ಸ್ನೇಹಿತರೇ ,
ಎಂದೂ ಸರಿಯಾಗಿ ಬ್ಲಾಗ್ ಬರೆಯದ ನಾನು, ಇಂದು ಬರೆಯುತ್ತಿರುವುದಕ್ಕೆ ಕಾರಣ ನೀವು ಮತ್ತು ನಾನು ಉಪಯೋಗಿಸುವ ಬಹುತೇಕ ವಸ್ತುಗಳನ್ನು ತಯಾರಿಸುವ ಸಂಸ್ಥೆ ಮಾಡಿದ ಗ್ರಾಹಕ ವಂಚನೆ.
ಹೌದು. ನಿಮ್ಮ ಊಹೆ ಸರಿ. ನಾನು ಸಹ ಮೋಸ ಹೋಗಿದ್ದು ಹಿಂದೂಸ್ತಾನ್ ಉನಿಲೆವೆರ್ ಲಿಮಿಟೆಡ್ ಸಂಸ್ಥೆಯಿಂದ :(
ಅಂತರ್ಜಲ ಮಟ್ಟ ಎಲ್ಲೆಲ್ಲು ಕುಸಿಯುತ್ತಿರುವ ಈ ದಿನಗಳಲ್ಲಿ, ಅರೆ ಮಲೆನಾಡದ ನನ್ನ ಊರಿನಲ್ಲೂ ಅಂತರ್ಜಲ ಮಟ್ಟ ಕುಸಿದೆದೆ. ೧೦೦೦ ಅಡಿ ಭೂಮಿ ಕೋರೆದರು ನೀರು ಸಿಗುತ್ತಿಲ್ಲ. ಕುಡಿಯುವ ನೀರು ಉಪ್ಪಾಗಿ, ಹಲ್ಲು ಹಳದಿಯಾಗಿ , ಕಿಡ್ನಿ ಯಲ್ಲಿ ಕಲ್ಲುಗಳು ಆದರೂ ನಮ್ಮ ಸರ್ಕಾರ, ಜನ ಪ್ರತಿನಿಧಿಗಳು ಕಿವಿ ಮತ್ತು ಕಣ್ಣು ತೆರೆಯಲೆ ಇಲ್ಲ.
ಅಂತರ್ಜಲ ಮರು ಪೂರಣದಂಥ ಚಟುವಟಿಕೆಗಳು ನಡೆಯಲೇ ಇಲ್ಲ. ರಾಜಕೀಯವೇ ಉಸಿರಾಗಿರುವ ನನ್ನ ಜಿಲ್ಲೇಗೆ ರಾಜಕೀಯವೇ ಮುಳುವಾಗುವುದೇ ? ಗೊತ್ತಿಲ್ಲ .
ಕುಡಿಯುವ ನೀರಿಗೋಸ್ಕರ ಒಳ್ಳೆಯ ಸಂಸ್ಥೆಯ RO ಫಿಲ್ಟರ್ ಹುಡುಕಾಟ ಶುರುಮಾಡಿದೆ. ಹಾವನ್ನು ಹೊಡೆಯುವದಕ್ಕೆ ಇಂಟರ್ನೆಟ್ನಲ್ಲಿ ಕೋಲು ಹುಡುಕುವ ವರ್ಗಕ್ಕೆ ಸೇರಿದ ನಾನು, ಇಂಟರ್ನೆಟ್ ನಲ್ಲಿ ಹುಡುಕಾಟ ಮಾಡಿ HUL ಸಂಸ್ಥೆಯ ಪ್ಯುರಿಟ್ ಮಾರ್ವೆಲ್ಲ RO (Pureit Marvella RO)ಫಿಲ್ಟರ್ ಅನ್ನು ಖರೀದಿಸಿದೆ. ಸರಿ ಸುಮಾರು ೧೫೦೦೦/- ರೂಪಾಯಿಗೆ ಖರೀದಿಸಿದೆ.
ಖರೀದಿಸಿದ ಕೆಲವು ದಿನಗಳಲ್ಲೇ, ಫಿಲ್ಟರ್ನಲ್ಲಿ ಹಲವು ತೊಂದರೆಗಳು ಕಾಣಿಸಿಕೊಂಡವು. ಪ್ಯುರಿಟ್ ಸಂಸ್ಥೆಯ ಕಾಲ್ ಸೆಂಟರ್ ಗೆ ಕರೆ ಮಾಡುವುದು ಶುರುವಾಯಿತು.
ಮೊದಲ ತಿಂಗಳಿನಲ್ಲಿ ಫಿಲ್ಟರ್ ಓಡಿ ಓಡಿ ನಿಲ್ಲುತ್ತಿತ್ತು, ನೀರು ಮಾತ್ರ ಹೊರ ಬರುತ್ತಿರಲಿಲ್ಲ. ಸಂಸ್ಥೆಯ ಇಂಜಿನಿಯರ್ ಬಂದು Air locking ಸಮಸ್ಯೆ ಎಂದು ಹೇಳಿ ಸರಿ ಮಾಡಿ ಹೋದರು. ಸರಿ ನಮ್ಮ ಹಾಗೆ ಮಷೀನ್ಗು ಕೂಡ ಅಸಿಡಿಟಿ ಎಂದು ಸ್ನೇಹಿತರು - ಮನೆಯವರೆಲ್ಲ ನಕ್ಕರು.
ಮೇಲಿನ ಸಮಸ್ಯೆ ಕಳೆದು ೨ ತಿಂಗಳು ಆಗಿರಲಿಲ್ಲ, ಮತ್ತೊಂದು ಹೊಸ ಸಮಸ್ಯೆ ಶುರುವಾಯಿತು. ಖರೀದಿಸಿದ ಹೊಸತರಲ್ಲಿ 50 - 60 ನಿಮಿಷದಲ್ಲಿ 8 ಲೀಟರ್ ನೀರು ಶುದ್ದವಾಗುತ್ತಿತ್ತು. ಈಗ 5 ಗಂಟೆ ಮೋಟಾರ್ ಓಡಿದರೂ ೧ ಲೀಟರ್ ನೀರು ಶುದ್ದವಾಗುತ್ತಿರಲಿಲ್ಲ,
ಮೆಚ್ಚಿ ಮದುವೆಯಾದವಳು ಇವಳೇನಾ ಅನ್ನಿಸುವ ಹಾಗೇ, ನನಗೆ ಅನ್ನಿಸತೊಡಗಿತ್ತು.ಸರಿ ಕಟ್ಟಿ ಕೊಂಡವಳನ್ನು ಬಿಡಲಾದಿತೆ ? ;) ಮತ್ತೆ ಕಾಲ್ ಸೆಂಟರ್ ಗೆ ಕರೆ ಅನಿವಾರ್ಯವಾಯಿತು. ಒಬ್ಬ ಸಿಬ್ಬಂದಿ ಬಂದು ಮೆಮ್ಬ್ರನೆ (Membrane) ಎಲ್ಲ ಹಾಳಾಗಿದೆ ಎಂದು ನೋಡಿಕೊಂಡು ಹೋದವರು ಮರಳಿ ಬಂದಿದ್ದು 7 ದಿನಗಳ ಬಳಿಕ. ಅಲ್ಲಿಯ ತನಕ ನಮಗೆ ಉಪ್ಪು ಮಿಶ್ರಿತ ನೀರೆ ಗತಿಯಾಯಿತು. ೭ ದಿನಗಳ ಬಳಿಕ ಬಂದ ಸಿಬ್ಬಂದಿ, ಫಿಲ್ಟರ್ ಯಂತ್ರವನ್ನು ಓಡುವ ಹಾಗೆ ಮಾಡಿದರು.
ಈ ಸಮಯದಲ್ಲಿ ಆಗಲೇ ನಮ್ಮ ಮನೆಯಲ್ಲಿ ನನ್ನ ಆಯ್ಕೆಯ ಬಗ್ಗೆ ಪ್ರಶ್ನೆಗಳೆದಿದ್ದವು. ಹೇಮಮಾಲಿನಿಯ ಜಾಹಿರಾತು ನೋಡಿದ್ದ ನನ್ನ ಸುಶಿಕ್ಷಿತ ಸಹೋದರ ನನ್ನ ಆಯ್ಕೆಯ ಬಗ್ಗೆ ಅಪಸ್ವರವೇತ್ತಿದ್ದ. ಯಾವ ವಿಷಯದಲ್ಲೂ ಪ್ಯುರಿಟ್ ಗೆ ಕೆಂಟ್ (KENT RO ) ಕಡಿಮೆಯಿಲ್ಲ ಎಂದು ವಾದಿಸಿದ.
ಬೀಳುವವನಿಗೊಂದು ಗುದ್ದು ಎನ್ನುವಂತೆ, ಮತ್ತೆ ಪ್ಯುರಿಟ್ ಕೈ ಕೊಟ್ಟಿತು, ಹೌದು ಮತ್ತೆ ಕೈ ಕೊಟ್ಟಿತು. ಫಿಲ್ಟರ್ ನೀರು ಕುಡಿದರೆ ನೀರೆಲ್ಲ ಉಪ್ಪುಪ್ಪು. ಪ್ಯುರಿಟ್ ನೀರನ್ನು ಹಾಗೆ ಹೊರಗೆ ಕೊಡುತಿತ್ತು. ಮತ್ತೆ ಯಥಾಪ್ರಕಾರ complaint ನ್ನು ರಿಜಿಸ್ಟರ್ ಮಾಡಿಸಿದ ನಂತರ ನೆಂಟರ ಆಗಮನವಾಯಿತು. ಹೌದು ಪ್ಯುರಿಟ್ ಸಿಬ್ಬಂದಿ ನೆಂಟರಾಗಿದ್ದರು ನಮ್ಮ ಪ್ಯುರಿಟ್ ಯಂತ್ರಕ್ಕೆ.
ಈ ಸಲ FOT ಎನ್ನುವ ಬಿಡಿ ಭಾಗ ಕೆಟ್ಟು ಹೋಗಿದೆ ಎನ್ನುವ ಉತ್ತರ ಬಂತು. ಖರೀದಿಸಿದ 8 ತಿಂಗಳಲ್ಲಿ ಎಷ್ಟು ಭಾಗಗಳು ಹಾಳಾಗಬಹುದು ? ಹಿಂದೂಸ್ತಾನ್ ಉನಿಲೆವೆರ್ ಲಿಮಿಟೆಡ್ ಬಹುರಾಷ್ಟ್ರೀಯ ಸಂಸ್ಥೆಯ ಬಳಿಯಲ್ಲಿ ಇದಕ್ಕೆ ಉತ್ತರ ಸಿಗಲಿಲ್ಲ.
ಈಗಲೇ ಇಗೆ ಆದರೆ ಆದರೇ warranty ಮುಗಿದ ನಂತರ ಏನು ಕಥೆ ?
ಸಂಸ್ಥೆಗೆ ಮಾಡಿದ ಹಲವು ಮಿಂಚಂಚೆಗಳು, ಹಲವು ಕರೆಗಳು ಫಲ ಕೊಡಲಿಲ್ಲ. ನನ್ನ ಸಮಸ್ಯೆ ಕಗ್ಗಂಟಾಗಿಯೇ ಉಳಿಯಿತು.
ಈಗ ಉಳಿದಿರುವ ದಾರಿ ಗ್ರಾಹಕ ನ್ಯಾಯ ವೇದಿಕೆಗೆ ಹೋಗುವುದು. HUL ನವರು ಯಾವುದೇ ಸೇವೆಯ ಬಗ್ಗೆ ಲಿಖಿತ ಉತ್ತರ / ಸರ್ವಿಸ್ ರಿಪೋರ್ಟ್ ಕೊಡುವುದಿಲ್ಲ. ಹೌದು ನಿಮ್ಮ ಕಂಪ್ಲೈಂಟ್ ಬಗ್ಗೆ ಯಾವುದೇ ಮಾಹಿತಿ ನಿಮಗೆ ಕೊಡುವುದಿಲ್ಲ. ಎಲ್ಲ ಬಾಯಿ ಮಾತಿನ ವ್ಯವಹಾರ.
ಸ್ನೇಹಿತರೆ, ಇಂಟರ್ನೆಟ್ ನಲ್ಲಿರುವ ರಿವ್ಯೂ (Review) ಗಳನ್ನೇ ನೋಡಿ ನನ್ನ ತರಹ ತೊಂದರೆ ಪಡಬೇಡಿ. Water Filter ಅಳವಡಿಸಿ ಕೊಂಡವರ ಅಭಿಪ್ರಾಯ ಪಡೆಯಿರಿ. ಸಾಧ್ಯವಾದಷ್ಟು ಜನಗಳನ್ನು ಭೇಟಿ ಮಾಡಿ ನಂತರ ಯಾವುದು ಸೂಕ್ತವೋ ಅದನ್ನೇ ಖರೀದಿಸಿ. ಹೇಮಮಾಲಿನಿ ಅಥವಾ ಬಹುರಾಷ್ಟ್ರೀಯ ಸಂಸ್ಥೆಯ ಬಲೆಗೆ ಸುಲಭದ ತುತ್ತಾಗಬೇಡಿ.
No comments:
Post a Comment