ಎಂದಿನಂತೆ ರಾತ್ರಿಯ ಊಟ ಮುಗಿಸಿ ಮಲಗಿದಾಗ ಗಂಟೆ ಹತ್ತಾಗಿತ್ತು. ಮೊಬೈಲ್ನಲ್ಲಿ ಬೇಕಾದವರಿಗೆ ದಿನದ ಕೊನೆಯ ಮೆಸೇಜ್ ಗಳನ್ನೂ ಕಳುಹಿಸದೆ ಹೋದರೆ ನಿದ್ದೆ ಬರುವುದಿಲ್ಲವೇನೋ ಎಂಬಂತೆ, ಶುಭ ರಾತ್ರಿ ಮೆಸೇಜ್ ಕಳುಹಿಸಲೇಬೇಕು
ಸರಿ ಮಾರನೆಯ ದಿನ ಹೆಣ್ಣು ನೋಡಲು ಹೋಗಿದ್ದು ಒಂದು ಗ್ರಾಮಕ್ಕೆ, ಹುಡುಗಿಯ ಮನೆಯವರು ಎಲ್ಲರಿಗು ಒಳಗೆ ಬನ್ನಿ ಎಂದು ಹೇಳಿ ತಮ್ಮ ಪತ್ನಿಗೆ ಈಚಲು ಮರದ ಚಾಪೆ ಹಾಸಲು ಹೇಳಿದರು. ಸರಿ ಜೀನ್ಸ್ ಪ್ಯಾಂಟ್ ತೊಟ್ಟಿದರೂ ಕಾಲು ಮಡಚಿ ಕುಳಿತದ್ದಾಯ್ತು. ಇವರೇನು ಹೆಗ್ಗೋಡು ಪ್ರಸನ್ನರ ಅಭಿಮಾನಿಗಳೇ ಇಲ್ಲ ಅವರ ಸಂಬಂದಿಕರೇ ಅರ್ಥ ಆಗಲಿಲ್ಲ. ಚೆಂದದ ಹುಡುಗಿ ನೋಡಲು ಬಂದರೆ ನೆಲದ ಮೇಲೆ ಕುಳಿತುಕೊಳ್ಳಲು ಹೇಳುವುದೇ !!
ಸರಿ. ಹುಡುಗಿಯ ಅಮ್ಮ ಬಂದು ಎಲ್ಲರಿಗು ಬೆಲ್ಲದ ಪಾನಕ ಕೊಟ್ಟರು ತನಗೆ ಡಯಟ್ ಕೋಕ್ ಬೇಕು ಎಂದು ಹೇಳಲು ಹೋದವನು, ಕೆಂಪು- ಕರಿ ಬಣ್ಣದ ಪಾನಕ ನೋಡಿ ಸುಮ್ಮನೆ ಆದನು. ಸಿಂಪಲ್ ಲಿವಿಂಗ್ ಅಂಡ್ ಹೈ ಥಿಂಕಿಂಗ್ ಅನ್ನೋ ಇಂಗ್ಲಿಷ್ ಗಾದೆಯನ್ನು ಬೇಕಾದಷ್ಟು ಸಲ ಅವನು ಹೇಳಿದ್ದನು ಆದರೆ ಆಚರಣೆ ಕಷ್ಟ ಅನ್ನೋದು ಈಗ ಅರಿವಾಗತೊಡಗಿತು.
ಮೈಸೂರಿನ ಬಳಿ ಇರುವ ಒಂದು ಊರು ಬದನವಾಳು , ಇದು ಖಾದಿ ಗ್ರಾಮದ್ಯೋಗ ಕೇಂದ್ರ, ಪೂಜ್ಯಪಿತ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ ಸ್ಥಳ. ಅಲ್ಲಿ ರಂಗಕರ್ಮಿ ಪ್ರಸನ್ನರವರು ಯಂತ್ರ ಬೇಡ, ಆಧುನಿಕ ತಂತ್ರ ಬೇಡ ನಮ್ಮ ಜೀವನ ನೈಸರ್ಗಿಕ ವಾಗಿರಲಿ ಎಂದು ಪ್ರತಿಭಟನೆ ಮಾಡಿದ್ದು ಅಲ್ಲಿಗೆ ಬಾಲಿವುಡ್ ನ ಶ್ರೇಷ್ಠ ನಟ ಇರ್ಫಾನ್ ಖಾನ್ ರವರು ತಮ್ಮ ಪತ್ನಿ ಯೊಡನೆ ಅಲ್ಲಿ ಒಂದು ದಿನ ಇದ್ದು ತಮ್ಮ ಗುರುವಿಗೆ ಬೆಂಬಲ ಸೂಚಿಸಿದ್ದರು.
ಯಂತ್ರಗಳ ನೆರವಿಲ್ಲದೆ ಬದುಕುವುದು ಸಾಧ್ಯ ಎಂದು ಅವರು ಹಲವು ಬಾರಿ ನಿರೂಪಿಸಿದ್ದರೂ ಹಲವರಿಗೆ ಅದು ಇಷ್ಟವಾಗಲಿಲ್ಲ. ಅಂದರೆ ಎಣ್ಣೆ ತೆಗೆಯುವುದಕ್ಕೆ ಎತ್ತಿನ ಗಾಣ, ಸಕ್ಕರೆಯ ಬದಲು ಬೆಲ್ಲ, ಪಾಂಡವಪುರ ಸಕ್ಕರೆ ಫ್ಯಾಕ್ಟರಿಯ ಬದಲು ತಮ್ಮ ಊರಿನಲ್ಲೇ ಗಾಣ ಮಾಡಿ ಬೆಲ್ಲ ಕಾಯಿಸಬೇಕು. ತೋಟಕ್ಕೆ ನೀರೆತ್ತಲು ಮೋಟಾರ್ ಬದಲಿಗೆ ಏತ ನೀರಾವರಿ. ಮಸಾಲೆ ರುಬ್ಬಲು ಮಿಕ್ಸಿಯ ಬದಲಿಗೆ ರುಬ್ಬು-ಕಲ್ಲು ... ಬರೆಯುತ್ತ ಹೋದರೆ ಬದುಕಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ.
ಸರಿ ಗ್ರಾಮದ್ಯೋಗದ ಪರಿಕಲ್ಪನೆ ಚೆನ್ನಾಗಿದೆ ಆದರೆ ನಮಗೆ ಆ ರೀತಿಯಲ್ಲಿ ಬದುಕುವ ಯೋಗ್ಯತೆ ಇಲ್ಲ ಆದರೆ ಈ ಮಾವನ ಮನೆಯಲ್ಲಿ ಹೇಗೆ ಇರೋದು ಅಂತ ಯೋಚನೆ ಶುರುವಾಗಿತ್ತು. ಸರಿ ಹೇಗಾದರೂ ಆಗಲಿ ಹುಡುಗಿಯನ್ನು ನೋಡುವ ಶಾಸ್ತ್ರ ಮುಗಿಯಲಿ ನಂತರ ಬೇಗ ಕಳಚಿಕೊಂಡರೆ ಆಯಿತು, ಇಲ್ಲ ಅಂದರೆ ಕಾಚದ ಬದಲು ಕೌಪೀನ ಕೊಡುವ ಜನ ಇವರು ಎಂದುಕೊಂಡ.
ಸರಿ ಅಲ್ಲಿದವರೊಬ್ಬರು ಹುಡುಗಿ ಕೈಲಿ ಟೀ ಕಳಿಸಿ ಅಂದರು ಅದಕ್ಕೆ ಹುಡುಗಿಯ ಸೋದರಮಾವ ನಮ್ಮ ಹುಡುಗಿ ಟೀ ಕುಡಿಯಲ್ಲ ಬೇರೆಯವರಿಗೂ ಕುಡಿಯಲು ಬಿಡಲ್ಲ ಎಂದು ಹೇಳಿದರು ಅದಕ್ಕೆ ಹುಡುಗನ ಸ್ನೇಹಿತ ನಾನು ಕುಡಿಯಲ್ಲ ಆದರೆ ಇವರ ಜೊತೆ ಸೇರಿ ಈಗ ಕುಡಿಯುವುದನ್ನು ಕಲಿತಿದ್ದೇನೆ ಎಂದ. ಅದಕ್ಕೆ ಹುಡುಗಿಯ ಮಾವನವರು ಸುರಪಾನ ಮತ್ತು ಮಧುಪಾನ ನಾವು ಮಾಡುವುದಿಲ್ಲ ಎಂದರು .
ಕರ್ನರೇ/ ಬೀಗರೂಟ ಮಾಡಿದಾಗ ಬಂದವರಿಗೆ ಮೂಳೆಯ ಜೊತೆಗೆ ಗಂಜಲ ಕೊಡುತ್ತೀರಾ ಎಂದು ಕೇಳಬೇಕಿನಿಸಿದರೂ ! ಈಗಲೇ ಗಂಜಲ ಒಳ್ಳೆಯದು ಕುಡಿಯಿರಿ ಇಲ್ಲ ಅದರಲ್ಲಿ ಬಾಯಿ ಮುಕ್ಕಳಿಸಿ 🙊 ಎಂದರೆ ಎಂದು ಸುಮ್ಮನಾದ.
ಆಯ್ತು ಹುಡುಗಿಯನ್ನು ಕರಿದ ತಿಂಡಿಯ ಮತ್ತು ಖಾರದ ಜೊತೆ ಕಳುಹಿಸಿ ಎನ್ನಲು, ನಮ್ಮ ಹುಡುಗಿ ಜಂಕ್ ಫುಡ್ ತಿನ್ನುವವಳಲ್ಲ ಎಂದರು. ಹುಡುಗನಿಗೆ ಬೇರೆ ಗ್ರಹಕ್ಕೆ ಬಂದಂತಾಗಿತ್ತು. ವೈಟ್ ಫೀಲ್ಡ್ ನ ಇನ್ನೊವೇಟರ್ ನ ಮಹಡಿಯ ಮೆಟ್ಟಿಲುಗಳ ಮೇಲೆ ಕುಳಿತು ನಮ್ಮ ಜೊತೆ ಧಮ್ ಶೇರ್ ಮಾಡುವ ಹುಡುಗಿಯರೆಲ್ಲಿ, ಹ್ಯಾಪಿ ಹವರ್ ನಲ್ಲಿ ಕ್ಯಾನ್ ಗಟ್ಟಲೆ ಬಿಯರ್ ಖಾಲಿ ಮಾಡಲು ಮನೆಯಲ್ಲಿ ಸುಳ್ಳು ಹೇಳಿ , ಪಬ್ ಗೆ ಬರುವ ಬುಲ್ಡೋಜರ್ ಗಳೆಲ್ಲಿ💃
ಅಯ್ಯೋ ಶಿವನೇ ನನಗೆ ಯಾಕಿಷ್ಟು ಕಷ್ಟ ಕೊಡ್ತೀಯಾ ? ನಾನು ನೀನಗೇನು ಅನ್ಯಾಯ ಮಾಡಿದ್ದೆ; ಈ ಶಿವನನ್ನು ನಂಬುವ ಬದಲು ಪಕ್ಕದ ಡೆಸ್ಕ್ ನ ಪರಿಮಳನ ಪ್ರೊಪೋಸ್ ನಾದ್ರೂ ಒಪ್ಪಿದ್ರೆ ಯೇಸು ದೇವ ಪ್ರೀತಿಯಿಂದ ಕುಡಿಯಲು ಏನಾದ್ರು ಕೊಡುತ್ತಿದ್ದರೇನೋ? ಎಂತ ಅನ್ಯಾಯ !! ಇಲ್ಲಿಗೆ ಬಂದು ಕುಳಿತೇ ಎಂದು ತನ್ನ ಸೋದರಮಾವನ ಮುಖವನ್ನು ನೋಡಿದ, ಸೋದರಮಾವ ಹುಡುಗಿಯ ಮನೆಯವರಿಂದ ಒಂದು ಚೊಂಬು ಪಾನಕ ತೆಗೆದುಕೊಂಡು ಹೊಟ್ಟೆಗೆ ತುಂಬುತಿದ್ದರು. ಹೊಟ್ಟೆಬಾಕ ಮಾವ ಎಂದುಕೊಂಡ ಹೋಗಲಿ ಅಂದರೆ ಉಳಿದೊಬ್ಬ ಮಾವ ಮನೆಮುರುಕ.
ಅಯ್ಯೋ ಶಿವನೇ ನನಗೆ ಯಾಕಿಷ್ಟು ಕಷ್ಟ ಕೊಡ್ತೀಯಾ ? ನಾನು ನೀನಗೇನು ಅನ್ಯಾಯ ಮಾಡಿದ್ದೆ; ಈ ಶಿವನನ್ನು ನಂಬುವ ಬದಲು ಪಕ್ಕದ ಡೆಸ್ಕ್ ನ ಪರಿಮಳನ ಪ್ರೊಪೋಸ್ ನಾದ್ರೂ ಒಪ್ಪಿದ್ರೆ ಯೇಸು ದೇವ ಪ್ರೀತಿಯಿಂದ ಕುಡಿಯಲು ಏನಾದ್ರು ಕೊಡುತ್ತಿದ್ದರೇನೋ? ಎಂತ ಅನ್ಯಾಯ !! ಇಲ್ಲಿಗೆ ಬಂದು ಕುಳಿತೇ ಎಂದು ತನ್ನ ಸೋದರಮಾವನ ಮುಖವನ್ನು ನೋಡಿದ, ಸೋದರಮಾವ ಹುಡುಗಿಯ ಮನೆಯವರಿಂದ ಒಂದು ಚೊಂಬು ಪಾನಕ ತೆಗೆದುಕೊಂಡು ಹೊಟ್ಟೆಗೆ ತುಂಬುತಿದ್ದರು. ಹೊಟ್ಟೆಬಾಕ ಮಾವ ಎಂದುಕೊಂಡ ಹೋಗಲಿ ಅಂದರೆ ಉಳಿದೊಬ್ಬ ಮಾವ ಮನೆಮುರುಕ.
ಅಷ್ಟರಲ್ಲಿ ಯಾರೋ ಹಾಲ್ ಗೆ ಬೆಳಕು ಹಾಕಿದಂತಾಯಿತು. ಏನು ಬೆಳಕು ಎಂದು ಕಣ್ಣು ಬಿಟ್ಟು ನೋಡಿದರೆ ಹಾಲ್ ಗೆ ಬಂದವಳು ಸೀರೆ ಉಟ್ಟ ಐಶ್ವರ್ಯ ರೈ ನ ಚಿಕ್ಕಮ್ಮನ ಮಗಳು ಇಶ್ವರ್ಯ. ಕಣ್ಣಿಗೊಂದು ಚೆಂದದ ಕನ್ನಡಕ ಮತ್ತು ಮುಖಕ್ಕೆ ಮಾಸ್ಕ. ಸರಿ ಎಲ್ಲಾರಿಗೂ ಬಿಸ್ಕತ್ ಮತ್ತು ಹುರಿದ ಗೋಡಂಬಿ ಮತ್ತು ಪಿಸ್ತಾ ತಿನ್ನಲು ನೀಡಲಾಯಿತು. .
ಹುಡುಗಿಯ ಕೈಯಿಂದ ತಟ್ಟೆ ತೆಗೆದುಕೊಂಡವ ಮತ್ತೆ ತಲೆ ಮೇಲಕೆತ್ತಿದ್ದು ತಟ್ಟೆ ಖಾಲಿಯಾದಮೇಲೆಯೇ. ಸರಿ ಹುಡುಗಿಯ ತಂದೆ ನೀವೇನು ಮಾಡುತ್ತಿದ್ದೀರಾ ಎಂದರು ? ಅದಕ್ಕೆ ಹುಡುಗ ನಾನು ಡಾಕ್ಟರ್ ಆಗಬೇಕುಂತ ಇದ್ದೆ ಆದರೆ ಆಗಲಿಲ್ಲ ನಾನೊಬ್ಬ ಸಾಫ್ಟ್ವೇರ್ ಇಂಜಿನಿಯರ್ ಎಂದನು ಅದಕ್ಕೆ ಅವರು ತಿಕ ಬಗ್ಗಿಸಿ ಓದಿದ್ರೆ ಆಗ್ತಾ ಇದ್ದೆ ಅದಕ್ಕೆ ನಾವು ಸಾಫ್ಟ್ವೇರ್ ಅವರಿಗೆ ಹುಡುಗಿ ಕೊಡುವುದಿಲ್ಲ ಯಾಕೆಂದರೆ ಅವರಿಗೆ ಕೆಲ್ಸದ ಖಾತ್ರಿಯಿಲ್ಲ, ಆರೋಗ್ಯದ ಬಗ್ಗೆ ಕಾಳಜಿಯಿಲ್ಲ ಮತ್ತು ಹಣದ ಮಹತ್ವಗೊತ್ತಿಲ್ಲ, ಪಬ್ ಮತ್ತು ವೀಕೆಂಡ್ ಔಟಿಂಗ್ ನಲ್ಲಿ ಕುಡಿದು ಕುಪ್ಪಳಿಸುತ್ತಿರ ಎಂದರು ಅದಕ್ಕೆ ಹುಡುಗ ನಾನು ಬಹಳ ಗುಣವಂತ ನನಗೆ ಯಾವುದೇ ಕೆಟ್ಟ ಅಭ್ಯಾಸವಿಲ್ಲ. ಸಿಗರೇಟ್ ಕೂಡ ಸುಟ್ಟಿಲ್ಲ ಎಂದನು.
ಸರಿ ಹುಡುಗಿಯ ಜೊತೆ ಮಾತನಾಡುವುದಿದ್ದರೆ ಮಾತನಾಡಿ ಎಂದರು ಸರಿ ಹುಡುಗಿಯ ಜೊತೆ ಮಾತನಾಡಲು ಮನೆಯ ಹೊರಗಡೆ ಬಂದಾಗ ತಿಳಿದದ್ದು ಹುಡುಗಿ ಮೈಸೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ಡಾಕ್ಟರ್ ಎಂದು. ಜಾಸ್ತಿ ಪ್ರಶ್ನೆ ಕೇಳಿದರೆ ಎಲ್ಲಿ ಚಾಕು ಹಾಕಿಬಿಡುತ್ತಾಳೋ ಅಂದುಕೊಂಡು ನೀವು ನೋಡಲು ಚೆನ್ನಾಗಿದ್ದೀರ. ನಿಮಗೆ ಏನಿಷ್ಟ ಅಂದನು ಅದಕ್ಕೆ ಆ ಹುಡುಗಿ ನನಗೆ ಕಾರ್ನರ್ ಹೌಸ್ನಲ್ಲಿ ಕುಳಿತು ತಿನ್ನುವ ಐಸ್ ಕ್ರೀಮ್ ಇಷ್ಟ ಎಂದಳು. ಸರಿ ಅಲ್ಲಿಗೆ ಹೋಗೋಣ್ವಾ ಅಂದ ಅದಕ್ಕೆ ಆ ಹುಡುಗಿ ನಿಮ್ಮ ಬರ್ತ್ಡೇ ಹೋಗೋಣ
ಹುಡುಗ: ನಿಮ್ಮ ಬರ್ತ್ಡೇ ಯಾವತ್ತು ?
ಹುಡುಗಿ: ನಾನು ಬರ್ತ್ ಡೇ ಆಚರಿಸಲ್ಲ
ಹುಡುಗ : ಯಾಕ್ರೀ? ಮತ್ತೆ ಏನಮಾಡ್ತಿರಿ
ಹುಡುಗಿ: ಏನು ಮಾಡೋದಿಲ್ಲ. ಅವತ್ತು ನಾನು ಜಾಸ್ತಿ ರೋಗಿಗಳಿಗೆ ನೋಡುತ್ತೇನೆ ಅಷ್ಟೇ ನನಗೆ ಅದರ ಬಗ್ಗೆ ಪ್ರಶ್ನೆ ಮಾಡಬ್ಯಾಡ್ರಿ ಎಂದಳು.
ಹುಡುಗ: ಹೋಗ್ಲಿ ಬಿಡ್ರಿ ನಾವೇ ನಿಮ್ಮ ಬರ್ತ್ ಡೇ ಸೆಲೆಬ್ರೇಟ್ ಮಾಡ್ತೀವಿ , ಅಲನಹಳ್ಳಿಯಲ್ಲಿ ಒಳ್ಳೆ ಕುರಿ ಮಾಂಸ ಸಿಗುತ್ತೆ ಬಿರಿಯಾನಿ ಮಾಡೋಣ ಬನ್ನಿ ಎಂದ
ಹುಡುಗಿ: ಬರ್ತ್ ಡೇ ಬೇಡ ಅಂದರೆ ಬೇಡ ಎಂದಳು
ಒಳ್ಳೆ ಐಲು ಹುಡುಗಿಯ ಸಹವಾಸವಾಯಿತು ಎಂದುಕೊಂಡವನಿಗೆ ಅವಳ ಕಣ್ಣುಗಳು ಬಹಳ ಹತ್ತಿರದವು ಎಂದೆನ್ನಿಸಿದವು. ನೋಡಿದರೆ ಎಲ್ಲೋ ಕಳೆದು ಹೋಗುವ; ಸೂರ್ಯನ ಕುಳಿಯ ಹಾಗೆ ಎಲ್ಲವನ್ನೂ ತನ್ನೆಡೆಗೆ ಸೆಳೆದುಕೊಳ್ಳುವ ಹಾಗೆ ಇದ್ದವು ಆ ಕಣ್ಣುಗಳು !


ಅದಕ್ಕೆ ಅವಳು ಸ್ಯಾನಿಟೈಸ್ ಮಾಡಿಕೊಳ್ಳದೆ ನನ್ನ ಮುಟ್ಟಬೇಡಿ ಎಂದಳು

ಇನ್ನೇನೂ ನಡೀರಿ ಹೋಗೋಣ ಮದುವೆ ಮಾತುಕತೆಗೆ ಮತ್ತೆ ಬರೋಣ ಅಂದಾಗ "ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ " ಎಂಬ ರಿಂಗಟೋನ್ ಕೇಳಿಸಿತು ತೆಗೆದು ನೋಡಿದರೆ ಸಮಯ ಬೆಳಗಿನ 8 ಗಂಟೆ. ಲಾಗಿನ್ ಆಗೋಲ್ವಾ ಎಂಬ ಅಮ್ಮನ ಕೂಗಿಗೆ ಎದ್ದು ಲ್ಯಾಪ್ಟಾಪ್ ಮುಂದೆ ಕುಳಿತನು.

which girl is an inspiration for this article Amar?
ReplyDeleteAngel
Delete