Thursday, September 15, 2022

ಪರಿಧಿ

 

ಜೊತೆಗೆ ಯಾರು ಇರದ ಕಾರಣ ಹತ್ತಿರದ ಬಾರ್ ನಲ್ಲಿ ನಾನು ಒಬ್ಬನೇ  ಕುಳಿತು ಕುಡಿಯುತಿದ್ದೆ. ನನ್ನ ಪಕ್ಕದ ಟೇಬಲ್ನಲ್ಲಿ 50 ವರ್ಷ ಮೀರಿದ ನಾಲ್ಕು - ಐದು ಜನ ಅಂಕಲ್ಗಳು ಕುಳಿತ್ತಿದ್ದಾರೆ.ಅವರ ಟೇಬಲ್ನಲ್ಲಿ ಅರ್ಧ ಖಾಲಿಯಾದ ಕರಿ ನಾಯಿ ಮತ್ತು ತುಂಬಿರುವ ಎಂಟು ಗಂಟೆ ಇದೆ.  ಅವರ ಮಾತುಕಥೆಯ ಮಧ್ಯದಲ್ಲಿ ಅವರಲ್ಲಿ ಒಬ್ಬರು ಪಕ್ಕದಲ್ಲಿದ್ದ ಇನ್ನೊಬರ ಬೆನ್ನಿಗೆ ಐಸ್ ಕ್ಯೂಬ್ ಅನ್ನು ಹಾಕಿ ಮಜ ತೆಗೆದು ಕೊಳ್ಳುತ್ತಿದ್ದಾರೆ 😀😄.

 ಎಷ್ಟೊಂದು ಮಜವಾಗಿದೆ ಇವರ ದುನಿಯಾ ಅಂದುಕೊಂಡೆ. ಅಷ್ಟರಲ್ಲಿ ಒಬ್ಬ ತನ್ನ ದಿನಚರಿಯ ಬಗ್ಗೆ ಜೊತೆಗಿದ್ದವರ ಜೊತೆ ಹೇಳುತ್ತಾ ಇದ್ದ  " ಇವತ್ತು ಮೀಟಿಂಗ್ ನ ಮದ್ಯದಲ್ಲಿ ಅವನ ಚೊಟ್ಟ ಮುಖ ನೋಡಿದೆ ಅದರಿಂದ ದಿನವೆಲ್ಲ ಹಾಳಾಯ್ತು " ಅಂದ. 


ಇಲ್ಲಿನ ಸರ್ವರ್ ಗಳೆಲ್ಲ ಸೂಪರ್ ಅಂದ್ರೆ ಸೂಪರ್ ಯಾಕೆಂದ್ರೆ ಈಗ ಸರ್ವರ್  ಒಬ್ಬನು, ನಾನು ತಿನ್ನದೇ ಇದ್ದ ಈರುಳ್ಳಿ ಬೋಂಡ ಮತ್ತು ಚಿಕನ್ ಕೆಬಾಬ್ ಅನ್ನು ತಟ್ಟೆಯಿಂದ ಮುಚ್ಚಿಟ್ಟ.

ಇದು ದೊಡ್ಡ ವಿಷಯವಲ್ಲ ಆದರೆ ಬಾರಿ ಖುಷಿ ಕೊಡುವ ವಿಷಯ. ಇಷ್ಟೊಂದು ಅಕ್ಕರೆಯನ್ನು ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಸಿಗುವುದು ಕೂಡ ಅಪರೂಪ. 

ಕಡೆಯ ಇನ್ನೊಂದು ಟೇಬಲ್ನಲ್ಲಿ ಒಂದು ಗುಂಪಿನಲ್ಲಿ ಆಕಸ್ಮಿಕ ಗಾಯನ ನಡೆಯುತಿತ್ತು, ಅವರು ಮೈನೆ ಪ್ಯಾರ್ ಕೀಯ ಅನ್ನುವ ಹಿಂದಿ ಚಿತ್ರದ ಮೇರೇ ರಂಗ್ ಮೇ ರಂಗನೇವಾಲಿ" ಹಾಡನ್ನು ಹಾಡುತ್ತ ಇದ್ದರು ಕೆಲವರಂತೂ ಫುಲ್ ಜೋಶ ನಲ್ಲಿ ಇದ್ದರು ಅಂತ ಕಾಣಿಸ್ತಾ ಇತ್ತು ಯಾಕಂದರೆ " ಮೇರೇ ಸವಾಲೊಂಕ ಜವಾಬ್ ದೊ !! ದೋನ !!! " ಅನ್ನೋ ಸಾಲನ್ನ ಒತ್ತಿ ಹಾಡುತ್ತಾ ಇದ್ದರು. 

ಇನ್ನೊಂದು ಟೇಬಲ್ನಲ್ಲಿ ಇಬ್ಬರು ಗೆಳೆಯರು ಕುಳಿತಿದ್ದರು. ಮದ್ಯ ಕುಡಿದು ಸ್ವಲ್ಪ ಹೊತ್ತಿನ ಬಳಿಕ ಒಬ್ಬ ಅಳುತ್ತ ಇದ್ದ, ಇನ್ನೊಬ್ಬ ಅವನಿಗೆ ಯಾಕೆ ಅಂತ ಕೇಳಿದಾಗ ಅದಕ್ಕೆ ಅವನು ನಾನು ಚಿಕ್ಕಮಗಳೂರಿಗೆ ಹೋಗುವುದಿಲ್ಲ ಅಲ್ಲಿಗೆ ಹೋದರೆ ನನ್ನ ಗೆಳತಿ ನನಗೆ ಹೆದರಿಸ್ತಾಳೆ. ಇಲ್ಲೇ ಇರ್ತೀನಿ ಅಂತ ಇನ್ನು ಅಳು ಜೋರು ಮಾಡಿದ.  
ಅದಕ್ಕೆ ಅವನ ಗೆಳೆಯ ಹೇಳಿದ ನೀನು ಚಿಕ್ಕಮಗಳೂರಿಗೆ ಹೋಗೋದು ರಜಾ ಬಂ ಮೇಲೆ ಆದರೆ ನಾನು ಮನೆಗೆ ಹೇಗೆ ಹೋಗೋದು ಅಂತ ಹೇಳು. ಕೊನೆಯ ಸರಿ ಕುಡಿದು ಹೋದಾಗ ನಮ್ಮಮ್ಮ ಪೊರಕೆ ತೆಗೆದುಕೊಂಡು ಬಡಿದಿದ್ದರು ಅದಕ್ಕೆ ಇವತ್ತು ನಿನ್ನ ರೂಮಿನಲ್ಲೇ ಮಲಗ್ತೀನಿ ಆಯ್ತಾ ಅಂದ. 

ನನ್ನ ಎಡ ಭಾಗದ ಟೇಬಲ್ನಲ್ಲಿ ಒಬ್ಬ ತನ್ನ ನಾಲ್ಕನೆಯ ಸಿಗರೇಟ್ ಅನ್ನು ಬಾಯಿಗೆ ಇತ್ತು ಬೆಂಕಿ ತಾಗಿಸ್ತಾ ಇದ್ದ ಅವನ ಜೊತೆ ಇಬ್ಬರಿದ್ದರು. ಬಹುಶ ಇದು ನಾನು ಕೆಲಸ ಬಿಡುವ ತನಕ ನನ್ನನ್ನು ಬಿಡುವುದಿಲ್ಲ ಅನಿಸುತ್ತೆ ಅಂದ. ಅದಕ್ಕೆ ಇನ್ನೊಬ್ಬ ಅಲ್ಲಿಯ ತನಕ ನೀನೆ ಇರುವುದಿಲ್ಲ ಬಿಡು; ನೀನು ಸಿಗರೇಟ್ ಗೆ ಹೊಗೆ ಹಾಕಿದ್ದಿಯ ಅದು ನಿನಗೆ ಖಂಡಿತವಾಗಿ ಹೊಗೆ ಹಾಕೆ-ಹಾಕುತ್ತೆ ಬಿಡು ಅಂದ. 

ಅಷ್ಟ್ರಲ್ಲಿ ಅಂಕಲ್ ಗಳ ಟೇಬಲ್ ಗೆ ಬಿಲ್ ಬಂದಿತು, ಎಲ್ಲ ನಾನು ಕೊಡ್ತೀನಿ ನಾನು ಕೊಡ್ತೀನಿ ಅಂತ ಕಿತ್ತಾಡ್ತಾ ಇರಬೇಕಾದ್ರೆ ಸರ್ವರ್ ಬಿಲ್ ಅನ್ನು ದಿನಾ ಬರುವ ಅಂಕಲ್ ಕೈಗೆ ಕೊಟ್ಟ. ಬೇರೆಯವರು ಕೇಳಿದಾಗ ಯಾವುತ್ತೋ ಒಮ್ಮೆ ಬರುವ ನೀವು ನೆಂಟರು ಅಂದ. 

ಸರಿ, ಎರಡು ಬಾಟಲಿ ಕುಡಿದ ನಂತರ ಶೌಚಾಲಯ ಕೆ ಹೋಗೋಣ ಎಂದು ಎದ್ದು ಹೋದೆ, ಅಲ್ಲಿ ನೋಡಿದರೆ ಒಬ್ಬ ಅಂಕಲ್ ಕ್ಯೂ ನಲ್ಲಿ ನಿಂತಿದ್ದರು, ಎಷ್ಟು ಹೊತ್ತಾದರೂ ಶೌಚಾಲಯದ ಬಾಗಿಲು ತೆರೆಯಲೇ ಇಲ್ಲ. ಬಾಗಿಲು ತಟ್ಟಲು ಹೋದರೆ ಬಾಗಿಲು ತೆಗೆದು ಕೊಳ್ತು ನೋಡಿದರೆ ಒಳಗಡೆ ಯಾರು ಇಲ್ಲ😁. ಯಾರೋ ಪುಣ್ಯಾತ್ಮ ಬಾಗಿಲು ಹಾಕಿ ಹೋಗಿದಾನೆ ಅಷ್ಟೇ. 

ಸರ್ವರ್ ಬಂದು ಕೊನೆಯ ಆರ್ಡರ್ ಹೇಳಿ ಸಮಯವಾಯ್ತು ಅಂದ ಅದಕ್ಕೆ ನಾನು ನನ್ನ ಕೊನೆಯ ಆರ್ಡರ್ ಮಾಡಿ ಅರ್ಧ ಗಂಟೆ ಆಯ್ತು, ದಾಲ್ ಖಿಚಡಿ ಕೊಡು ಅಂದೆ ಅಷ್ಟ್ರಲ್ಲಿ ಲೈಟ್ಗಳು ಒಂದೊಂದಾಗಿ ಆಫ್ ಆಯಿತು. ನಾನು ನನ್ನ ಮೊಬೈಲ್ ನ ಸ್ಕ್ರೀನ್ ನೋಡ್ತಾ ಖಿಚಡಿ ತಿಂದ ಇದ್ದೆ. ಕೇವಲ ನಿಜ ಹೇಳಿದಕ್ಕೆ ನನ್ನ ಜೊತೆ ಕೊಪಿಸ್ಕೊಂಡು ಇನ್ನು ಕ್ಷಮಿಸದೇ ಇರುವ ಸ್ನೇಹಿ* ಗೆ ಕ್ಷಮೆಯಾ ಧರಿತ್ರಿ ಎಂದು ಹೇಗೆ ಹೇಳುವುದು ಎಂದುಕೊಂಡು ಗ್ಲಾಸ್ ಅನ್ನು ಖಾಲಿ ಮಾಡಿದೆ. 

ಅಷ್ಟ್ರಲ್ಲಿ ಟೇಬಲ್ನಲ್ಲಿ ಬಿಲ್ಲು ಬಂದಿತ್ತು, ಅದನ್ನು ತೆಗೆದು ನೋಡಿ ಜೊತೆಗೆ ಸ್ವಲ್ಪ ದಕ್ಷಿಣೆ ಇಟ್ಟು ಎದ್ದು ಹೊರಗೆ ಬಂದೆ. ಅಷ್ಟರಲ್ಲಿ ಮಳೆ ಶುರುವಾಯ್ತು ಓಡಿ ಓಡಿ ಮನೆ ಸೇರಿಕೊಂಡೆ. 

ನಿದ್ದೆ ಬರದೇ ಇದುದ್ದರಿಂದ ಎದ್ದು ಕಂಪ್ಯೂಟರ್ ಬಳಿ ಕುಳಿತು ಈ ಲೇಖನ ನಿಮಗಾಗಿ ಬರೆದೆ. ಆದರೆ  "ನನ್ನ ಬಾಳ ಪುಟದಲಿ ಬರೆದಿದ್ದು" ಬೇರೆ ಯಾರೋ . 

                                               🙏🙏🙏🙏🙏🙏🙏🙏🙏

2 comments:

ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...