ ಮಾನದಂಡಗಳನ್ನು ಪರಿಶೀಲಿಸಿ, ನಮ್ಮ ಸಂವಿಧಾನದಲ್ಲಿ ಅವನ್ನು ಕೆಲವನ್ನು ಅಳವಡಿಸಲು ಅನುಮತಿ ನೀಡಿದರೆ ದಶಕಗಳ ಜೀವ ಹೋರಾಟ ನಡೆಸಿ, ಕೆಲವು ದಿನಗಳ ಹಿಂದೆ ಜಯಶಾಲಿಯಾದ ಸಹೋದರಿ ಅರುಣಾ ಶಾನಬಾಗ ರೀತಿ ನೊಂದ ದೇಹಗಳಿಗೆ ಮುಕ್ತಿ ದೊರೆಯಬಹುದು.

ಮತ್ತೆ ಕೆಲವರಿದ್ದಾರೆ, ಅವರು ಇಚ್ಛಾ ಮರಣಿಗಳು, ಮದುಮೆಹವಿದ್ದರೂ ಸಕ್ಕರೆರಹಿತ ಕಾಫಿ ಕುಡಿಯದ, ಕೆಟ್ಟ ಕೊಬ್ಬಿನ ಅಂಶ ರಕ್ತದಲ್ಲಿ ವಿಪರೀತವಿದ್ದರೂ ಊರಿನ ಕಡೆಯ ನಾಟಿ ಮರಿಯ ಮಾಂಸವೇ ವಿಶೇಷ ಅಡುಗೆಗೆ ಬೇಕು ಎನ್ನುವವರು ಕೂಡ ಮೇಲಿನ ಗುಂಪಿಗೆ ಸೇರುವುದಿಲ್ಲವೇ?


ಮೊನ್ನೆ ನನ್ನ ಪರಿಚಯದೊಬ್ಬರ ಜೊತೆ ಮಾತುಕಥೆಯಾಡುವಾಗ, ತಮ್ಮ ಉದರ ಶೂಲೆಯ ಬಗ್ಗೆ ಹೇಳುತ್ತಿದರು, ಸ್ವಲ್ಪ ಖಾರ ವಾಗಿರುವ ಊಟ ತಿಂದರೆ ವಾಯು ಪ್ರಕೋಪ ಜಾಸ್ತಿಯಾಗುತ್ತೆ ಎಂದು, ದೇಹ ದಂಡಿಸದ ಎಲ್ಲರಿಗೂ ಕೆಲವೊಮ್ಮೆ ಹಾಗಾಗುವುದು ಸಹಜ ತಾನೇ, ! ಅವರಿಗೆ ವ್ಯಾಯಾಮ ಮಾಡಲು ಹೇಳುವ ಮನಸ್ಸಿತ್ತಾದರು ನೀವು ವ್ಯಾಯಾಮ ಮಾಡುತ್ತಿರ ಎಂದು ಕೇಳಿದರೆ ಎಲ್ಲಿ ನನ್ನ ಮಾನ ಹೋಗುವುದೋ ಎಂದುಕೊಂಡು ಸುಮ್ಮನಾದೆ . ಮಾತು ಮುಂದುವರೆಯುತ್ತಾ ಉಭಯ ಕುಶಲೋಪರಿಗಳ ನಡುವೆ ನಿಮ್ಮ ಮನೆಯಲ್ಲಿ ತಿಂಡಿ ಏನು ಎಂದು ಕೇಳಿದೆ? ಅವರು ಇಂದು ನಮ್ಮ ಮನೆಯಲ್ಲಿ ಆಲೂ ಪರೋಟ ಎಂದರು, ಈಗ ಹೇಳಿ ಮೇಲಿನ ನನ್ನ ಸ್ನೇಹಿತ ಇಚ್ಛಾ ಮರಣಿಯೇ ಅಥವಾ ಅಲ್ಲವೇ ಎಂದು . ಉದರ ಶೂಲೆಯ ಬಗ್ಗೆ ಬೆಂಗಳೂರಿನ ಪ್ರಸಿದ್ದ ಆಸ್ಪತ್ರೆಗೆ ಹೋಗಿ ಎಲ್ಲ ಪರೀಕ್ಷೆಗೆ ಸಾವಿರಾರು ರೂಪಾಯಿಗಳನ್ನು ಸುರಿದ ಬಳಿಕ, ತಜ್ಞರು ಹೇಳಿದ್ದು " Cut down spicy food from your diet" ಅಲ್ಲ ಸ್ವಾಮಿ ಆಲುಗೆಡ್ದೆ ವಾಯು ಅಂತ ಹಿರಿಯರು ಹೇಳಿದ್ದು ಸುಳ್ಳೇ? ಇವರು ಇಚ್ಛೆ ಪಟ್ಟು ಪಟ್ಟು ಮರಣಿಗಳಾಗುತಿಲ್ಲವೆ ? ವಾರಕೊಮ್ಮೆ KFC, McD  ಕೂಡ ಗುಂಪಿಗೆ ಸೇರುತ್ತದೆಯಲ್ಲವೋ!!!






No comments:

Post a Comment

ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...