ಬಿರಿಯಾನಿ ಪ್ಯಾರಡೈಸ್
ಗೆಳೆಯ ನವೀನನ ಜೊತೆ ಬೈಕ್ನಲ್ಲಿ ಮಂಡ್ಯ ಸುತ್ತುತ್ತಿದ್ದಾಗ, ಬನ್ನೂರು ರಸ್ತೆಯಲ್ಲಿ ಇರುವ ಹೋಟೆಲ್ ನಲ್ಲಿ ಬಿರಿಯಾನಿ ವಾಸನೆ ಘಮ್ ಎಂದು ಬರುತಿತ್ತು. ಊಟದ ಸಮಯವಾಗಿರದ ಕಾರಣ ಅದನ್ನು ತಿನ್ನುವ ಯೋಗ ಕೂಡಿಬರಲಿಲ್ಲ. ಇದಕಿಂತ ದುಖ್ಹಕರವಾದ ವಿಷಯ ನಮಗೆ ಬೇರೇನೂ ಇರಲಿಲ್ಲ. ಈಗ ಕೂಡ ಇಲ್ಲ
(ಹಿಗಿದ್ದಿರಬಹುದೇ ಬಿರಿಯಾನಿ ಆ ಹೋಟೆಲ್ನಲ್ಲಿ ?)
ಜವಾಹರ್ ನವೋದಯ ವಿದ್ಯಾಲಯದಲ್ಲಿ ಓದುತ್ತಿದ್ದಾಗ, ನಮಗೆಲ್ಲಾ ಎನ್ಕೌಂಟರ್ ಸ್ಪೆಷಲಿಸ್ಟ್ ಆದ ಶ್ಯಾಮಲಾ ಮೇಡಂದೇ ಹೆದರಿಕೆ, ಎಲ್ಲಿ ಗಲಾಟೆ ಮಾಡುತಿದ್ದ ನಮ್ಮನ್ನು ಎತ್ತಾಕೊಂಡು ಹೋಗಿ ಚೇಂಬರ್ ನಲ್ಲಿ ಎನ್ಕೌಂಟರ್ ಮಾಡಿ ಬಿಡುತ್ತಾರೋ ಎಂಬ ಭಯವಿತ್ತು . ಕೈ ಬೆರಳನ್ನು ತಿರುಗಿಸಿ, ಕಪಾಳ ಮೋಕ್ಷ ಮಾಡುತಿದ್ದ ಪರಿಗೆ ನಮ್ಮ ಶಾಲೆಯಲ್ಲಿದ್ದ ಎಲ್ಲಾ ರೌಡಿಟೈಪಿನ ವಿದ್ಯಾರ್ಥಿಗಳು ತಮ್ಮ ಕಸುಬು ಬಿಟ್ಟು ಓದಿನ ಕಡೆಗೆ ಗಮನ ನೀಡುತ್ತಿದ್ದರು. ಊಟದ ಸಮಯದಲ್ಲಿ ಓಂ ಸಹನಾ ಭವತ್ತು ಪ್ರಾರ್ಥನೆ ಮಾಡದೆ ಊಟ ಮಾಡುವಂತಿರಲಿಲ್ಲ. ಊಟದ ಸಮಯದಲ್ಲಿ "ಬದುಕುವುದಿಕ್ಕೆ ತಿನ್ನಬೇಕು ; ತಿನ್ನುವುದಕೊಸ್ಕರ ಬದುಕುವುದಲ್ಲ " ಎಂಬ ನುಡಿಮುತ್ತುಗಳು ನಮ್ಮ ಕಿವಿಗೆ ಅಪ್ಪಳಿಸುತ್ತಿದ್ದವು. ಅಲ್ಲ ಮೇಡಂ ತಿನುವುದನ್ನು ಬಿಟ್ಟು ಈ ಜೀವನದಲ್ಲಿ ಮಾಡುವುದಕ್ಕೆ ಏನಿದೆ? ಎಂದು ಕೇಳಬೇಕು ಎಂದೆನಿಸಿದರೂ ಎನ್ಕೌಂಟರ್ ಮಾಡಿಸಿಕೊಳ್ಳಲು ದೈರ್ಯವಿಲ್ಲದೆ ಸುಮ್ಮನಿರಬೇಕಾಗಿತ್ತು.
ತಿನ್ನುವುದಕೊಸ್ಕರ ತಾನೇ ನಾವು ಓದುವುದು, ಇಂದಿನ ರಾಜಕಾರಣಿಗಳು ದುಡ್ಡು ಮಾಡುವುದು ಏಕಾಗಿ! ತನ್ನ ಮಕ್ಕಳು ಮೊಮ್ಮಕಳು ಕೂತು ತಿಂದರೂ ಮುಗಿಯದಿರಲಿ ಎಂದಲ್ಲವೇ :( ಹಲವು ದಿನಗಳ ಬಳಿಕ ತಮ್ಮ ಸ್ನೇಹಿತ ಮಂಡಳಿ ಸಿಕ್ಕರೆ ತಾವು ಪಾರ್ಟಿ ಮಾಡುವಿರೋ ಇಲ್ಲ ತಾವು ಇಲ್ಲಿವರೆಗೆ ದುಡಿದ ಹಣ ಎಣಿಸುವಿರೋ ? ಮನುಷ್ಯನ ನಾಲಿಗೆ ಚಪಲಕ್ಕೆ ಬಲಿಯಾಗದಿರುವ ಪ್ರಾಣಿ ಯಾವುದುದದಾರು ಇರಬಹುದೇ .
ನಮ್ಮ ಕಡೆ ಮದುವೆಗೆ ಅಲ್ಲದಿದ್ದರೂ ಬೀಗರ ಔತಣಕೂಟದಲ್ಲಿ ಬ್ಯಾಟಿಂಗ್ ಮಾಡುವುದು ಮೆಚ್ಚಿನ ಸಂಗತಿ. ಅಷ್ಟೇಕೆ ನಿಮ್ಮ ಮನೆಯಲ್ಲಿ ವಿಶೇಷ ತರಕಾರಿ ತಂದರೆ ಚೂಟಿಯಾಗುವ ಸೊಸೆ-ಮಕ್ಕಳನ್ನು ನೋಡಿಲ್ಲವೇನು? ಇದೆ ಅಲ್ಲವೇ ತಿನ್ನುವ ಮಹಿಮೆ, ಬೇಡದ ನೆಂಟರನ್ನು ಓಡಿಸಲು ಇದೆ ಅಡಿಗೆ ತಾನೇ ಉಪಯೋಗ ಬರುವುದು. ನನ್ನ ತಮ್ಮನಿಗೆ ಚುರುಕು ಮುಟ್ಟಿಸಲು ಉಪ್ಪಿಟಿಗಿಂತ ಬೇರೆ ತಿಂಡಿಯಿಲ್ಲ .
ಅರ್ಧ ಗಂಟೆಯಲ್ಲಿ ದಿಡೀರ್ ಬಿರಿಯಾನಿ ಮಾಡುವೆ ಎಂದು ಜಂಬ ಕೊಚ್ಚಿಕೊಂಡು ಬಿರಿಯಾನಿ ಮಾಡಲು ಹೋಗಿ ಖಿಚಡಿ ಮಾಡಿದ ತಂಗಿಗೆ ಏನಾದರು ಹೇಳಲಾದಿತೆ?
ವಾತಾಪಿ ಜೀರ್ಣೋಭವ !!!

No comments:
Post a Comment