ಕಳೆದ ವಾರ ನಾನು ಬರೆದಿದ್ದ ಲೇಖನಕ್ಕೆ ಬಂದ ಪ್ರಶಂಸೆಗಳ ನಂತರ ನನ್ನ ಪ್ರೀತಿಯ ಓದುಗರಿಗೆ ಮತ್ತೆ ಇನ್ನೊಂದು ಲೇಖನ ಬರೆಯುವ ಮನಸಾಯ್ತು. ಒಬ್ಬರಂತೂ ನನ್ನ ಪದಗಳಿಂದ ಎಷ್ಟು ಪ್ರಭಾವಿತರಾದರೆಂದರೆ ಅದನ್ನು ವಿವರಿಸಲು ಬಾರಿ ಕಷ್ಟ ಪಟ್ಟರು ! ಹೀಗೆ ಹಲವರ ಮನಸ್ಸು ಘಾಸಿ ಗೊಳಿಸಿದ್ದಕ್ಕೋ ಏನೋ ನನ್ನ ಗಾಡಿಗೆ ಮತ್ತೊಂದು ಗಾಡಿಗೆ ಡಿಕ್ಕಿಯೊಡೆದಿತ್ತು.
ಎದುರಿನ ಗಾಡಿಯಲ್ಲಿ ಹೋಗುತಿದ್ದದು ಒಬ್ಬ ಯುವತಿ, ಗಾಡಿಯ ಎರಡು ಕಡೆಯಲ್ಲೂ ಕಾಲು ಇಳಿಬಿಟ್ಟು ಬ್ರೆಕ್ ನ ಜೊತೆ ಜೊತೆಗೆ ಕಾಲು ಉಪಯೋಗಿಸುತ್ತಿದ್ದ ಯುವತಿ ಒನ್ ವೇ ರಸ್ತೆಯಲ್ಲಿ ಬಂದು ನನಗೆ ಡಿಕ್ಕಿ ಒಡೆದಿದ್ದಳು. ಆಕ್ಸಿಡೆಂಟ್ ನ ತೀವ್ರತೆಗೆ ಯುವತಿಯ ತಲೆಗೆ ಪೆಟ್ಟಾಗಿ ರಕ್ತ ಹರಿದಿತ್ತು. ಹತ್ತಿರದ ಆಸ್ಪತ್ರೆಗೆ ಸೇರಿಸಿದೆ.
ಸ್ವಲ್ಪ ಹೊತ್ತಿನ ಬಳಿಕ ಯುವತಿಯ ತಂದೆ ಮತ್ತು ತಾಯಿ ಬಂದು ತಮ್ಮ ಮುದ್ದಿನ ಮಗಳನ್ನು ನೋಡಿದ ಬಳಿಕ ಪಕ್ಕದಲ್ಲೇ ಇದ್ದ ನನ್ನನ್ನು ನೀವು ಯಾರು ? ಎಲ್ಲಿ ಅಪಘಾತವಾಯಿತು ಎಂದು ವಿಚಾರಿಸಿದರು. ಯುವತಿಯ ತಾಯಿ ಧಾರವಾಡ ಶೈಲಿಯಲ್ಲಿ ಸೀರೆ ಧರಿಸಿದ್ದರೆ ತಂದೆಯವರು ಕಾವಿ ಧರಿಸಿ ಕೈಯಲ್ಲಿ ರುದ್ರಾಕ್ಷಿ ಮತ್ತು ಸಣ್ಣ ತ್ರಿಶೂಲ ಹಿಡಿದಿದ್ದರು.
ನಾನು ಇದ್ದ ವಿಷಯವನ್ನು ಅವರಿಗೆ ಹೇಳಿದೆ. ವಿಷಯ ಕೇಳಿದ ನಂತರ ತಾಯಿ ಸೀರೆಯ ಸೆರಗಿನಿಂದ ಮುಖ ಮುಚ್ಚಿ ಅಳಲು ಶುರುಮಾಡಿದರೆ, ಯುವತಿಯ ತಂದೆಯ ಮುಖ ಕೆಂಪೇರಿತು. ಕಣ್ಣುಗಳು ಬೆಂಕಿಯುಂಡೆಯಾಗಿ ಕೈಯಲ್ಲಿದ್ದ ತ್ರಿಶೂಲವನ್ನು ಗಟ್ಟಿಯಾಗಿ ಹಿಡಿದು ನನ್ನನ್ನು ಕೆಕ್ಕರಿಸಿ ನೋಡುತಿದ್ದರು. ನನಗೆ ಮನಸಿನಲ್ಲಿ ತಳಮಳ ಶುರುವಾಗಿತ್ತು. ಗಂಟಲು ಒಣಗುತಿದ್ದರೂ ಸಾವರಿಸಿಕೊಂಡು ಇದರಲ್ಲಿ ನನ್ನದೇನೂ ತಪ್ಪಿಲ್ಲ. ನಿಮ್ಮ ಮಗಳು ತಪ್ಪು ದಾರಿಯಲ್ಲಿ ಬಂದು ನನಗೆ ಗುದ್ದಿದಳು. ಬೇಕಿದ್ದರೆ ಸುತ್ತ ಮುತ್ತಲಿನ ಸಿ ಸಿ ಟಿ ವಿ ಕ್ಯಾಮೆರದ ರೆಕಾರ್ಡಿಂಗ್ ಅನ್ನು ನೋಡಿಅಂದೆ .
ತಮ್ಮ ರುದ್ರಾಕ್ಶಿ ಮಣಿ ತೆಗೆದು, ಕೈಯಲ್ಲಿ ಹಿಡಿದು ನನಗೆ ಯಾವುದೇ ಸಿ ಸಿ ಟಿ ವಿ ಕ್ಯಾಮೆರದ ಅವಶ್ಯಕತೆ ಇಲ್ಲ, ನನಗೆ ಪ್ರತಿಯೊಂದು ಇದರಿಂದಲೇ ಗೊತ್ತಾಗುತ್ತದೆ ಎಂದರು. ಹಾಗಿದ್ದರೆ ನನ್ನ ಮೇಲೇಕೆ ಆರೋಪ ಮಾಡುತ್ತಿರುವಿರಿ ಎಂದೆ ?
ತಮ್ಮ ರುದ್ರಾಕ್ಶಿ ಮಣಿ ತೆಗೆದು, ಕೈಯಲ್ಲಿ ಹಿಡಿದು ನನಗೆ ಯಾವುದೇ ಸಿ ಸಿ ಟಿ ವಿ ಕ್ಯಾಮೆರದ ಅವಶ್ಯಕತೆ ಇಲ್ಲ, ನನಗೆ ಪ್ರತಿಯೊಂದು ಇದರಿಂದಲೇ ಗೊತ್ತಾಗುತ್ತದೆ ಎಂದರು. ಹಾಗಿದ್ದರೆ ನನ್ನ ಮೇಲೇಕೆ ಆರೋಪ ಮಾಡುತ್ತಿರುವಿರಿ ಎಂದೆ ?
ಯುವತಿಯರನ್ನು ಚುಡಾಯಿಸುವುದು ಹುಡುಗರ ದುರ್ಬುದ್ದಿ ಇದಕ್ಕೆ ತಕ್ಕ ಬೆಲೆ ನೀನು ಕಟ್ಟಬೇಕು ಅಂದರು. ಅದಕ್ಕೆ ನಾನು ನನಗೆ ಸಣ್ಣ ಪುಟ್ಟ ಗಾಯ ಇದ್ದಾಗಲೂ ನಿಮ್ಮ ಮಗಳ ಪ್ರಾಣ ಮುಖ್ಯ ಎಂದು ಬಂದಿದ್ದೇನೆ. ತಾವು ಈ ರೀತಿ ಮಾತನಾಡಬಾರದು ಎಂದೆ .
ಅವರು ನನ್ನನ್ನು ಸಿಟ್ಟಿನಿಂದ ನೋಡಿ ನನ್ನ ಪ್ಯಾಂಟ್ ನ ಹರಿದ ಬಟ್ಟೆಯ ಚೂರೊಂದನ್ನು ಕಿತ್ತುಕೊಂಡು ನಿನಗೆ ತಕ್ಕ ಶಾಸ್ತಿ ಮಾಡುತ್ತೇನೆ ಎಂದರು. ಏನಾದರೂ ಮಾಡಿಕೊಳ್ಳಿ ಎಂದು ನಾನು ಮನೆಗೆ ಬಂದೆ.
ಮನೆಗೆ ಬಂದು ಸ್ವಲ್ಪ ಹೊತ್ತಿನ ಬಳಿಕ ಯಾಕೋ ದೇಹಕ್ಕೆ ಸರಿಯಿಲ್ಲ ಎನಿಸಿತು. ದೇಹದ ತಾಪ ಹೆಚ್ಚಾಗಿ ಜ್ವರ ಬಂದಂತೆ ಅನ್ನಿಸತೊಡಗಿತು. ಸರಿ ಒಂದು ಜ್ವರದ ಮಾತ್ರೆಯನ್ನು ನುಂಗಿ ಮಲಗಿದರೆ ನಿದ್ದೆಯಲ್ಲಿ ಬರಿ ಅದೇ ದೃಶ್ಯಗಳು.
ಗಾಡಿ ಗುದ್ದಿದ ಹಾಗೆ, ರಕ್ತ ಮತ್ತು ಆಸ್ಪತ್ರೆ . ತಡೆಯಲಾಗದೇ ಎದ್ದು ಕುಳಿತೆನು. ನೋಡಿದರೆ ಮೈಯೆಲ್ಲಾ ಬೆವೆತು ಹೋಗಿದೆ ಕಣ್ಣು ಬಿಟ್ಟರೆ ಯುವತಿಯ ಅಪ್ಪನ ಚಿತ್ರಗಳು.
ಗಾಡಿ ಗುದ್ದಿದ ಹಾಗೆ, ರಕ್ತ ಮತ್ತು ಆಸ್ಪತ್ರೆ . ತಡೆಯಲಾಗದೇ ಎದ್ದು ಕುಳಿತೆನು. ನೋಡಿದರೆ ಮೈಯೆಲ್ಲಾ ಬೆವೆತು ಹೋಗಿದೆ ಕಣ್ಣು ಬಿಟ್ಟರೆ ಯುವತಿಯ ಅಪ್ಪನ ಚಿತ್ರಗಳು.
ತಡೆಯಲಾಗದೆ ಸ್ನೇಹಿತನಿಗೆ ಕರೆ ಮಾಡಿದೆ, ಅವನು ಬಂದೊಡನೇ ನನ್ನನ್ನು ನೋಡಿ ಏನಾಗಿದೆ ನಿನಗೆ ? ಇಂದು ಬೆಳಗ್ಗೆ ಚೆನ್ನಾಗಿದ್ದೇ ? ಏಕೆ ಏನಾಯಿತು ಅಂದ
ನಾನು ಅವನಿಗೆ ಎಲ್ಲ ಕಥೆಯನ್ನೂ ಹೇಳಿ, ಬಹುಷಃ ಆ ಸನ್ಯಾಸಿ ನನ್ನ ಮೇಲೆ ಸೇಡು ತೀರಿಸಿ ಕೊಳ್ಳುತಿದ್ದಾನೆ ಅಂದೆ . ಅದಕ್ಕೆ ಅವನು ಈ ಕಾಲದಲ್ಲಿ ಇದೆಲ್ಲ ಸುಳ್ಳು. ನೀನು ಮನಸ್ಸಿಗೆ ತುಂಬಾ ಹಚ್ಚಿಕೊಂಡು ಹೆದರಿದ್ದೀಯ. ರಿಲ್ಯಾಕ್ಸ್ ಗುರು. ನೆಟ್ ಫ್ಲಿಕ್ಸ್ ನಲ್ಲಿ ಯಾವುದಾದರೂ ಮೂವಿ ನೋಡು ಸರಿಯಾಗ್ತಿಯ ಎಂದ.
ಬೇಡ ನಡಿ ಸ್ವಲ್ಪ ದೂರ ಗಾಡಿಯಲ್ಲಿ ರೌಂಡ್ಸ್ ಹೋಗಿಬರೋಣ ಎಂದು ಹೊರಗೆ ಬಂದು ಗಾಡಿ ನೋಡಿದರೆ ಹಿಂಭಾಗದ ಚಕ್ರ ಪಂಚರ್ ಆಗಿತ್ತು. ಸರಿ ಕಾರಿನಲ್ಲಿ ಹೊರಗೆ ಹೋದಾಗ ಬಪ್ಪಿ'ಸ್ ಬಳಿ ಗಾಡಿ ತಿರುಗಿಸಬೇಕಾದರೆ ಮತ್ತೆ ಸನ್ಯಾಸಿ ದಾರಿಯ ಮದ್ಯದಲ್ಲಿ ಬಂದ ಹಾಗೆ ಆಯಿತು. ಗಾಬರಿಯಲ್ಲಿ ನಾನು ಕಾರ್ ನ ಹ್ಯಾಂಡ್ ಬ್ರೇಕ್ ಒತ್ತಿದಾಗ ಜೊತೆಗಿದ್ದ ಸ್ನೇಹಿತ ಯಾಕೆ ಗುರು ಏನಾಯಿತು ಎಂದ. ಸನ್ಯಾಸಿ ಸನ್ಯಾಸಿ ಎಂದಾಗ ನಿನಗೆ ಏನೋ ಆಗಿದೆ ದಾರಿಯಲ್ಲಿ ಯಾವ ಸನ್ಯಾಸಿ ಕೂಡ ಇಲ್ಲ ಅಂದ. ಕಾರನ್ನು ಅವನಿಗೆ ಓಡಿಸಲು ಹೇಳಿ ನಾನು ಅವನ ಪಕ್ಕದಲ್ಲಿ ಕುಳಿತೆ.
ಮನೆಗೆ ಬಂದು ಪಕ್ಕದ ಮನೆ ಆಂಟಿ ಕೊಟ್ಟ ಊಟ ಮಾಡಿ, ಹಾಸಿಗೆಯ ಮೇಲೆ ಉರುಳಿದೆ. ಸ್ನೇಹಿತನಿಗೆ ನನ್ನ ಜೊತೆಯೇ ಇರಲು ವಿನಂತಿಸಿದ್ದೆ. ಅವನು ತನ್ನ ಭಾವಿ ಪತ್ನಿಯೊಂದಿಗೆ ಫೋನಿನಲ್ಲಿ ಹರಟುತ್ತಿದ್ದ. ನನಗೆ ಯಾಕೋ ನಿದ್ದೆ ಬರದೇ ನನ್ನ ಬಳಿಯಿದ್ದ ನಿದ್ದೆ ಮಾತ್ರೆ ತೆಗೆದು ಕೊಂಡ ನಂತರ ಸ್ವಲ್ಪ ಜೋಂಪು ಬಂದಹಾಗೆ ಆಯಿತು.
ಮಲಗಿ ಎಷ್ಟು ಹೊತ್ತಾಯಿತೊ ಗೊತ್ತಿಲ್ಲ ಎದ್ದು ನೋಡಿದರೆ ರಾತ್ರಿ 1 ಗಂಟೆ, ನೋಡಿದರೆ ಮೈಯೆಲ್ಲಾ ಸುಡುತಿತ್ತು. ಸ್ನೇಹಿತನಿಗೆ ಹೇಳಿ ಹತ್ತಿರದ ಆಸ್ಪತ್ರೆಗೆ ಹೋದಾಗ ಡ್ಯೂಟಿ ಡಾಕ್ಟರ್ ಒಬ್ಬರು ನನ್ನನ್ನು ಬೆಡ್ ಮೇಲೆ ಮಲಗಲು ಹೇಳಿ.
ಥರ್ಮಾಮೀಟರ್ ನನ್ನ ಕಂಕುಳಲ್ಲಿ ಇಟ್ಟರು. ಇಟ್ಟು ಎಷ್ಟು ಹೊತ್ತಾದರೂ ಯಾವುದೇ ರೀಡಿಂಗ್ ಬರಲಿಲ್ಲ. ಮತ್ತೆ ಬೇರೆ ಮೀಟರ್ ತಂದು ಇಟ್ಟಾಗಲೂ ಇದೆ ಕಥೆಯಾಯಿತು. ಪರೀಕ್ಷಿಸಲು ಸ್ನೇಹಿತನಿಗೆ ಇಟ್ಟಾಗ ಸರಿಯಾದ ರೀಡಿಂಗ್ ತೋರಿಸಿತು . ಡಾಕ್ಟರ್ ಯಾಕೋ ಹೆದರಿಕೊಂಡ ಹಾಗೆ ನನಗೆ ಕಾಣಿಸಿತು.
ಸ್ನೇಹಿತ ಅವರಿಗೆ ಏನಾಯಿತು ಅಂದಾಗ ಏನಿಲ್ಲ, ಯಾಕೆ ಇವರ ದೇಹ ಪರಿಸ್ಥಿತಿ ಚೆನ್ನಾಗಿಲ್ಲ ಹತ್ತಿರದ ಜೆ ಎಸ್ ಜೆ ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿ ಅಂದರು. ನನ್ನ ಸ್ನೇಹಿತ ಡಾಕ್ಟರ್
ಅವರಿಗೆ ಸಾರ್ ಇವನಿಗೆ ಏನು ಆಗಿಲ್ಲ ತುಂಬಾ ಯೋಚನೆ ಮಾಡಿ ಈ ರೀತಿ ಆಗಿರಬಹುದು ದಯವಿಟ್ಟು ಯಾವುದಾದರೂ ಉದ್ವೇಗ ಶಮನವಾಗುವ ಔಷಧಿ ನೀಡಿ ಎಂದನು. ಅದಕ್ಕೆ ಅವರು ಆಂಕ್ಸಿಟ್ ಎಂಬ ಮಾತ್ರೆ ನೀಡಿ ಇದನ್ನು ಈಗ ಮಲಗುವ ತೆಗೆದುಕೊಳ್ಳಿ ಎಂದರು.
ಮನೆಗೆ ಬಂದರೆ ಯಾಕೋ ಹೊಟ್ಟೆ ನೋವೆನಿಸಿತು . ಸ್ವಲ್ಪ ನೀರು ಕುಡಿದ ನಂತರ
ಮತ್ತೆ ಹೊಟ್ಟೆ ತೊಳಸಿದಂತಾಗಿ ವಾಂತಿಯಾಯಿತು. ನೋಡಿದರೇ ತಿಂದ ಅಣ್ಣ ಜೊತೆಗೆ ಕೆಂಪು ಬಣ್ಣದ ದ್ರವ, ನನಗೇಕೋ ಇದು ರಕ್ತ ವಾಂತಿ ಎನಿಸಿ ಬಹುಶಃ ಆ ಸನ್ಯಾಸಿ ನನಗೇನೋ ಮಾಟ ಮಂತ್ರ ಮಾಡಿರಬಹುದು. ತನ್ನ ಮಗಳ ಅಪಘಾತಕ್ಕೆ ನನ್ನ ಮೇಲೆ ಸೇಡು ತೀರಿಸಿಕೊಳ್ಳುತಿದ್ದಾನೆ ಎಂದೆನಿಸಿತು.
ಹಾಗೂ ಹೀಗೂ ಮಾಡಿ ಬೆಳಕಾದ ತಕ್ಷಣ ಆಸ್ಪತ್ರೆಗೆ ಹೋಗಿ ನೋಡಿದರೆ ಅಪಘಾತ ವಾದ ಯುವತಿಯು ಇಲ್ಲ ಕೇಳಿದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಿದ್ದೇವೆ ಎಂದರು. ಸ್ನೇಹಿತ ನಿನ್ನದು ಬರಿ ಭ್ರಮೆ ನಿನ್ನ ಮನಸ್ಸನ್ನು ಗಟ್ಟಿ ಮಾಡಿಕೋ ನಿನಗೇನೂ ಆಗಿಲ್ಲ ಆಗಿರುವು ಆಯಾಸವಷ್ಟೇ ಎಂದನು.
ಯಾಕೋ ಅನುಮಾನ ಬಂದಂತಾಗಿ ಕಾರ್ ನ ಡ್ಯಾಶ್ಬೋರ್ಡ್ ಕ್ಯಾಮೆರಾದ ಮೆಮೊರಿ ಕಾರ್ಡ್ ಅನ್ನು ತೆಗದು ಲ್ಯಾಪ್ಟಾಪ್ಗೆ ಗೆ ಹಾಕಿ ನೆನ್ನೆ ಬಪ್ಪಿ'ಸ್ ಬಳಿ ಬಂಡ ವ್ಯಕ್ತಿಯಾರು ಎಂದು ನೋಡಿದರೆ ಅದರಲ್ಲಿ ಇದ್ದ ಚಿತ್ರಗಳೆಲ್ಲವೂ ಮಸುಕು ಮಸುಕು. ಇಷ್ಟೊಂದು ಒಳ್ಳೆಯ ಕ್ಯಾಮೆರಾದಲ್ಲಿ ಚಿತ್ರ ಏಕೆ ಈ ರೀತಿ ಮಸುಕು ಮಸುಕು ಎಂದು ಅರ್ಥವಾಗಲಿಲ್ಲ.
ಆ ಚಿತ್ರಗಳನ್ನು ಫೋಟೊಶಾಪ್ ತಂತ್ರಾಂಶದಲ್ಲಿ ಹೆಚ್ಚಿನ ಪರೀಕ್ಷೆಗೊಳಪಡಿಸಿ ಪ್ರಿಂಟ್ ಹಾಕಿದಾಗ ಕಂಡದ್ದು ಅದೇ ಸನ್ಯಾಸಿಯ ಫೋಟೋಗಳು. ಎಲ್ಲ ಫ್ರೇಮ್ಗಳಲ್ಲೂ ಸನ್ಯಾಸಿಯದೆ ಚಿತ್ರಗಳು. ನನಗಂತೂ ತಲೆ ಗಿರಗಿರ ಸುತ್ತುತ್ತಿತ್ತು. ಈ ಸನ್ಯಾಸಿಯಿಂದ ಉಳಿಗಾಲವಿಲ್ಲ ಅಂತ ಅನಿಸುತಿತ್ತು.
ಊಟ ಮಾಡಲು ಹೋದರೆ ಅನ್ನದಲ್ಲಿ ಬರಿ ಮುಳ್ಳು ಏನೋ ಇದ್ದಂತೆ ಕಾಣುತಿತ್ತು, ಮಲಗಿದರೆ ಬರಿ ದುಸ್ವಪ್ನಗಳು, ಸನ್ಯಾಸಿ ಬಂದು ನನಗೆ ಚುಚ್ಚಿದ ಹಾಗೆ, ಹೀಗೆ ಮಲಗಿದ್ದಾಗ ರಾತ್ರಿ ಯಾರೊ ಬಂದು ನನ್ನ ಮೇಲೆ ಕುಳಿತು ಮೆಟ್ರೆ ಹಿಸುಕಿದ ಹಾಗೆ, ನನ್ನ ಕುತ್ತಿಗೆಯ ಬಳಿ ಕುಯ್ದ ಹಾಗೆ ಅನಿಸಿತು. ಎದ್ದು ನೋಡಿದರೆ ಕುತ್ತಿಗೆಯ ಸುತ್ತೆಲ್ಲ ರಕ್ತ, ಸ್ನೇಹಿತನಿಗೆ ಸಹಾಯಕ್ಕಾಗಿ ಕೂಗಿದೆ ಅವನು ಬಂದು ಹತ್ತಿ ಮತ್ತು ಡೆಟಾಲ್ ನಿಂದ ಎಲ್ಲವನ್ನು ತೊಳೆದು. ಆಂಟಿಸೆಪ್ಟಿಕ್ ಕ್ರೀಮ್ ಅನ್ನು ಹಚ್ಚಿ ಬ್ಯಾಂಡೇಜ್ ಮಾಡಿದ.
ಅವನ ಮುಖ ನೋಡಿದರೆ, ಗಾಬರಿಗೊಂಡ ಹಾಗಿತ್ತು , ತನ್ನ ಯಾರೋ ಸ್ನೇಹಿತರಿಗೆ ಕರೆ ಮಾಡಿ ಯಾರಾದರೂ ಸೈಕ್ರಿಯಾಟಿಸ್ಟ್ ಇದ್ದಾರೆ ಹೇಳು ನನ್ನ ಸ್ನೇಹಿತನಿಗೆ ಏನೋ ಆಗಿದೆ ಅಂದ. ನಾನು ಅವನಿಗೆ
ಸೈಕ್ರಿಯಾಟಿಸ್ಟ್ ಬದಲು ಆ ಸನ್ಯಾಸಿಯ ಅಡ್ರೆಸ್ ಹುಡುಕು ಹೋಗಿ ತಪ್ಪಿಲ್ಲದಿದ್ದರೂ ಕ್ಷಮೆ ಕೇಳುತ್ತೇನೆ ಎಂದೆ. ಬೆಂಗಳೂರಿನ ಹೆಬ್ಬಾಳದ ಬಳಿಯ ಆಸ್ಪತ್ರೆಯೊಂದರಲ್ಲಿ ಇರುವ ಮಾಹಿತಿ ಸಿಕ್ಕ ಬಳಿಕ ಅಲ್ಲಿಗೆ ಹೋದಾಗ ಯುವತಿಯನ್ನು ಆಗಷ್ಟೇ ಆಪರೇಷನ್ ಥಿಯೇಟರ್ ನಿಂದ ಐ ಸಿ ಯು ಗೆ ಶಿಫ್ಟ್ ಮಾಡಿದ್ದಾರೆ ನೀವು ನೋಡಲಾಗುವುದಿಲ್ಲ ಎಂದರು ಏತಕ್ಕೆ ಎಂದು ಕೇಳಿದಕ್ಕೆ ಯುವತಿಗೆ ಮೆದುಳಿನ ರಕ್ತಸ್ರಾವವಾಗುತಿತ್ತು ಆದ್ದರಿಂದ ಯುವತಿ ಸಂನ್ಯ ಪರಿಸ್ಥಿತಿಗೆ ಬರಲು ಕನಿಷ್ಠ ಎಂದರೂ ಮೂರರಿಂದ ಆರು ತಿಂಗಳು ಬೇಕು ಎಂದರು. ಯುವತಿಯ ತಾಯಿ ನಮ್ಮನ್ನು ನೋಡಿ ಮುಖ ಕಿವುಚಿದರು. ಅವರಿಗೆ ಇದರಲ್ಲಿ ನಮ್ಮದೇನೂ ತಪ್ಪಿಲ್ಲ ದಯವಿಟ್ಟು ನಿಮ್ಮ ಮನೆಯವರಿಗೆ ನಮ್ಮನ್ನು ಕ್ಷಮಿಸಲು ಹೇಳಿ ಎಂದೆ ಅದಕ್ಕೆ ಅವರು ನೀವುಂಟು ಅವರುಂಟು ಎಂದರು. ಅವರು ಎಲ್ಲಿದಾರೆ ಎನ್ನಲು ಅವರು ಕೊಳ್ಳೆಗಾಲದ ಸ್ಮಶಾನದಲ್ಲಿ ಯಾವುದೊ ಪೂಜೆ ಮಾಡುತ್ತಿದ್ದಾರೆ ಅಲ್ಲಿಗೆ ಹೋಗಿ ಕೇಳಿ ಅಂದರು.
ಬೆಂಗಳೂರಿನಿಂದ ಕೊಳ್ಳೆಗಾಲಕ್ಕೆ ಬರುವಾಗ ಸಂತೆಮರಳ್ಳಿ ಬಳಿ ನಮ್ಮ ಕಾರಿಗೆ ಅಪಘಾತವಾಯಿತು.ಎಚ್ಚರವಾದಾಗ ನಾನು ಆಸ್ಪತ್ರೆಯೊಂದರಲ್ಲಿ ಇದ್ದೆ. ನನ್ನ ಪಕ್ಕದಲ್ಲಿ ಇದ್ದ ವ್ಯಕ್ತಿಯೊಬ್ಬರು ನಾನು ನವೀನ್ ಸಂಗಾಪುರ ಎಂದು ನಿಮ್ಮನ್ನೂ ನಾನೇ ಆಸ್ಪತ್ರೆಗೆ ಸೇರಿಸಿದ್ದು ಎಂದರು. ಸರಿ ಎಂದು ಅವರಿಗೆ ನನ್ನ ಪರಿಸ್ಥಿತಿ ಹೇಳಿದೆ ನನಗೆ ಯಾವುದೊ ಕೆಟ್ಟ ಶಕ್ತಿಯ ಪ್ರಯೋಗ ನನ್ನ ಮೇಲೆ ಆಗುತ್ತಾ ಇದೆ. ಅದಕ್ಕೆ ಅವರು ನನಗೆ ಗೊತ್ತಿರುವ ಒಬ್ಬರು ವೈದ್ಯರಿದ್ದಾರೆ ಅವರು ನಿಮಗೆ ಸಹಾಯ ಮಾಡಬಹುದು ಹೋಗಿ ಅವರನ್ನು ಭೇಟಿ ಮಾಡಿ ಎಂದರು.
ಸರಿ ಅವರು ಹೇಳಿದ ಮೈಸೂರಿನ ಕ್ಲಿನಿಕ್ಕಿಗೆ ಹೋದಾಗ, ಡಾಕ್ಟರ್ 10 ಗಂಟೆಗೆ ಬರುತ್ತಾರೆ ಕಾಯಿರಿ ಎಂದರು. ಸ್ವಲ್ಪ ಹೊತ್ತಿನ ಬಳಿಕ ಬಳಿಕ ಬಂದ ಮೊದಲನೇ ರೂಮಿಗೆ ಹೋಗಿ ಅಂದರು. ರೂಮಿನಲ್ಲಿ ಕುಳಿತಿದ್ದ ವೈದ್ಯೆಯೊಬ್ಬರು ಬನ್ನಿ ಕುಳಿತುಕೊಳ್ಳಿ ಎಂದು ಹೇಳಿ. ನನ್ನ ಸಮಸ್ಯೆಯನ್ನು ವಿವರವಾಗಿ ಕೇಳಿದರು .
ನಂತರ ಸಣ್ಣ ಕೊಣೆಗೆ ಕರೆದುಕೊಂಡು ಹೋಗಿ ತಲೆಗೆ ಒಂದು ಎಣ್ಣೆ ಹಾಕಿದ ಬಟ್ಟೆ ಕಟ್ಟಿದರು ಇದು ಏನು ಅಂದಿದ್ದಕ್ಕೆ ಶಿರೋಪೀಚು ಇದು ಭ್ರಮಾ ರೋಗಕ್ಕೆ ರಾಮ ಬಾಣ ಎಂದರು. ನಂತರ ಇನ್ನೊಂದು ಕತ್ತಲ ಕೋಣೆಗೆ ಕರೆದುಕೊಂಡು ಹೋಗಿ ಸಣ್ಣ ಮೊಂಬತ್ತಿಯನ್ನು ಹಚ್ಚಿ ಅದನ್ನೇ ನೋಡಲು ಹೇಳಿದರು ನಂತರ ನನಗೆ ನಿದ್ದೆ ಬಂದ ರೀತಿ ಆಯಿತು.
ಎಚ್ಚರವಾದಾಗ ವೈದ್ಯೆ ಪಕ್ಕದಲ್ಲಿ ಕುಳಿತಿದ್ದರು, ನಿಮ್ಮ ಚಿಕಿತ್ಸೆ ಮುಗಿದಿದೆ ನೀವು ಈಗ ಸಂಪೂರ್ಣ ಆರಾಮವಾಗಿದ್ದಿರಿ ಎಂದರು ಅದಕ್ಕೆ ನಾನು ಸನ್ಯಾಸಿಯು ನನಗೆ ಇನ್ನು ಕಾಟ ಕೊಡುತ್ತಾರೆ ಎನ್ನಲು ಇಲ್ಲ ಅದೆಲ್ಲ ನಿಮ್ಮ ಭ್ರಮೆ. ನಿಮ್ಮ ಎಲ್ಲ ಒತ್ತಡಗಳಿಂದ ನೀವು ಅಧೀರರಾಗಿದ್ದೀರಿ ನಿಮ್ಮ ಮನಃಶಕ್ತಿ ಯ ಮೇಲೆ ನಂಬಿಕೆ ಇರಲಿ . ನಿಮ್ಮ ಮಾನಸಿಕ ಶಕ್ತಿಯ ಮುಂದೆ ಪ್ರಪಂಚದ ಯಾವ ಕೆಟ್ಟ ಶಕ್ತಿಯು ಕೆಲಸ ಮಾಡುವುದಿಲ್ಲ ಎಂದರು.
ಅವರಿಗೆ ಕೈ ಮುಗಿದು ನಿಮ್ಮ ಫೀಸ್ ಎಷ್ಟು ಎಂದು ಕೇಳಲು ಅವರು ಫೀಸ್ ಬೇಡ. ನನಗೆ ನನ್ನ ರೋಗಿಗಳು ವಾಸಿಯಾದರೆ ಸಾಕು ಅಂದರು. ಖುಷಿಯಾಗಿ ಹೊರಗಡೆ ಬಂದಾಗ ಪಕ್ಕದ ಅಂಗಡಿಯಲ್ಲಿ ಎಫ್ ಎಂ ರೇಡಿಯೋ ಒಂದು "ಎಲ್ಲೆ ನಾನಿನ್ನ ಹೆಸರನ್ನು ಕಂಡಾಗ, ನಿನ್ನನ್ನೆ ಕಂಡಂತೆ ಖಾಸಾ ಸಂತಸ" ಎಂದು ಹಾಡು ಗುನುಗುತಿತ್ತು .

No comments:
Post a Comment